Ad Widget .

ನಿವೃತ್ತ ನೌಕರನ ಮನೆಗೆ ಬೆಂಕಿ; ಅಗ್ನಿ ನಂದಿಸಲು ಸ್ಥಳಕ್ಕೆ ಬಂದ ಅಗ್ನಿಶಾಮಕದಳಕ್ಕೆ ಕಾದಿತ್ತು ಬಿಗ್ ಶಾಕ್!

ಸಮಗ್ರ ನ್ಯೂಸ್ : ಗ್ವಾಲಿಯರ್ ನಗರದಲ್ಲಿ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದರು, ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಬಂದು ಮನೆ ಡೋರ್ ಮುರಿದು ಬೆಂಕಿ ನಂದಿಸಲು ಮುಂದಾದವರಿಗೆ ಶಾಕ ಕಾದಿತ್ತು.ಗ್ವಾಲಿಯರ್‌ನ ಶಿಂಧೆ ಕಿ ಕಂಟೋನ್ಮಂಟ್‌ನಲ್ಲಿರುವ ಕಾರ್ನಾಕ್ ಆಸ್ಪತ್ರೆ ಬಳಿ ಇರುವ ಕೇದಾ‌ರ್ ರಜಪೂತ್ ಎಂಬ ನಿವೃತ್ತ ಸರ್ಕಾರಿ ನೌಕರನ ಮನೆ ಇದ್ದು, ಮೊನ್ನೆ ಮನೆಯಲ್ಲಿ ಬೆಳಂಬೆಳಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ನಂದಿಸಲು ಜನರು ಸಹ ನೆರವು ನೀಡಿದ್ದರು. ಆದರೆ ಮನೆಯ ಒಳಗೆ ನೋಡಿದಾಗ ಮನೆ ತುಂಬಾ ಕಸ ತುಂಬಿದ್ದು ಅವರಿಗೆ ಶಾಕ್ ನೀಡಿತ್ತು.

Ad Widget . Ad Widget .

ಮನೆಯ ಮಾಲೀಕ, ನಿವೃತ್ತ ನೌಕರರು ಆಗಿರುವ ಕೇದಾರ್ ಜಿ ಎಂಬವರು ಹಲವು ವರ್ಷಗಳಿಂದ ಬೀದಿಗಳಿಂದ ಲೋಡ್ ಗಟ್ಟಲೇ ಕಸವನ್ನುಸಂಗ್ರಹ ಮಾಡ್ತಿದ್ದಾರಂತೆ. ಮೊನ್ನೆ ಇದ್ದಕ್ಕಿದ್ದಂತೆ ಸಂಗ್ರಹಿಸಿದ್ದ ಕಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದರು. ಇದಾದ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದ್ದು, ಆ ವೇಳೆ ಪಾಲಿಕೆ ನೌಕರರು ಅಲ್ಲಿಗೆ ಬಂದಿದ್ದರಂತೆ. ಮನೆಯ ಒಳಗೆ ಹೋದಾಗ ಕಸದ ರಾಶಿ ನೋಡಿ ಅವರು ಕೂಡ ಬೆಚ್ಚಿ ಬಿದಿದ್ದಾರೆ. ಕಸದಿಂದ ಇಡೀ ಮನೆಯ ವಾಸನೆಯಿಂದ ತುಂಬಿಕೊಂಡಿತ್ತಂತೆ. ಕೂಡಲೇ ಅಧಿಕಾರಿಗಳು ಮನೆಯನ್ನು ಕ್ಲೀನ್ ಮಾಡಿದ್ದಾರೆ.ಮನೆಯಲ್ಲಿ ಕಸವನ್ನು ವಾಹನಗಳಿಗೆ ತುಂಬಲು ಬುಲ್ಲೋಜರ್ ಅನ್ನೇ ಸ್ಥಳಕ್ಕೆ ಕರೆತಂದಿದ್ದರು ಎಂದರೆ, ನೀವೇ ಮನೆಯಲ್ಲಿ ಎಷ್ಟು ಕಸ ಇತ್ತು ಊಹೆ ಮಾಡಿಕೊಳ್ಳಬಹುದು.

Ad Widget . Ad Widget .

ಸ್ಥಳೀಯರ ಮಾಹಿತಿಯ ಅನ್ವಯ, ಕೇದಾರ್ ಸಿಂಗ್ ಒಬ್ಬ ನಿವೃತ್ತ ಉದ್ಯೋಗಿಯಾಗಿದ್ದು, ಒಬ್ಬರೇ ಮನೆಯಲ್ಲಿ ವಾಸ್ ಮಾಡುತ್ತಿದ್ದರಂತೆ.ನಿವೃತ್ತಿಯಾದ ಬಳಿಕ ರಸ್ತೆಯಲ್ಲಿ ಹೋಗುವಾಗ ಕಸ, ಹರಿದ ಬಟ್ಟೆ, ಹೊಲಸುಗಳನ್ನು ಮನೆಗೆ ತರುತ್ತಿದ್ದರಂತೆ. ಈ ಬಗ್ಗೆ. 3tm34t ಅಕ್ಕಪಕ್ಕದ ನಿವಾಸಿಗಳು ಹಲವು ಬಾರಿ ಗಲಾಟೆ ಮಾಡಿದ್ದರಂತೆ. ಆದರೂ ಅವರು ಸರಿಯಾಗದ ಕಾರಣ ಸುಮ್ಮನಾಗಿದ್‌ದರಂತೆ. ಇನ್ನು, ಮನೆ ಮಾಲೀಕರ ಆರೋಗ್ಯ ಸ್ಥಿತಿ ಸರಿ ಇಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಪೌರಕಾರ್ಮಿಕರು ದಿನವಿಡಿ ಶ್ರಮವಹಿಸಿ ಮನೆಯಲ್ಲಿದ್ದ ಕಸವನ್ನು ಹೊರ ಹಾಕಿ ಕ್ಲೀನ್ ಮಾಡಿದ್ದಾರೆ.

Leave a Comment

Your email address will not be published. Required fields are marked *