Ad Widget .

ನೇಸರಗಿ: ಯೋಧ ರಾಜು ಕಡಕೋಳ ನಿಧನ

ಸಮಗ್ರ ನ್ಯೂಸ್: ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮೀಪದ ದೇಶನೂರ ಗ್ರಾಮದ ವೀರಯೋಧ ಹವಾಲ್ದಾರ ರಾಜು ಮಹಾದೇವ ಕಡಕೋಳ (38) ಡಿ. 2ರಂದು ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Ad Widget . Ad Widget .

ಕಳೆದ 15 ವರ್ಷಗಳಿಂದ ಬೆಳಗಾವಿ 115ನೇ ಮಹಾರ್ ರೆಜಿಮೆಂಟ್ ಇನ್‌ಫೆಂಟ್ರಿ ಬಟಾಲಿಯನಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.ಅವರಿಗೆ ಪತ್ನಿ, ಸಹೋದರ, ಸಹೋದರಿಯರು ಇದ್ದಾರೆ.ಪಾರ್ಥಿವ ಶರೀರವನ್ನು ದೇಶನೂರ ಗ್ರಾಮಕ್ಕೆ ಡಿ. 3ರಂದು ಮಧ್ಯಾಹ್ನ ತರಲಾಯಿತು. ಹನುಮಾನ ನಗರದಿಂದ ಮೆರವಣಿಗೆ ನಡೆಯಿತು. ಕರ್ನಲ್ ವಿಕ್ರಂ ಶೆಂಗಾ ಸಂತಲಾ ನೇತೃತ್ವದಲ್ಲಿ ಮಿಲಿಟರಿ ಅಧಿಕಾರಿಗಳು, ಯೋಧರ ಪರೇಡ್ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Ad Widget . Ad Widget .

ಯುವ ಧುರೀಣ ನಾನಾಸಾಹೇಬ ಪಾಟೀಲ, ಉಪತಹಶೀಲ್ದಾರ್ ಬಸವರಾಜ ಹುಬ್ಬಳ್ಳಿ, ಕಂದಾಯ ನಿರೀಕ್ಷಕ ಜಗದೀಶ ಚೂರಿ, ಅಧ್ಯಕ್ಷ ಸುರೇಖಾ ಕೇದಾರಿ, ಪಿಡಿಒ ಮಲ್ಲಪ್ಪ ಬೋರಡ್ಡಿ, ಪಿಕೆಪಿಎಸ್ ಅಧ್ಯಕ್ಷ ಬಿ.ಬಿ. ಕೇದಾರಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀಶೈಲ ಕಮತಗಿ, ಗ್ರಾಮ ಪಂಚಾಯಿತಿ ಸದಸ್ಯ ಅಬ್ಬಾಸ ಪೀರಜಾದೆ, ನೇಸರಗಿ ನಿವೃತ್ತ ಯೋಧರ ಸಂಘದ ಅಧ್ಯಕ್ಷ ಮಲ್ಲಪ್ಪ ಕೇದಾರಿ, ಉಪಾಧ್ಯಕ್ಷ ಎಸ್.ಡಿ. ಕೋಟಗಿ, ನೇಸರಗಿ, ಮಲ್ಲಾಪೂರ, ಮೋಹರೆ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಮಾಜಿ ಸೈನಿಕರು ಅಂತಿಮ ನಮನ ಸಲ್ಲಿಸಿದರು.ನೇಸರಗಿ ಸಮೀಪದ ದೇಶನೂರ ಗ್ರಾಮದ ಯೋಧ ರಾಜು ಮಹಾದೇವ ಕಡಕೋಳ ಅಂತ್ಯಸಂಸ್ಕಾರವನ್ನು ಸಕಲ ಗೌರವಗಳಿಂದ ನೆರವೇರಿಸಲಾಯಿತು.

Leave a Comment

Your email address will not be published. Required fields are marked *