November 2024

ರಾಷ್ಟ ರಾಜಧಾನಿಯಲ್ಲಿ ‘ನಂದಿನಿ’| ಕೆಎಂಎಫ್ ನ ಉತ್ಪನ್ನಗಳು ಇಂದಿನಿಂದ ನವದೆಹಲಿಯಲ್ಲೂ ಮಾರಾಟ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಮನೆ ಮಾತಾಗಿರುವ ಕೆಎಂಎಫ್‌ನ ‘ನಂದಿನಿ’ ಬ್ರಾಂಡ್ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿ ನವದೆಹಲಿಗೆ ಹೊರಟಿವೆ. ಕರ್ನಾಟಕ ಹಾಲು ಒಕ್ಕೂಟ, ನಂದಿನಿ ಬ್ರಾಂಡ್ ತನ್ನ ಡೈರಿ ಉತ್ಪನ್ನಗಳ ಮಾರಾಟದ ವ್ಯಾಪ್ತಿಯನ್ನು ನವದೆಹಲಿಗೆ ವಿಸ್ತರಿಸಲು ಸಜ್ಜಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗುರುವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಂದಿನಿ ಹಾಲು ಮತ್ತು ಮೊಸರು ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ. ಈ ಬಗ್ಗೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂಕೆ ಜಗದೀಶ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮಾಧ್ಯಮಗಳಿಗೆ ಮಾಹಿತಿ […]

ರಾಷ್ಟ ರಾಜಧಾನಿಯಲ್ಲಿ ‘ನಂದಿನಿ’| ಕೆಎಂಎಫ್ ನ ಉತ್ಪನ್ನಗಳು ಇಂದಿನಿಂದ ನವದೆಹಲಿಯಲ್ಲೂ ಮಾರಾಟ Read More »

ನೆಟ್ಟಗೆ ಕನ್ನಡ ಬರಲ್ಲ – ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಯಿಂದ ಮುಜುಗರ

ಸಮಗ್ರ ನ್ಯೂಸ್:ವಿಧಾನಸೌಧದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ NEET, JEE, CET ಉಚಿತ ಕೋಚಿಂಗ್ ತರಬೇತಿಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜನೆಗೊಂಡಿತ್ತು.ವಿಡಿಯೋ ಕಾನ್ಸರೆನ್ಸ್ ವೇಳೆ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪಗೆ ವಿದ್ಯಾರ್ಥಿಯೊಬ್ಬ ತೀವ್ರ ಮುಜುಗರ ತಂದೊಡ್ಡಿದ್ದಾನೆ.ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಅನ್ನುವುದರ ಮೂಲಕ ಮಧು ಬಂಗಾರಪ್ಪ ಅವರಿಗೆ ಅವಮಾನ ಮಾಡಿದ್ದ ಘಟನೆ ನ.20ರಂದು ನಡೆದಿದೆ. ವಿಡಿಯೋ ಕಾನ್ಸರೆನ್ಸ್ ಮೂಲಕ ಸಂವಾದ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿ ಭರತ್‌ ಎಂಬಾತ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ

ನೆಟ್ಟಗೆ ಕನ್ನಡ ಬರಲ್ಲ – ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಯಿಂದ ಮುಜುಗರ Read More »

ಸಿಕ್ಕಿ ಬಿದ್ದ ಮಗು ಕಳ್ಳಿ : ಭಿಕ್ಷುಕಿಯಿಂದ ಕಂದನ ರಕ್ಷಣೆ

ಸಮಗ್ರನ್ಯೂಸ್: ಕೆಲವು ದಿನಗಳ ಹಿಂದೆ ಮಲೆಮಹದೇಶ್ವರ ಬೆಟ್ಟದಲ್ಲಿ ತಾಯಿಯಿಂದ ಮಗು ಅಪಹರಿಸಿ ಪರಾರಿಯಾಗಿದ್ದ ಭಿಕ್ಷುಕಿ ಸಿಕ್ಕಿಬಿದ್ದಿದ್ದಾಳೆ. ಚಾಮರಾಜನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ್ದ ಪ್ರಕರಣದಲ್ಲಿ ಆರೋಪಿ ಮಂಡ್ಯದ ಹೊಸಹಳ್ಳಿ ಕಾಲೊನಿಯ ರಾಧಾಳನ್ನು(28) ಪೊಲೀಸರು ಬಂಧಿಸಿದ್ದ ಘಟನೆ ನಡೆದಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಮನಗರ ಮೂಲದ ಅನಿತಾಳನ್ನು ಪರಿಚಯ ಮಾಡಿಕೊಂಡು ಅನಿತಾಳ ಮಗುವನ್ನು ಪಡೆದು ಭಿಕ್ಷೆ ಬೇಡಿ ವಾಪಸ್ ಬರುವುದಾಗಿ ನಂಬಿಸಿ ಪರಾರಿಯಾಗಿದ್ದಳು.ಈ ಕುರಿತು ಅನಿತಾ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಗು

