ಸಮಗ್ರ ನ್ಯೂಸ್: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಕರಿಸಿದ ಜುನೈದ್ ಹಾಗು ತೌಶಿಕ್ ಮನೆ ಮೇಲೆ ಬೆಳ್ಳಂಬೆಳಿಗ್ಗೆ ಕೊಡಗಿನಲ್ಲಿ ಎನ್ ಐ ಎ ದಾಳಿ ನಡೆದಿದೆ.
ಮಡಿಕೇರಿಯ ಮುಸ್ತಾಫಾ ಹಾಗು ಸೋಮವಾರಪೇಟೆಯ ಹೊಸತೋಟ ನಿವಾಸಿ ಕರಿಮೆಣಸು ಕಾಫಿ ವ್ಯಾಪಾರೀ ಜುನೈದ್ ಹಾಗು ಚೌಡ್ಲು ಗ್ರಾಮದ ತೌಶಿಕ್ ಮನೆಗೆ ಇಂದು ಮುಂಜಾನೆ ಏಕ ಕಾಲಕ್ಕೆ ದಾಳಿ ನಡೆಸಿದ ಎನ್ ಐಎ ಅಧಿಕಾರಿಗಳು ಸತತ ಮೂರು ಗಂಟೆಗೂ ಕಾಲ ಮನೆಯಲ್ಲಿ ದಾಖಲೆಗಳ ಶೋಧ ಹಾಗು ವಿಚಾರಣೆ ನಡೆಸಿದ್ದಾರೆ.