December 2024

ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಆಯ್ಕೆ| ಡಿ.5 ರಂದು ಪ್ರಮಾಣವಚನ ಸ್ವೀಕಾರ

ಸಮಗ್ರ ನ್ಯೂಸ್: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್ ಗುರುವಾರ(ಡಿ.5) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಹಾರಾಷ್ಟ್ರ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಬುಧವಾರ ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ದೇವೇಂದ್ರ ಫಡ್ನವೀಸ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದೆ. ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಫಡ್ನವೀಸ್ ಉಪಸ್ಥಿತರಿದ್ದರು. ಮಹಾರಾಷ್ಟ್ರ ಶಾಸಕಾಂಗ ಪಕ್ಷದ ನಾಯಕನನ್ನು ನೇಮಿಸಲು […]

ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಆಯ್ಕೆ| ಡಿ.5 ರಂದು ಪ್ರಮಾಣವಚನ ಸ್ವೀಕಾರ Read More »

ಮನೆ ಕಟ್ಟಲು ಹಣ ತೆಗೆದುಕೊಂಡು ಬರುತ್ತಿದ್ದ ನಿವೃತ್ತ ಶಿಕ್ಷಕನ ಹತ್ಯೆ| ತಲೆಗೆ ಹೊಡೆದು ಹಣ ದರೋಡೆಗೈದ ಕಿರಾತಕರು

ಸಮಗ್ರ ನ್ಯೂಸ್: ಕನಸಿನ ಮನೆ ಕಟ್ಟುವ ಉದ್ದೇಶಕ್ಕಾಗಿ ಬ್ಯಾಂಕ್‌ನಿಂದ ತಮ್ಮ ನಿವೃತ್ತಿಯ ಹಣವನ್ನು ವಿತ್‌ಡ್ರಾ ಮಾಡಿ ಮರಳುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಹಣವನ್ನು ದೋಚಿದ್ದಾರೆ. ಈ ಕೃತ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಘೋರಘಟ್ಟ ಗ್ರಾಮದ ಬಳಿ ನಡೆದಿದೆ. ನಿವೃತ್ತ ಶಿಕ್ಷಕ ಹನುಮಂತರಾಯಪ್ಪ ಕೊಲೆಗೀಡಾದವರು. ಅವರ ಬಳಿ ಇದ್ದ ಮೂರು ಲಕ್ಷ ರೂ. ಹಣದೊಂದಿಗೆ ಪಾತಕಿಗಳು ಪರಾರಿಯಾಗಿದ್ದಾರೆ. ಹನುಮಂತರಾಯಪ್ಪ ಅವರು ವೃತ್ತಿಯಲ್ಲಿ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದರು. ನಿವೃತ್ತಿಯಿಂದ ಬಂದಿದ್ದ ಹಣವನ್ನು ನೆಲಮಂಗಲದ ಘೋರಘಟ್ಟ ಗ್ರಾಮದ

ಮನೆ ಕಟ್ಟಲು ಹಣ ತೆಗೆದುಕೊಂಡು ಬರುತ್ತಿದ್ದ ನಿವೃತ್ತ ಶಿಕ್ಷಕನ ಹತ್ಯೆ| ತಲೆಗೆ ಹೊಡೆದು ಹಣ ದರೋಡೆಗೈದ ಕಿರಾತಕರು Read More »

ಅಮೃತಸರ: ಅಕಾಲಿದಳ ನಾಯಕ ಸುಖಬೀರ್ ಸಿಂಗ್ ಬಾದಲ್ ಮೇಲೆ‌ ಖಲಿಸ್ತಾನಿ ಬೆಂಬಲಿಗರಿಂದ ಫೈರಿಂಗ್

ಸಮಗ್ರ ನ್ಯೂಸ್: ಅಮೃತಸರದ ಗೋಲ್ಡನ್ ಟೆಂಪಲ್ ಪ್ರವೇಶದ್ವಾರದಲ್ಲಿ ಅಕಾಲಿದಳದ ನಾಯಕ ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡಿನ ದಾಳಿನಡೆಸಲಾಗಿದ್ದು, ಜನರು ಆರೋಪಿಗಳನ್ನು ಹಿಡಿದಿದ್ದಾರೆ. ಪಂಜಾಬ್‌ನ ಅಮೃತಸರದ ಗೋಲ್ಡನ್ ಟೆಂಪಲ್‌ನ ಪ್ರವೇಶ ದ್ವಾರದಲ್ಲಿ ಶಿರೋಮಣಿ ಅಕಾಲಿದಳದ ನಾಯಕ ಸುಖಬೀರ್ ಸಿಂಗ್ ಬಾದಲ್ ಮೇಲೆ ಖಲಿಸ್ತಾನಿ ಬೆಂಬಲಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಅಮೃತಸರ: ಅಕಾಲಿದಳ ನಾಯಕ ಸುಖಬೀರ್ ಸಿಂಗ್ ಬಾದಲ್ ಮೇಲೆ‌ ಖಲಿಸ್ತಾನಿ ಬೆಂಬಲಿಗರಿಂದ ಫೈರಿಂಗ್ Read More »

