ಸಮಗ್ರ ನ್ಯೂಸ್ : ಜಮ್ಮು-ಕಾಶ್ಮೀರದ ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯಲ್ಲಿ ಪ್ರಬಲವಾದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸಕಾಲಿಕ ಪತ್ತೆಯೊಂದಿಗೆ ದೊಡ್ಡ ದುರಂತವನ್ನು ತಪ್ಪಿಸಲಾಗಿದೆ.ಬಾರಾಮುಲ್ಲಾ ಜಿಲ್ಲೆಯ ಪಟ್ಟನ್ ಪ್ರದೇಶದ ಪಲ್ಲಲ್ಲಾನ್ ಎಂಬಲ್ಲಿ ಹೆದ್ದಾರಿ ರಸ್ತೆಯ ಪಕ್ಕದಲ್ಲಿ ಪೊಲೀಸರು ಹಾಗೂ ಭದ್ರತಾ ಪಡೆಗಳು ಗಸ್ತು ತಿರುಗುತ್ತಿದ್ದಾಗ ಅನುಮಾನಾಸ್ಪದ ವಸ್ತುವೊಂದನ್ನು ಗುರುತಿಸಿದ್ದಾರೆ.
ಪರಿಶೀಲನೆ ನಡೆಸಿದಾಗ ಶಂಕಾಸ್ಪದ ವಸ್ತು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಎಂಬುದ ದೃಢವಾಗಿದೆ. ಇದೀಗ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿದ್ದು, ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ದಿದ್ದಾರೆ.ಬಾಂಬ್ ನಿಷ್ಕ್ರಿಯ ದಳವು ನಿಯಂತ್ರಿತ ಸ್ಫೋಟದಲ್ಲಿ ವಸ್ತುವನ್ನು ನಾಶಪಡಿಸಿದೆ, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.