ಸಿಕ್ಕಿ ಬಿದ್ದ ಮಗು ಕಳ್ಳಿ : ಭಿಕ್ಷುಕಿಯಿಂದ ಕಂದನ ರಕ್ಷಣೆ Read More »

ಉಡುಪಿ: ನಿಶ್ಚಿತಾರ್ಥದ ನಂತರ ಆತ್ಮಹತ್ಯೆಗೆ ಶರಣಾದ ಯುವತಿ

ಸಮಗ್ರ ನ್ಯೂಸ್: ಉಡುಪಿ ತಾಲೂಕಿನ ದೆಂದೂರುಕಟ್ಟೆಯ ಇಂದ್ರಾಳಿ ನಿವಾಸಿ ವಿವಾಹ ನಿಶ್ಚಿತಾರ್ಥ ಆಗಿದ್ದ ಕೀರ್ತನಾ ಶೆಟ್ಟಿ ಮನೆಯ ಕೋಣೆಯಲ್ಲಿ ಕುತ್ತಿಗೆಗೆ ಶಾಲು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಕೂಡಲೇ ಮನೆಯವರು ನೋಡಿ ಆಕೆಯನ್ನು ಕಾಪಾಡಿದ್ದರು. ಆದರೆ, ನೇಣು ಬಿಗಿದುಕೊಂಡು ಅರೆ ಪ್ರಜ್ಞಾವಸ್ಥೆ ಸ್ಥಿತಿ ತಲುಪಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನ.17ರಂದು ನಡೆದಿದೆ. ಇನ್ನು ಮೃತ ಯುವತಿ ಕೀರ್ತನಾ ಮಣಿಪುರದ ಬೆಳ್ಳೆ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮೂರು ವರ್ಷಗಳಿಂದ

ಉಡುಪಿ: ನಿಶ್ಚಿತಾರ್ಥದ ನಂತರ ಆತ್ಮಹತ್ಯೆಗೆ ಶರಣಾದ ಯುವತಿ Read More »

ಮಲೆಯಾಳಂ ಚಿತ್ರರಂಗದ ಖ್ಯಾತನಟ ಮೇಘನಾಥನ್ ಇನ್ನಿಲ್ಲ

ಸಮಗ್ರ ನ್ಯೂಸ್: ಖಳನಾಯಕನ ಪಾತ್ರಗಳಿಗೆ ಹೆಸರುವಾಸಿಯಾದ ಮಲಯಾಳಂ ಚಲನಚಿತ್ರ ಮತ್ತು ಸೀರಿಯಲ್ ನಟ ಮೇಘನಾಥನ್ ಗುರುವಾರ(ನ.21) ಮುಂಜಾನೆ ನಿಧನರಾದರು ಎಂದು ಮೂಲಗಳು ತಿಳಿಸಿವೆ. ಮೇಘನಾಥನ್ ಅವರಿಗೆ 60 ವರ್ಷ ವಯಸ್ಸಾಗಿತ್ತು.ಉಸಿರಾಟ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ 2 ಗಂಟೆಗೆ ನಿಧನರಾಗಿದ್ದಾರೆ. ಮೇಘನಾಥನ್ ಖ್ಯಾತ ನಟ ಬಾಲನ್ ಕೆ ನಾಯರ್ ಅವರ ಪುತ್ರರಾಗಿದ್ದಾರೆ. ಅವರು ಚಮಯಂ, ಚೆಂಕೋಲ್ ಮತ್ತು ಈ ಪುಜಯುಮ್ ಕಡನ್ನು ಮುಂತಾದ ಗಮನಾರ್ಹ ಕೃತಿಗಳನ್ನು ಒಳಗೊಂಡಂತೆ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ

