Ad Widget .

ಮಹಾರಾಷ್ಟ್ರ ಸಿಎಂ ಆಗಿ ಫಡ್ನವೀಸ್ ಪ್ರಮಾಣ | ಗಣ್ಯರ ದಂಡು; ಮಿಂಚಿದ ಪತ್ನಿ ಅಮೃತಾ

ಸಮಗ್ರ ನ್ಯೂಸ್: ಮೂರನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಬಿಜೆಪಿ ಯ ದೇವೇಂದ್ರ ಫಡ್ನವೀಸ್ ಅವರು ಡಿ.5 ರಂದು ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಹಾಗೂ ಎನ್‌ ಡಿ ಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಜರಿದ್ದರು.

Ad Widget . Ad Widget .

ಉದ್ಯಮಿ ಮುಖೇಶ್ ಅಂಬಾನಿ, ಅಂಬಾನಿ ಸೊಸೆ ರಾಧಿಕಾ ಮತ್ತು ಪುತ್ರ ಅನಂತ್ ಅಂಬಾನಿ, ಕುಮಾರಮಂಗಲಂ ಬಿರ್ಲಾ ಹಾಜರಿದ್ದರು. ಬಾಲಿವುಡ್ ತಾರೆಯರಾದ ಶಾರುಕ್ ಖಾನ್, ಸಲ್ಮಾನ್ ಖಾನ್, ರಣಬೀ‌ರ್ ಕಪೂರ್, ರಣವೀರ್ ಸಿಂಗ್, ಮಾಧುರಿ ದೀಕ್ಷಿತ್, ಸಂಜಯ್ ದತ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ಹಾಜರಾಗಿದ್ದರು.

Ad Widget . Ad Widget .

ಮಿಂಚಿದ ದೇವೇಂದ್ರ ಪತ್ನಿ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಅವರ ಪತ್ನಿ ಅಮೃತಾ ಫಡ್ನವೀಸ್ ಎಲ್ಲರ ಗಮನ ಸೆಳೆದಿದ್ದಾರೆ.ಹಳದಿ- ಬಂಗಾರ ಬಣ್ಣದ ಸೀರೆಯುಟ್ಟು ಕಾರ್ಯಕ್ರಮಕ್ಕೆ ಆಗಮಿಸಿದ್ದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇವೇಂದ್ರ ಅವರು ಆರು ಬಾರಿ ಶಾಸಕರಾಗಿ, ಮೂರನೇ ಬಾರಿ ಮುಖ್ಯಮಂತ್ರಿ ಆಗುತ್ತಿರುವುದಕ್ಕೆ ಬಹಳ ಸಂತಸವಾಗಿದೆ. ಅವರ ಜವಾಬ್ದಾರಿ ಕೂಡ ಹೆಚ್ಚಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *