ಬಲೂನ್ ಊದುವಾಗ ಗಂಟಲಲ್ಲಿ ಸಿಲುಕಿ ಬಾಲಕ ಸಾವು

ಸಮಗ್ರ ನ್ಯೂಸ್: ಬಲೂನ್ ಊದುವಾಗ ಗಂಟಲಲ್ಲಿ ಸಿಲುಕಿ ಬಾಲಕ ಸಾವನ್ನಪ್ಪಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ಈ ಒಂದು ದುರ್ಘಟನೆ ನಡೆದಿದೆ. ನವೀನ್ ನಾರಾಯಣ್ ಬೆಳಗಾವ್ಕರ್ (13) ಎನ್ನುವ ಬಾಲಕ ಮೃತ ದುರ್ದೈವಿ ಎಂದು ತಿಳಿದುಬಂದಿದೆ.

Ad Widget ... ..

ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾರಾಯಣ್ ಬೆಳಗಾಂವ್ಕರ್ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮನೆಯಲ್ಲಿ ಬಲೂನ್ ಊದುವಾಗ ಒಮ್ಮೆಲೇ ಗಂಟಲಲ್ಲಿ ಸಿಲುಕಿ ದುರಂತ ಸಂಭವಿಸಿದೆ. ಉಸಿರು ತೆಗೆದುಕೊತ್ತಿರುವಾಗಲೇ ಗಂಟಲಲ್ಲಿ ಬಲೂನ್ ಸಿಲುಕಿದೆ. ಉಸಿರುಗಟ್ಟಿ ನಾರಾಯಣ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

Ad Widget

Leave a Comment

Your email address will not be published. Required fields are marked *