ಮಲೆಯಾಳಂ ಚಿತ್ರರಂಗದ ಖ್ಯಾತನಟ ಮೇಘನಾಥನ್ ಇನ್ನಿಲ್ಲ Read More »

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೊ.ರೂ‌ ಚನ್ನಬಸಪ್ಪ ಆಯ್ಕೆ

ಸಮಗ್ರ ನ್ಯೂಸ್: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೊ.ರು.ಚನ್ನಬಸಪ್ಪ ಅವರು ಆಯ್ಕೆಯಾಗಿದ್ದಾರೆ. ಡಿಸೆಂಬರ್.‌20, 21, ಹಾಗೂ 23 ರಂದು ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇದಕ್ಕಾಗಿ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕನ್ನಡ ಸಾಹಿತ್ಯ, ಜಾನಪದ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿರುವ ಗೊ.ರು.ಚನ್ನಬಸಪ್ಪನವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಗೊಂಡೇದಹಳ್ಳಿಯವರು. ಇವರು ಹಿರಿಯ ಜಾನಪದ ತಜ್ಞರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಕ್ರಿಯಾಶೀಲ ಅಧ್ಯಕ್ಷರಾಗಿ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೊ.ರೂ‌ ಚನ್ನಬಸಪ್ಪ ಆಯ್ಕೆ Read More »

ಗೂಗಲ್ ಮ್ಯಾಪ್ ನಂಬಿ ಕೆಸರಲ್ಲಿ ಸಿಲುಕಿಕೊಂಡ ಅಯ್ಯಪ್ಪ‌ ಭಕ್ತ| ಮಂಗಳೂರು ಮೂಲದ‌ ಪರಶುರಾಮ್ ತಮಿಳುನಾಡು ಪೊಲೀಸರ ಸಹಾಯದಿಂದ ಬಚಾವ್

ಸಮಗ್ರ ನ್ಯೂಸ್: ಗೂಗಲ್‌ ಮ್ಯಾಪ್‌ ನೋಡಿ ಪ್ರಯಾಣ ಬೆಳೆಸುವಾಗ ಅವಘಡಗಳು ಸಂಭವಿಸಿದ ಘಟನೆಗಳು ಇತ್ತೀಚೆಗೆ ನಡೆಯುತ್ತಿವೆ. ಅಯ್ಯಪ್ಪ ಭಕ್ತರೊಬ್ಬರು ಗೂಗಲ್​ ಮ್ಯಾಪ್​ ಸಹಾಯದಿಂದ ಮಂಗಳೂರು ತಲುಪಲು ಮುಂದಾಗಿ ಬರೋಬ್ಬರಿ 7 ಗಂಟೆಗಳ ಕಾಲ ಕೆಸರಿನಲ್ಲಿ ಸಿಲುಕಿಕೊಂಡ ಪ್ರಸಂಗವೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಘಟನೆಯ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಬಂದ ಮಂಗಳೂರು ಮೂಲದ ಪರಶುರಾಮರನ್ನು ಭಾರೀ ಅಪಾಯದಿಂದ ಪಾರು ಮಾಡಿದ್ದಾರೆ. ವಿಕಲ ಚೇತನರಾಗಿರುವ ಪರಶುರಾಮ ಅವರು ಅಯ್ಯಪ್ಪನ ದರ್ಶನ ಪಡೆಯಲು ಶಬರಿ ಮಲೆಗೆ ತೆರಳಿದ್ದರು. ವಿಕಲಚೇತನರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದ

ಗೂಗಲ್ ಮ್ಯಾಪ್ ನಂಬಿ ಕೆಸರಲ್ಲಿ ಸಿಲುಕಿಕೊಂಡ ಅಯ್ಯಪ್ಪ‌ ಭಕ್ತ| ಮಂಗಳೂರು ಮೂಲದ‌ ಪರಶುರಾಮ್ ತಮಿಳುನಾಡು ಪೊಲೀಸರ ಸಹಾಯದಿಂದ ಬಚಾವ್ Read More »

ಬೆಳ್ತಂಗಡಿ: ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ‌ಸಂಘದ ಜಿಲ್ಲಾ ಸಮ್ಮೇಳನದ ಲಾಂಛನ ‌ಬಿಡುಗಡೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ 5ನೆ ಜಿಲ್ಲಾ ಸಮ್ಮೇಳನದ ಲಾಂಛನವನ್ನು ಬುಧವಾರ (ನ.20) ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಮತ್ತು ರಾಜ್ಯ ಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಧರ್ಮೋತ್ತಾನ ಟ್ರಸ್ಟ್ ಕಾರ್ಯದರ್ಶಿ ಎ. ವಿ ಶೆಟ್ಟಿ, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ,ಕರ್ನಾಟಕ ರಾಜ್ಯ

