ಸಮಗ್ರ ನ್ಯೂಸ್: ಮನೆ ಮುಂದೆ ಬೈಕ್ ನಿಲ್ಲಿಸಿ ಒಳಗಡೆ ತೆರಳುತ್ತಿದ್ದವನ ಮೇಲೆ ಹಾಡಹಗಲೇ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು ಚಾಕುವಿಂದ ಇರಿದು ಕೊಲೆ ಮಾಡಿರುವ ಘಟನೆ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ.
ಗರಗ ಗ್ರಾಮದ ಗಿರೀಶ್ ಕರಡಿಗುಡ್ಡ (40) ಕೊಲೆಯಾದವ ಎಂಬುವವರೇ ಹತ್ಯೆಗೀಡಾದವರು.ಮಂಗಳವಾರ ಮಧ್ಯಾಹ್ನ ಗಿರೀಶ್ ತಮ್ಮ ಮನೆ ಮುಂದೆ ಬೈಕ್ ನಿಲ್ಲಿಸಿ ಒಳಹೋಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳು ಗಿರೀಶ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ಘಟನೆ ನಡೆದ ಕೆಲ ಗಂಟೆಗಳ ನಂತರ ಗಿರೀಶ್ ಕೊಲೆಯಾಗಿರುವುದು ಅವರ ಪತ್ನಿಗೆ ಗೊತ್ತಾಗಿದೆ.
ಆ ಕೂಡಲೇ ಅವರು ಗರಗ ಠಾಣೆಗೆ ದೂರು ನೀಡಿದ್ದು, ಸದ್ಯ ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಮತ್ತು ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಹತ್ಯೆ ಮಾಡಿದವರು ಯಾರು? ಯಾವ ಉದ್ದೇಶಕ್ಕಾಗಿ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಗಿರೀಶ್ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ಕೆಲಸ ಹಾಗೂ ಕಾರುಗಳ ಕೊಡಿಸುವ ಮತ್ತು ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.