ಹವಾಮಾನ ಸಮಾಚಾರ| ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ಕರಾವಳಿ ಸೇರಿದಂತೆ 10 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಮತ್ತು ಮಳೆನಾಡು ಜಿಲ್ಲೆಗಳಲ್ಲಿ ಇಂದು (ಡಿ.4) ಕೂಡ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರು, ದಕ್ಷಿಣ ಕನ್ನಡ ಸೇರಿ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಅನ್ನು ಹವಾಮಾನ ಇಲಾಖೆ ಘೋಷಿಸಿದೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಮಂಡ್ಯ, ಮೈಸೂರು, ತುಮಕೂರು, ರಾಮನಗರ, ಬೆಂಗಳೂರು ನಗರ, ಕೋಲಾರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದ್ದು, ಈ ಜಿಲ್ಲೆಗಳಲ್ಲಿ ವ್ಯಾಪಕ

ಹವಾಮಾನ ಸಮಾಚಾರ| ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ಕರಾವಳಿ ಸೇರಿದಂತೆ 10 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ Read More »

ಸಾರಿಗೆ ನಿಗಮಗಳ ಎಲ್ಲಾ ಬಸ್ ಗಳಿಗೂ ವಿಸ್ತರಣೆಯಾದ ಕ್ಯೂಆರ್ ಕೋಡ್| UPI ಪಾವತಿಗೆ KSRTC ರೆಡಿ

ಸಮಗ್ರ ನ್ಯೂಸ್: ಇನ್ನು ಮುಂದೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಜತೆ ಚಿಲ್ಲರೆಗಾಗಿ ಜಗಳ ಮಾಡಬೇಕಿಲ್ಲ! ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಬಹುತೇಕ ಎಲ್ಲ ಕೆಎಸ್​ಆರ್​​ಟಿಸಿ ಬಸ್​ಗಳಿಗೂ ಇದೀಗ ವಿಸ್ತರಣೆಯಾಗಿದ್ದು, ಯುಪಿಐ ಆಯಪ್ ಮೂಲಕವೇ ಟಿಕೆಟ್ ಹಣ ಪಾವತಿ ಮಾಡಬಹುದಾಗಿದೆ. ಸುಮಾರು 9,000 ಬಸ್‌ಗಳಲ್ಲಿ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಕೆಎಸ್​ಆರ್​​ಟಿಸಿ ಮೂಲಗಳು ತಿಳಿಸಿವೆ. ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆಯನ್ನು ನವೆಂಬರ್ 6 ರಂದು ಕೆಎಸ್​ಆರ್​​ಟಿಸಿ ಬಸ್​​ಗಳಲ್ಲಿ ಆರಂಭಿಸಲಾಗಿತ್ತು. ಸದ್ಯ ನಿಗಮದ ಎಲ್ಲಾ 8,941

ಸಾರಿಗೆ ನಿಗಮಗಳ ಎಲ್ಲಾ ಬಸ್ ಗಳಿಗೂ ವಿಸ್ತರಣೆಯಾದ ಕ್ಯೂಆರ್ ಕೋಡ್| UPI ಪಾವತಿಗೆ KSRTC ರೆಡಿ Read More »

