ಮಾಣಿ: ಜೋಕಾಲಿಯಲ್ಲಿ ಸಿಲುಕಿ ಶಾಲಾ ಬಾಲಕಿ ದಾರುಣ ಸಾವು

ಸಮಗ್ರ ನ್ಯೂಸ್: ಜೋಕಾಲಿಯಲ್ಲಿ ಸಿಲುಕಿ ಪುಟ್ಟ ಬಾಲಕಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕು ಮಾಣಿ ಸಮೀಪದ ಪೆರಾಜೆ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಬುಡೋಳಿ ಮಡಲ ನಿವಾಸಿ ಕಿಶೋರ್ ಅವರ ಪುತ್ರಿ ತೀರ್ಥಶ್ರೀ (8) ಜೋಕಾಲಿಗೆ ಬಲಿಯಾದ ಬಾಲಕಿ.

Ad Widget ... ..

ಈಕೆ ಶೇರಾ ಶಾಲೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿ ದುರಂತ ಸಂಭವಿಸಿದೆ. 2 ವರ್ಷದ ಹಿಂದೆ ಇಲ್ಲಿಗೆ ತುಸು ದೂರದ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅನಂತಾಡಿ ಎಂಬಲ್ಲಿ 6ನೇ ತರಗತಿಯ ವಿದ್ಯಾರ್ಥಿನಿ ಇದೇ ರೀತಿ ಜೋಕಾಲಿಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿತ್ತು.

Ad Widget

Leave a Comment

Your email address will not be published. Required fields are marked *