November 2024

ಗರ್ಭಿಣಿಯರಾದ ಒಂದೇ ಗ್ರಾಮದ 35 ಮದುವೆಯಾಗದ ಕನ್ಯೆಯರು; ಊರಿಗೆ ಊರೇ ಶಾಕ್

ಸಮಗ್ರ ನ್ಯೂಸ್:ಉತ್ತರ ಪ್ರದೇಶದ ವಾರಾಣಸಿಯ ರಮ್ನಾ ಎಂಬ ಗ್ರಾಮದಲ್ಲಿ ಯುವತಿಯರು ಮುಜುಗರಕ್ಕೊಳಗಾಗಿದ್ದು, ಪೋಷಕರು ಒಂದು ಕ್ಷಣ ಆತಂಕಕಕ್ಕೊಳಗಾಗಿದ್ದರು.ಸುಮಾರು 35ಕ್ಕೂ ಅಧಿಕ ಮದುವೆಯಾಗದ ಯುವತಿಯರ ಮೊಬೈಲ್‌ಗೆ ಗರ್ಭಿಣಿ ಮಹಿಳೆ ಎಂಬ ನೋಂದಣಿಯಾದ ದಾಖಲಾತಿಯ ಸಂದೇಶ ಬಂದ ಘಟನೆ ನಡೆದಿದೆ. ಗ್ರಾಮಸ್ಥರ ದೂರಿನ ಮೇರೆಗೆ ಸಂದೇಶ ಕಳುಹಿಸಲು ಕಾರಣನಾದ ಇಲಾಖೆಯ ಅಧಿಕಾರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ವಾರಾಣಸಿಯ ಮುಖ್ಯ ವಿಕಾಸ ಅಧಿಕಾರಿ ಹಿಮಾಂಶು ನಾಗಪಾಲ್ ಘಟನೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ.ರಮ್ಯಾ ಗ್ರಾಮದ ಮದುವೆಯಾಗದ […]

ಗರ್ಭಿಣಿಯರಾದ ಒಂದೇ ಗ್ರಾಮದ 35 ಮದುವೆಯಾಗದ ಕನ್ಯೆಯರು; ಊರಿಗೆ ಊರೇ ಶಾಕ್ Read More »

ಕೇಂದ್ರದಿಂದ ಬೆಂಗಳೂರು – ಮಂಗಳೂರು ಎಕ್ಸ್‌ಪ್ರೆಸ್‌ ಹೈವೇಗೆ ಡಿಪಿಆರ್ ಟೆಂಡರ್ ಆಹ್ವಾನ| ಸಾವಿರಾರು ಮರಗಳ ಆಪೋಷನಕ್ಕೆ ಸಿದ್ಧತೆ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು ಟೆಂಡರ್‌ ಆಹ್ವಾನಿಸಿದೆ. ಇದರಿಂದ ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಈ ಹಿನ್ನೆಲೆಯಲ್ಲಿ ಡಿಪಿಆರ್ ತಯಾರಿಸಲು ಟೆಂಡರ್ ಕರೆಯಲಾಗಿದೆ. ಬೆಂಗಳೂರು ಟು ಮಂಗಳೂರು ಹೋಗಬೇಕು ಅಂದರೆ ಸುಮಾರು 350 ಕಿಮೀ, ಕನಿಷ್ಟ ಆರರಿಂದ ಏಳು ಗಂಟೆಗಳ ಕಾಲ ಬೇಕಾಗುತ್ತದೆ. ಆದರೆ ಈ ಸಮಯವನ್ನು ಕಡಿಮೆ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ಬೆಂಗಳೂರು ಟು ಮಂಗಳೂರು ಎಕ್ಸ್ ಪ್ರೆಸ್ ವೇ ಕಾರಿಡಾರ್ ಮಾಡಲು ಸಿದ್ಧತೆ

