ಸಮಗ್ರ ನ್ಯೂಸ್: ಯುವಕನೋರ್ವ ನಾಗನ ಕಟ್ಟೆಗೆ ಹಾನಿ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಡಿ.5ರಂದು ನಡೆದಿದೆ.
ಮಹಮ್ಮದ್ ಸಲಾಂ ಎನ್ನುವಾತ ನಿನ್ನೆ (ಡಿಸೆಂಬರ್ 04) ರಾತ್ರಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ನಾಗನಕಟ್ಟೆ ನುಗ್ಗಿ ಗೇಟ್ ಹಾಗೂ ಇತರ ಸಾಮಾಗ್ರಿಗಳಿಗೆ ಹಾನಿ ಮಾಡಿದ್ದಾನೆ. ಬಳಿಕ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಮ್ಮದ್ ಸಲಾಂ ಈ ರೀತಿ ಮಾಡುವುದು ಮೊದಲಲ್ಲ. ಇಂಥಹ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.