ಸಣ್ಣ ತಪ್ಪು ಇಲ್ಲದೆ ನಿರರ್ಗಳವಾಗಿ ಸಂವಿಧಾನ ಪೀಠಿಕೆಯನ್ನು ಮಕ್ಕಳಿಗೆ ಹೇಳಿಕೊಟ್ಟ ಪುಟ್ಟ ಬಾಲಕ

ಸಮಗ್ರ ನ್ಯೂಸ್: ಶಾಲೆಯಲ್ಲಿ ಪ್ರಾರ್ಥನೆಯ ವೇಳೆ ಒಂದನೇ ತರಗತಿಯ ಪುಟ್ಟ ಬಾಲಕನೊಬ್ಬ ‘ಭಾರತದ ಸಂವಿಧಾನ ಪೀಠಿಕೆ’ಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಸಣ್ಣ ತಪ್ಪು ಇಲ್ಲದಂತೆ ನಿರರ್ಗಳವಾಗಿ ಹೇಳಿಕೊಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಬರೆದುಕೊಂಡು ಓದದೇ, ಪುಸ್ತಕವನ್ನು ನೋಡದೇ, ಸ್ವಲ್ಪವೂ ತೊದಲದೇ ನಿರರ್ಗಳವಾಗಿ, ಏಕಾಗ್ರತೆಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯನ್ನು ಹೇಳಿಕೊಟ್ಟ ರೀತಿ ನಿಜಕ್ಕೂ ನಿಬ್ಬೆರಗಾಗಿಸುತ್ತದೆ. ಬಾಲಕನ ಆತ್ಮವಿಶ್ವಾಸ, ಸ್ಪಷ್ಟ ನುಡಿಗಳು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವಂತಿದೆ.ಭಾರತದ ಸಂವಿಧಾನ ಅಂಗೀಕಾರವಾಗಿ 50 ವರ್ಷಗಳು ಕಳೆದಿವೆ. ನವೆಂಬ‌ರ್ 26ರಂದು ಸಂವಿಧಾನ

ಸಣ್ಣ ತಪ್ಪು ಇಲ್ಲದೆ ನಿರರ್ಗಳವಾಗಿ ಸಂವಿಧಾನ ಪೀಠಿಕೆಯನ್ನು ಮಕ್ಕಳಿಗೆ ಹೇಳಿಕೊಟ್ಟ ಪುಟ್ಟ ಬಾಲಕ Read More »

ನೇಸರಗಿ: ಯೋಧ ರಾಜು ಕಡಕೋಳ ನಿಧನ

ಸಮಗ್ರ ನ್ಯೂಸ್: ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮೀಪದ ದೇಶನೂರ ಗ್ರಾಮದ ವೀರಯೋಧ ಹವಾಲ್ದಾರ ರಾಜು ಮಹಾದೇವ ಕಡಕೋಳ (38) ಡಿ. 2ರಂದು ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ 15 ವರ್ಷಗಳಿಂದ ಬೆಳಗಾವಿ 115ನೇ ಮಹಾರ್ ರೆಜಿಮೆಂಟ್ ಇನ್‌ಫೆಂಟ್ರಿ ಬಟಾಲಿಯನಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.ಅವರಿಗೆ ಪತ್ನಿ, ಸಹೋದರ, ಸಹೋದರಿಯರು ಇದ್ದಾರೆ.ಪಾರ್ಥಿವ ಶರೀರವನ್ನು ದೇಶನೂರ ಗ್ರಾಮಕ್ಕೆ ಡಿ. 3ರಂದು ಮಧ್ಯಾಹ್ನ ತರಲಾಯಿತು. ಹನುಮಾನ ನಗರದಿಂದ ಮೆರವಣಿಗೆ ನಡೆಯಿತು. ಕರ್ನಲ್ ವಿಕ್ರಂ ಶೆಂಗಾ ಸಂತಲಾ ನೇತೃತ್ವದಲ್ಲಿ ಮಿಲಿಟರಿ ಅಧಿಕಾರಿಗಳು, ಯೋಧರ ಪರೇಡ್

ನೇಸರಗಿ: ಯೋಧ ರಾಜು ಕಡಕೋಳ ನಿಧನ Read More »

ಮನೆಯ ಮೇಲೆ ಬಂಡೆ ಬಿದ್ದು ಐದು ಮಕ್ಕಳು 7 ಮಂದಿ ಸಾವು : ಸಿಎಂ ಪರಿಹಾರ ಘೋಷಣೆ

ಸಮಗ್ರ ನ್ಯೂಸ್: ಡಿ.3ರಂದು ಜಿಲ್ಲೆಯ ಅಣ್ಣಾಮಲೈಯಾರ್‌ನಲ್ಲಿ ಮಳೆಯಿಂದ ಬೆಟ್ಟದಿಂದ ಬಂಡೆಗಳು ಮನೆ ಮೇಲೆ ಬಿದ್ದು ಐವರು ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಧಾರಾಕಾರ ಮಳೆಗೆ ಗುಡ್ಡದ ತುದಿಯಿಂದ ಬಂಡೆಯೊಂದು ಉರುಳಿಬಿಂದು ವಿಒಸಿ ನಗರದಲ್ಲಿ ವಸತಿ ಕಟ್ಟಡ ಮೇಲೆ ಬಿದ್ದು ಅದರಡಿ 7 ಮಂದಿ ಹೂತುಹೋದರು. ಎನ್‌ಡಿಆರ್‌ಎಫ್‌ ತಂಡ, ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ

ಮನೆಯ ಮೇಲೆ ಬಂಡೆ ಬಿದ್ದು ಐದು ಮಕ್ಕಳು 7 ಮಂದಿ ಸಾವು : ಸಿಎಂ ಪರಿಹಾರ ಘೋಷಣೆ Read More »

ಬಸ್‌ನಲ್ಲಿ ಸೀಟಿಗಾಗಿ ಜಗಳ : ಯುವಕರನ್ನು ಕರೆಸಿ ಹೊಡೆಸಿದ ಮುಸ್ಲಿಂ ಮಹಿಳೆಯರು ..!