ಕೇಂದ್ರದಿಂದ ಬೆಂಗಳೂರು – ಮಂಗಳೂರು ಎಕ್ಸ್‌ಪ್ರೆಸ್‌ ಹೈವೇಗೆ ಡಿಪಿಆರ್ ಟೆಂಡರ್ ಆಹ್ವಾನ| ಸಾವಿರಾರು ಮರಗಳ ಆಪೋಷನಕ್ಕೆ ಸಿದ್ಧತೆ Read More »

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗಡ್ಡ ತೆಗೆಯುವಂತೆ ಸೂಚನೆ: ಮುಸ್ಲಿಂ ವಿದ್ಯಾರ್ಥಿಗಳ ಆಕ್ರೋಶ

ಸಮಗ್ರ ನ್ಯೂಸ್: ಹೊಳೇನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ತಮಗೆ ಗಡ್ಡ ತೆಗೆಯುವಂತೆ ಸೂಚನೆ ನೀಡಿದೆ ಅಂತ 13ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳು ಟ್ವೀಟ್ ಮೂಲಕ ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜಿನ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇದೇ ವಿಚಾರವಾಗಿ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂಘರ್ಷ ತಾರಕಕ್ಕೇರಿದೆ. ಪಿಎಂಎಸ್‌ಎಸ್ ಯೋಜನೆಯಡಿ ನರ್ಸಿಂಗ್ ಓದಲು ಜಮ್ಮು-ಕಾಶ್ಮೀರದಿಂದ 13ಕ್ಕೂ ಹೆಚ್ಚು ಮುಸ್ಲಿಂ ಯುವಕರು ಹೊಳೆನರಸೀಪುರಕ್ಕೆ ಬಂದಿದ್ದಾರೆ. ವಿದ್ಯಾರ್ಥಿಗಳು ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜೀನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗಡ್ಡ ತೆಗೆಯುವಂತೆ ಸೂಚನೆ: ಮುಸ್ಲಿಂ ವಿದ್ಯಾರ್ಥಿಗಳ ಆಕ್ರೋಶ Read More »

ವಕ್ಫ್ ನೋಟಿಸ್ ವಾಪಸ್ ಗೆ ಕರ್ನಾಟಕ ಸರ್ಕಾರ ಅಧಿಕೃತ ಆದೇಶ

ಸಮಗ್ರ ನ್ಯೂಸ್: ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಭುಗಿಲೆದ್ದಿದೆ. ಈ ಮಧ್ಯೆ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್‌ ಪಡೆಯುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ಸೂಚನೆ ನೀಡಿದ್ದು ಅಧಿಕೃತ ಆದೇಶವೂ ಹೊರಬಿದ್ದಿದೆ. ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟಿಸ್‌ಗಳನ್ನು ತಕ್ಷಣ ವಾಪಸ್‌ ಪಡೆಯಿರಿ. ರೈತರ ಸ್ವಾಧೀನದಲ್ಲಿರುವ ಜಮೀನುಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಎಂದು ಸೂಚಿಸಿದ್ದರು. ಕಾನೂನು ಬಾಹಿರವಾಗಿ ಹಾಗೂ ನೋಟಿಸ್‌ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು

ವಕ್ಫ್ ನೋಟಿಸ್ ವಾಪಸ್ ಗೆ ಕರ್ನಾಟಕ ಸರ್ಕಾರ ಅಧಿಕೃತ ಆದೇಶ Read More »

