Ad Widget .

ಹಾವೇರಿಯಲ್ಲಿ ಬಾಲಕನ ಅಪಹರಣ ಯತ್ನ; ಸಮಯಪ್ರಜ್ಞೆ ಬಾಲಕ ಬಚಾವ್‌!

ಸಮಗ್ರ ನ್ಯೂಸ್: ಆಟವಾಡುತ್ತಿದ್ದ ಬಾಲಕನನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಲು ಯತ್ನಿಸಿರುವ ಘಟನೆ ಹಾವೇರಿ ನಗರದ ಪುರದ ಓಣಿಯಲ್ಲಿ ಡಿ.1ರಂದು ನಡೆದಿದ್ದು, ಅದೃಷ್ಟವಶಾತ್ ಬಾಲಕ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದಿದ್ದಾನೆ.

Ad Widget . Ad Widget .

ಮೊಹ್ಮದ್ ಅಯಾನ್(12) ಅಪಹರಣಕ್ಕೊಳಗಾಗಿದ್ದ ಬಾಲಕ.ಹಾವೇರಿ ನಗರದ ಪುರದ ಓಣಿ ನಿವಾಸಿ ಮೊಹಮ್ಮದ್ ಅಯಾನ್ ಇಂದು ಸಂಜೆ ಸುಮಾರು 7 ಗಂಟೆಗೆ ಎಂದಿನಂತೆ ಹೊರಗಡೆ ಬಂದಿದ್ದ.ಈ ವೇಳೆ ಮಾರುತಿ ಇಕೋ ವ್ಯಾನ್ ನಲ್ಲಿ ಮಾಸ್ಕ್ ಧರಿಸಿದ್ದ ಅಪಹರಿಸಲು ಬಂದ ನಾಲ್ವರು ಆಗುಂತಕರು. ಬಾಲಕನ್ನು ಹಿಡಿದು ವ್ಯಾನ್‌ಗೆ ತಳ್ಳಿದ್ದಾರೆ. ಪುರದ ಓಣಿಯಿಂದ ಕಿಡ್ನಾಪ್ ಮಾಡಿದ ಬಳಿಕ ಅಲ್ಲಿಂದ ಅಕ್ಕಿಪೇಟೆಗೆ ಕರೆತಂದಿರುವ ದುರುಳರು. ಈ ವೇಳೆ ಅಲ್ಲಿಂದ ಬಿಡಿಸಿಕೊಳ್ಳಲು ಯತ್ನಿಸಿದ ಬಾಲಕನ ಮುಖದ ಭಾಗ, ಗಲ್ಲ ಹಾಗೂ ಬೆನ್ನಿಗೆ ಹಲ್ಲೆ ಮಾಡಿದ್ದಾರೆ.

Ad Widget . Ad Widget .

ಅಷ್ಟರಲ್ಲಿ ಅಪಹರಣಕಾರರಿಗೆ ತುರ್ತು ವಿಸರ್ಜನೆ ಹಿನ್ನೆಲೆ ಮಧ್ಯೆ ವ್ಯಾನ್ ನಿಲ್ಲಿಸಿ ಕೆಳಗಿಳಿದಿದ್ದಾರೆ. ಗಾಡಿ ನಿಲ್ಲಿಸಿ ಡೂರ್ ತೆಗೆದಿದ್ದೇ ತಡ ಅಲ್ಲಿಂದ ತಕ್ಷಣ ಹೊರಕ್ಕೆ ಜಿಗಿದು ತಪ್ಪಿಸಿಕೊಂಡು ಬಂದಿರುವ ಬಾಲಕ.ನಂಬಿಕಸ್ಥರೇ ಮೋಸ ಮಾಡಿದ್ರೆ ಯಾರನ್ನ ನಂಬೋದು? ಬರೋಬ್ಬರಿ 3 ಕೋಟಿ ಮೌಲ್ಯದ ಮೊಬೈಲ್ ಎಗರಿಸಿದ ಭೂಪ! ಬಾಲಕನ ಕಿಡ್ನಾಪ್ ವಿಚಾರ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಜನರು. ಬಾಲಕನ ಮೈಮೇಲೆ ಪೆಟ್ಟು ಬಿದ್ದಿರುವ ಹಿನ್ನೆಲೆ ಅಳುತ್ತಾ ಓಡಿ ಬಂದಿದ್ದಾನೆ. ಈ ಘಟನೆಯಿಂದ ಹಾವೇರಿ ನಿವಾಸಿಗಳಲ್ಲಿ ಮಕ್ಕಳ ಅಪಹರಣಕಾರರ ಆತಂಕ ಮನೆ ಮಾಡಿದೆ.

Leave a Comment

Your email address will not be published. Required fields are marked *