Ad Widget .

ಸಣ್ಣ ತಪ್ಪು ಇಲ್ಲದೆ ನಿರರ್ಗಳವಾಗಿ ಸಂವಿಧಾನ ಪೀಠಿಕೆಯನ್ನು ಮಕ್ಕಳಿಗೆ ಹೇಳಿಕೊಟ್ಟ ಪುಟ್ಟ ಬಾಲಕ

ಸಮಗ್ರ ನ್ಯೂಸ್: ಶಾಲೆಯಲ್ಲಿ ಪ್ರಾರ್ಥನೆಯ ವೇಳೆ ಒಂದನೇ ತರಗತಿಯ ಪುಟ್ಟ ಬಾಲಕನೊಬ್ಬ ‘ಭಾರತದ ಸಂವಿಧಾನ ಪೀಠಿಕೆ’ಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಸಣ್ಣ ತಪ್ಪು ಇಲ್ಲದಂತೆ ನಿರರ್ಗಳವಾಗಿ ಹೇಳಿಕೊಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

Ad Widget . Ad Widget .

ಬರೆದುಕೊಂಡು ಓದದೇ, ಪುಸ್ತಕವನ್ನು ನೋಡದೇ, ಸ್ವಲ್ಪವೂ ತೊದಲದೇ ನಿರರ್ಗಳವಾಗಿ, ಏಕಾಗ್ರತೆಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯನ್ನು ಹೇಳಿಕೊಟ್ಟ ರೀತಿ ನಿಜಕ್ಕೂ ನಿಬ್ಬೆರಗಾಗಿಸುತ್ತದೆ. ಬಾಲಕನ ಆತ್ಮವಿಶ್ವಾಸ, ಸ್ಪಷ್ಟ ನುಡಿಗಳು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವಂತಿದೆ.ಭಾರತದ ಸಂವಿಧಾನ ಅಂಗೀಕಾರವಾಗಿ 50 ವರ್ಷಗಳು ಕಳೆದಿವೆ. ನವೆಂಬ‌ರ್ 26ರಂದು ಸಂವಿಧಾನ ದಿನಾಚರಣೆಯನ್ನು ಎಲ್ಲೆಡೆ ಆಚರಸಿಲಾಯಿತು. ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು ಸಂವಿಧಾನದಡಿಯಲ್ಲೇ ನಡೆಯಬೇಕು.

Ad Widget . Ad Widget .

ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ನಮ್ಮ ಸಂವಿಧಾನದ ಬಗ್ಗೆ ಅರಿವಿರಬೇಕು. ಸಂವಿಧಾನದಲ್ಲಿ ಹೇಳಲಾದ ಅಂಶಗಳ ಬಗ್ಗೆ ಮಾಹಿತಿ ಇರಬೇಕು ಎಂಬ ಕಾರಣ ಶಾಲಾ-ಕಾಲೇಜುಗಳಲ್ಲಿ ಸಂವಿಧನ ಪಿಠಿಕೆ ಓದುವುದು ಕಡ್ಡಾಯವಾಗಿದೆ. ಸರ್ಕಾರದ ಆದೇಶದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಪುಟ್ಟ ಬಾಲಕ ಸಂವಿಧಾನ ಪೀಠಿಕೆ ಹೇಳಿಕೊಡುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

Leave a Comment

Your email address will not be published. Required fields are marked *