Ad Widget .

ಬೀಚ್‌ನಲ್ಲಿ ಈಜಾಡುತ್ತಿದ್ದ ಮಹಿಳೆಯ ಮೇಲೆ ಏಕಾಏಕಿ ಶಾರ್ಕ್ ಅಟ್ಯಾಕ್

ಸಮಗ್ರ ನ್ಯೂಸ್: ಆರಾಮಾಗಿ ಬೀಚ್‌ನಲ್ಲಿ ಈಜಾಡುತ್ತಿದ್ದ ಮಹಿಳೆ ವೇಳೆ ದೈತ್ಯ ಶಾರ್ಕ್‌ವೊಂದು ಏಕಾಏಕಿ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.ರಜಾ ದಿನಗಳನ್ನು ಕಳೆಯಲೆಂದು ಥೈಲ್ಯಾಂಡ್‌ನ ಫಾಂಗ್ ಎನ್ಸಾನಲ್ಲಿರುವ ಹೋಟೆಲ್‌ಗೆ ಬಂದಿದ್ದ ಜರ್ಮನ್ ಪ್ರವಾಸಿ ಎಲೈ ಮೈಯರ್ ಮೇಲೆ ಶಾರ್ಕ್‌ವೊಂದು ದಾಳಿ ನಡೆಸಿದೆ. ಇದರಿಂದ ಇವರ ಎಡಗಾಲಿಗೆ ಪೆಟ್ಟಾಗಿದ್ದು, ಇವರನ್ನು ಸಮೀಪವಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತಂತೆ. ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Ad Widget . Ad Widget .

ಮೈಯರ್ ತಮ್ಮ ರಜಾದಿನವನ್ನು ಕಳೆಯಲು ಬೀಚ್‌ ಗೆ ಬಂದಿದ್ದರು. ಬೀಚ್‌ನಲ್ಲಿ ಖುಷಿಯಿಂದ ಕಾಲ ಕಳೆಯುತ್ತಿದ್ದ ಈ ದುರ್ಘಟನೆ ಸಂಭವಿಸಿದೆ. ಈವರ ಎಡಗಾಲಿಗೆ ಶಾರ್ಕ್ ಬಾಯಿ ಹಾಕಿದ್ದು ಸುಮಾರು 12 ಇಂಚಿನಷ್ಟು ಆಳವಾದ ಗಾಯವಾಗಿದ್ದು ಶಾರ್ಕ್‌ನ ಹಲ್ಲುಗಳ ಗುರುತು ಸಹ ಇದೆಯಂತೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸುಮಾರು 5 ಅಡಿ ಉದ್ದದ ಶಾರ್ಕ್ ದಾಳಿಯ ನಂತರ ಆಳವಾದ ನೀರಿನಲ್ಲಿ ಹೋಗಿತ್ತಂತೆ.ಮೈಯ‌ರ್ ಅವರು ಶಾರ್ಕ್‌ನಿಂದ ಪಾರಾಗಿ ದಡವನ್ನು ತಲುಪಿದಾಗ ಅವರ ಕಾಲಿನಲ್ಲಿ ರಕ್ತಸೋರಿದೆ. ಇದನ್ನು ಕಂಡ ಅವರು ಸಹಾಯಕ್ಕಾಗಿ ಕಿರುಚಿದ್ದಾರೆ. ಇನ್ನು ಇವರು ಬೀಚ್‌ನಲ್ಲಿ ಆಟವಾಡಲು ಹೋದ ಸ್ಥಳ ತುಂಬಾ ಆಳ ಕೂಡ ಇರಲಿಲ್ಲ. ಸುರಕ್ಷಿತವಾದ ಸ್ಥಳವಾಗಿತ್ತು ಎಂದು ಲೈಫ್ ಗಾರ್ಡ್ ಅತಿತ್ ಪಿನ್ಯೂ ತಿಳಿಸಿದ್ದಾರೆ.

Ad Widget . Ad Widget .

ಥಾಯ್ ನೀರಿನಲ್ಲಿ ಶಾರ್ಕ್‌ಗಳ ಬಗ್ಗೆ ವ್ಯಾಪಕವಾಗಿ ಅಧ್ಯಯನ ಮಾಡಿರುವ ಸಾಗರ ಪರಿಸರ ವ್ಯವಸ್ಥೆಯ ತಜ್ಞ ಥೋನ್ ತಾಮ್ರಂಗ್ನಾವಾವತ್, ಜರ್ಮನ್ ಪ್ರವಾಸಿ ಮೈಯರ್ ಮೇಲಿನ ದಾಳಿಯು ಬುಲ್ ಶಾರ್ಕ್‌ನಿಂದ ಸಂಭವಿಸಿದೆ ಎಂದು ಹೇಳಿದ್ದಾರೆ. ಥೋನ್ ಪ್ರಕಾರ, “ಶಾರ್ಕ್ ಸಮುದ್ರದ ತಳದಲ್ಲಿ ಚಲಿಸುವಾಗ ಮೇಯರ್ ಅವರ ಕಾಲುಗಳನ್ನು ಬೇಟೆ ಎಂದು ತಪ್ಪಾಗಿ ಭಾವಿಸಿ ಕಚ್ಚಿದೆ. ಕೊನೆಗೆ ಇದು ಅರಿವಾಗಿ ಅವರನ್ನು ಬಿಟ್ಟಿರಬೇಕು ಎಂದು ಹೇಳಿದ್ದಾರೆ. ಶಾರ್ಕ್‌ನ ಈ ನಡವಳಿಕೆಯು ಮನುಷ್ಯನನ್ನು ಬೇಟೆಯಾಡುವ ಉದ್ದೇಶವನ್ನು ಹೊಂದಿರಲಿಲ್ಲ ಆದರೆ ತಪ್ಪು ತಿಳುವಳಿಕೆಯಿಂದ ವರ್ತಿಸಿದೆ ಎಂದು ಅವರು ಹೇಳಿದ್ದಾರೆ.”ಅಧಿಕಾರಿಗಳು ಈ ಕುರಿತು ಎಚ್ಚರಿಕೆಗಳನ್ನು ನೀಡಿದ್ದಾರೆ, ಕಡಲತೀರಗಳಲ್ಲಿ ಕೆಂಪು ಧ್ವಜಗಳನ್ನು ಇರಿಸಿದ್ದಾರೆ ಮತ್ತು ಸಂದರ್ಶಕರನ್ನು ರಕ್ಷಿಸಲು ಜೀವರಕ್ಷಕ ಸೇವೆಗಳು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುತ್ತಿದ್ದಾರೆ” ಎಂದು ಥಾಯ್ ಸರ್ಕಾರ ತಿಳಿಸಿದೆ.

Leave a Comment

Your email address will not be published. Required fields are marked *