ಮಾಜಿ ಕ್ರಿಕೆಟಿಗನ ಪುತ್ರ ಈಗ ‘ಅವನಲ್ಲ ಅವಳು’! ಲಿಂಗ ಬದಲಾವಣೆ ಮಾಡಿಕೊಂಡ ಆರ್ಯನ್

ಸಮಗ್ರ ನ್ಯೂಸ್: ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಪುತ್ರ ಆರ್ಯನ್ ಬಂಗಾರ್ ಅವರು ಲಿಂಗ ಬದಲಾವಣೆ ಚಿಕಿತ್ಸೆಗೆ ಒಳಗಾಗಿದ್ದು, ತಮ್ಮ ಹೆಸರನ್ನು ಅನಾಯಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. 23 ವರ್ಷದ ಆರ್ಯನ್ ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು, ಭಾರತದ ಮಾಜಿ ನಾಯಕರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿಯೊಂದಿಗೆ ಮತ್ತು ಅವರ ತಂದೆಯೊಂದಿಗೆ ಕೆಲವು ಹಳೆಯ ಚಿತ್ರಗಳನ್ನು ಪೋಸ್ಟ್ ಲಿಂಗ ಬದಲಾವಣೆಯ ಥೆರಪಿಯೊಂದಿಗೆ ಹಂಚಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ 10 ತಿಂಗಳ ನಂತರ, ಕ್ರಿಕೆಟಿಗ

ಮಾಜಿ ಕ್ರಿಕೆಟಿಗನ ಪುತ್ರ ಈಗ ‘ಅವನಲ್ಲ ಅವಳು’! ಲಿಂಗ ಬದಲಾವಣೆ ಮಾಡಿಕೊಂಡ ಆರ್ಯನ್ Read More »

ಚಾರ್ಮಾಡಿ ಘಾಟ್ ರಸ್ತೆ ದ್ವಿಪಥಕ್ಕೆ 343.74 ಕೋಟಿ ಬಿಡುಗಡೆ – ಸಂಸದ ಚೌಟ

ಸಮಗ್ರ ನ್ಯೂಸ್: ಚಾರ್ಮಾಡಿ ಘಾಟಿಯ ದಶಕದ ಸಮಸ್ಯೆಗೆ ಮುಕ್ತಿ ಹಾಡುವ ಕಾಲ ಸನ್ನಿಹಿತವಾಗಿದ್ದು ಘಾಟ್‌ ಹೆದ್ದಾರಿ ದ್ವಿಪಥಗೊಳಿಸಲು ಕೆಂದ್ರ ಸರ್ಕಾರ 343.74 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಮಂಗಳೂರಿನಿಂದ ಮೂಡಿಗೆರೆಯಾಗಿ ತುಮಕೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-73ರ ಚಾರ್ಮಾಡಿ ಘಾಟಿಯಲ್ಲಿ 75 ಕಿ.ಮೀ ನಿಂದ 86.20 ಕಿ.ಮೀ. ಅಂತರದವರೆಗೆ ಅಭಿವೃದ್ದಿಯಾಗಲಿದೆ. ಆ ಮೂಲಕ ಚಾರ್ಮಾಡಿ ಘಾಟ್ ಪ್ರದೇಶದ ರಸ್ತೆಯು ದ್ವಿಪಥವಾಗಿ ಅಗಲೀಕರಣಗೊಳ್ಳಲಿದೆ. ಈ ಹೆದ್ದಾರಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ

ಚಾರ್ಮಾಡಿ ಘಾಟ್ ರಸ್ತೆ ದ್ವಿಪಥಕ್ಕೆ 343.74 ಕೋಟಿ ಬಿಡುಗಡೆ – ಸಂಸದ ಚೌಟ Read More »

ಮೂಲ್ಕಿ: ಪತ್ನಿ, ಮಗುವನ್ನು ಕೊಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪತಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡದ ಮುಲ್ಕಿ ತಾಲೂಕಿನ ಪಕ್ಷಿಕೆರೆ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗನನ್ನು ಕೊಂದು ಬಳಿಕ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಪಕ್ಷಿಕೆರೆ ಗ್ರಾಮದಲ್ಲಿ ಕಾರ್ತಿಕ್ ಭಟ್ (32) ಪತ್ನಿ ಪ್ರಿಯಾಂಕ (28) ಪುತ್ರ ಹೃದಯ್ (4) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ವ್ಯಯಕ್ತಿಕ ಕಾರಣಕ್ಕೆ ಪತ್ನಿ ಮಗನನ್ನು ಕೊಂದು ಕಾರ್ತಿಕ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೊದಲು ಪತ್ನಿ ಪ್ರಿಯಾಂಕ ಹಾಗೂ ಹೃದಯ್