ಸಮಗ್ರ ನ್ಯೂಸ್: ಬಸ್‌ನಲ್ಲಿ ಸೀಟಿಗಾಗಿ ಜಗಳ ನಡೆದಿದ್ದು. ಗಂಡ ಹೆಂಡತಿ ಮತ್ತು ಇಬ್ಬರು ಮುಸ್ಲಿಂ ಮಹಿಳೆಯರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು ಮುಸ್ಲಿಂ ಮಹಿಳೆಯರು ತಮ್ಮ ಮನೆಯವರಿಗೆ ಕರೆ ಮಾಡಿ ಯುವಕರನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ ಎಂದು ಮಾಹಿತಿ ದೊರೆತಿದೆ. ಈ ಘಟನೆ ಬೆಳಗಾವಿ ಜಿಲ್ಲೆಯ, ಹುಕ್ಕೇರಿ ತಾಲೂಕಿನ, ಮಸರಗುಪ್ಪಿ ಕ್ರಾಸ್ ಬಳಿ ನಡೆದಿದೆ. ವಿಷಯ ತಿಳಿದ ಕೂಡಲೆ ಸಿನಿಮಾ ಶೈಲಿಯಲ್ಲಿ ಸುಮಾರು 10 ಮುಸ್ಲಿಂ ಯುವಕರು ಬಸ್‌ನ್ನು ಹಿಂಬಾಲಿಸಿಕೊಂಡು ಬಂದಿದ್ದು. ಬೈಕ್‌ನಲ್ಲಿ ಹಿಂಬಾಲಿಸಿಕೊಂಡು

ಬಸ್‌ನಲ್ಲಿ ಸೀಟಿಗಾಗಿ ಜಗಳ : ಯುವಕರನ್ನು ಕರೆಸಿ ಹೊಡೆಸಿದ ಮುಸ್ಲಿಂ ಮಹಿಳೆಯರು ..! Read More »

ಬೀಚ್‌ನಲ್ಲಿ ಈಜಾಡುತ್ತಿದ್ದ ಮಹಿಳೆಯ ಮೇಲೆ ಏಕಾಏಕಿ ಶಾರ್ಕ್ ಅಟ್ಯಾಕ್

ಸಮಗ್ರ ನ್ಯೂಸ್: ಆರಾಮಾಗಿ ಬೀಚ್‌ನಲ್ಲಿ ಈಜಾಡುತ್ತಿದ್ದ ಮಹಿಳೆ ವೇಳೆ ದೈತ್ಯ ಶಾರ್ಕ್‌ವೊಂದು ಏಕಾಏಕಿ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.ರಜಾ ದಿನಗಳನ್ನು ಕಳೆಯಲೆಂದು ಥೈಲ್ಯಾಂಡ್‌ನ ಫಾಂಗ್ ಎನ್ಸಾನಲ್ಲಿರುವ ಹೋಟೆಲ್‌ಗೆ ಬಂದಿದ್ದ ಜರ್ಮನ್ ಪ್ರವಾಸಿ ಎಲೈ ಮೈಯರ್ ಮೇಲೆ ಶಾರ್ಕ್‌ವೊಂದು ದಾಳಿ ನಡೆಸಿದೆ. ಇದರಿಂದ ಇವರ ಎಡಗಾಲಿಗೆ ಪೆಟ್ಟಾಗಿದ್ದು, ಇವರನ್ನು ಸಮೀಪವಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತಂತೆ. ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೈಯರ್ ತಮ್ಮ ರಜಾದಿನವನ್ನು ಕಳೆಯಲು ಬೀಚ್‌ ಗೆ ಬಂದಿದ್ದರು. ಬೀಚ್‌ನಲ್ಲಿ ಖುಷಿಯಿಂದ ಕಾಲ ಕಳೆಯುತ್ತಿದ್ದ ಈ

ಬೀಚ್‌ನಲ್ಲಿ ಈಜಾಡುತ್ತಿದ್ದ ಮಹಿಳೆಯ ಮೇಲೆ ಏಕಾಏಕಿ ಶಾರ್ಕ್ ಅಟ್ಯಾಕ್ Read More »