ಬೆಳ್ತಂಗಡಿ: ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ‌ಸಂಘದ ಜಿಲ್ಲಾ ಸಮ್ಮೇಳನದ ಲಾಂಛನ ‌ಬಿಡುಗಡೆ Read More »

ಹಿರಿಯ ಪತ್ರಕರ್ತ, ಚಿಂತಕ ವಿ.ಟಿ ರಾಜಶೇಖರ್ ಇನ್ನಿಲ್ಲ

ಸಮಗ್ರ‌ ನ್ಯೂಸ್: ಹಿರಿಯ ಪತ್ರಕರ್ತ, ಚಿಂತಕ , ದಲಿತ್ ವಾಯ್ಸ್ ನಿಯತಕಾಲಿಕದ ಸ್ಥಾಪಕ ಸಂಪಾದಕ ವಿ ಟಿ ರಾಜಶೇಖರ್ (93) ಅವರು ನ.20ರ ಬುಧವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಜುಲೈ 17, 1932 ರಂದು ಉಡುಪಿ ಜಿಲ್ಲೆಯ ಓಂತಿಬೆಟ್ಟುವಿನಲ್ಲಿ ಜನಿಸಿದ ವಿಟಿಆರ್ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅವರು ಬಳಿಕ ದಲಿತರ ಧ್ವನಿಯಾಗಿ ಕೆಲಸ ಮಾಡಲು 1981 ರಲ್ಲಿ ದಲಿತ್ ವಾಯ್ಸ್ ನಿಯತಕಾಲಿಕ ಪ್ರಾರಂಭಿಸಿದ್ದರು. ದೇಶಾದ್ಯಂತ

ಹಿರಿಯ ಪತ್ರಕರ್ತ, ಚಿಂತಕ ವಿ.ಟಿ ರಾಜಶೇಖರ್ ಇನ್ನಿಲ್ಲ Read More »

ಹೆಬ್ರಿ: ನಕ್ಸಲ್ ನಾಯಕ ವಿಕ್ರಂ ಗೌಡ ಅಂತ್ಯಸಂಸ್ಕಾರ

ಸಮಗ್ರ ನ್ಯೂಸ್: ಪೀತಬೈಲ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ ನಕ್ಸಲ್‌ ನಾಯಕ ವಿಕ್ರಂ ಗೌಡನ ಅಂತ್ಯ ಸಂಸ್ಕಾರ ಹುಟ್ಟೂರಾದ ಹೆಬ್ರಿ ತಾಲ್ಲೂಕಿನ ಕೂಡ್ಲುವಿನಲ್ಲಿ ಬುಧವಾರ ನೆರವೇರಿತು. ಹೆಬ್ರಿ ತಾಲ್ಲೂಕಿನ ಕಬ್ಬಿನಾಲೆಯ ಪೀತಬೈಲ್‌ನಲ್ಲಿ ಸೋಮವಾರ ರಾತ್ರಿ ನಕ್ಸಲರು ಮತ್ತು ನಕ್ಸಲ್‌ ನಿಗ್ರಹ ಪಡೆಯ (ಎಎನ್‌ಎಫ್‌) ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡ ಅಲಿಯಾಸ್‌ ಶ್ರೀಕಾಂತ್‌ (46) ಹತ್ಯೆಯಾಗಿದ್ದ. ಹೆಬ್ರಿ ತಾಲ್ಲೂಕಿನ ಸೋಮೇಶ್ವರ ನಾಡ್ಪಾಲು ಗ್ರಾಮದ ಕೂಡ್ಲು ನಿವಾಸಿ ವಿಕ್ರಂ ಗೌಡ ಹಲವು ವರ್ಷಗಳಿಂದ ನಕ್ಸಲ್‌ ಚಟುವಟಿಕೆಗಳಲ್ಲಿ

ಹೆಬ್ರಿ: ನಕ್ಸಲ್ ನಾಯಕ ವಿಕ್ರಂ ಗೌಡ ಅಂತ್ಯಸಂಸ್ಕಾರ Read More »