Ad Widget .

ಟಿಪ್ಪರ್ ಅಡಿ ಸಿಲುಕಿ ಬೈಕ್ ಸವಾರನಿಗೆ ಹೊತ್ತಿಕೊಂಡ ಬೆಂಕಿ

ಸಮಗ್ರ ನ್ಯೂಸ್: ಭೀಕರ ಅಪಘಾತವೊಂದರಲ್ಲಿ ಬೈಕ್ ಸವಾರ ಟಿಪ್ಪರ್ ಅಡಿಗೆ ಸಿಲುಕಿ ಬೆಂಕಿ ಹೊತ್ತಿಕೊಂಡಿರುವಂತಹ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇದರ ಶಾಕಿಂಗ್ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ತೆಲಂಗಾಣದ ನರಸಾಪುರ ಜಂಕ್ಷನ್‌ನಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೈಕ್ ಸವಾರ ದಶರಥ್ ತಿರುವಿನಲ್ಲಿ ಸಾಗುತ್ತಿದ್ದ ವೇಳೆ ಮೊದಲು ಟಿಪ್ಪರ್‌ಗೆ ಡಿಕ್ಕಿಯಾಗಿ ಅದರಡಿ ಸಿಲುಕಿಕೊಂಡಿದ್ದಾರೆ. ಟಿಪ್ಪರ್ ಚಾಲಕ ಮಾತ್ರ ಇದಾವುದೂ ತಿಳಿಯದಂತೆ ಮುಂದೆ ಸಾಗಿದ್ದಾನೆ. ತಕ್ಷಣ ಏಕಾಏಕಿ ಟಿಪ್ಪರ್ ಹಾಗೂ ಬೈಕ್‌ಗೆ ಬೆಂಕಿ ತಗುಲಿದೆ.ಈ ವೇಳೆ ಬೈಕ್‌ ಸವಾರನಿಗೂ ಬೆಂಕಿ ತಗುಲಿದ್ದು, ಸ್ಥಳದಲ್ಲಿದ್ದ ಜನರು ಆತನ ರಕ್ಷಣೆಗೆ ಧಾವಿಸಿದ್ದಾರೆ. ಕೆಲ ಕ್ಷಣಗಳ ವರೆಗೆ ಬೈಕ್ ಸವಾರ ಬೆಂಕಿಯಲ್ಲಿ ಒದ್ದಾಡಿದ್ದು, ಬಳಿಕ ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ವರದಿಗಳ ಪ್ರಕಾರ ಸ್ಥಳೀಯರು ದಶರತ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದೀಗ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ.

Ad Widget . Ad Widget . Ad Widget .

Leave a Comment

Your email address will not be published. Required fields are marked *