ಮೂಲ್ಕಿ: ಪತ್ನಿ, ಮಗುವನ್ನು ಕೊಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪತಿ Read More »

ಪುತ್ತೂರು: ಗೃಹಲಕ್ಷ್ಮಿ ಹಣದಿಂದ ಪತಿಗೆ ಸ್ಕೂಟರ್ ಕೊಡಿಸಿದ‌ ಪತ್ನಿ

ಸಮಗ್ರ ನ್ಯೂಸ್: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಮಹತ್ವದ ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡಲಾಗುತ್ತಿದೆ. ಈಗಾಗಲೇ ಈ ಯೋಜನೆಯ ಹಣವನ್ನೇ ಬಳಸಿಕೊಂಡು ಮಹಿಳೆಯರು ಗೃಹ ಉಪಯೋಗಿ ವಸ್ತುಗಳು, ತಮ್ಮ ಮಕ್ಕಳಿಗೆ ವಾಹನಗಳನ್ನು ಕೊಡಿಸಿದ ಉದಾಹರಣೆಗಳಿವೆ. ಹಾಗೆಯೇ ಇದೀಗ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಗೃಹಿಣಿಯೊಬ್ಬರು ತನ್ನ ಪತಿಗೆ ಸ್ಕೂಟರ್ ಕೊಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಹಾಗಾದರೆ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಪುತ್ತೂರು: ಗೃಹಲಕ್ಷ್ಮಿ ಹಣದಿಂದ ಪತಿಗೆ ಸ್ಕೂಟರ್ ಕೊಡಿಸಿದ‌ ಪತ್ನಿ Read More »

ಅಜ್ಜಿಗೆ ಕ್ರಿಕೆಟ್‌ ಬ್ಯಾಟ್‌ನಿಂದ ಥಳಿಸಿದ ಮೊಮ್ಮಗ! ರಾಕ್ಷಸ ಎಂದ ನಿಟ್ಟಿಗರು

ಸಮಗ್ರ ನ್ಯೂಸ್:ವೃದ್ಧೆಯೊಬ್ಬಳಿಗೆ ಮೊಮ್ಮಗ ಕ್ರಿಕೆಟ್ ಬ್ಯಾಟ್‌ನಿಂದ ಮನಬಂದಂತೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ರಾಯ್‌ಪುರದ ಪುರಾನಿ ಬಸ್ತಿ ಪೊಲೀಸ್ ಪ್ರದೇಶದ ಅಮರ್ ಪುರಿ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ವೃದ್ಧೆಯ ಮೇಲೆ ಹಲ್ಲೆ ನಡೆಸಿದ ಬಳಿಕ ಯುವಕ ಆಕೆಗೆ ಎಚ್ಚರಿಕೆ ನೀಡಿ ಮತ್ತೆ ಮನೆಯೊಳಗೆ ಹೋಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಯಾವ ಕಾರಣಕ್ಕೆ ವೃದ್ದೆ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆ ನಡೆಸಿರುವುದು ಯಾವಾಗ ಎನ್ನುವ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ

ಅಜ್ಜಿಗೆ ಕ್ರಿಕೆಟ್‌ ಬ್ಯಾಟ್‌ನಿಂದ ಥಳಿಸಿದ ಮೊಮ್ಮಗ! ರಾಕ್ಷಸ ಎಂದ ನಿಟ್ಟಿಗರು Read More »

ಅವಳು ಕ್ಷೇತ್ರಕ್ಕೆ ಬರ್ಲಿ! ಕರಂದ್ಲಾಜೆ ವಿರುದ್ಧ ಏಕವಚನದಲ್ಲೇ ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

ಸಮಗ್ರ ನ್ಯೂಸ್:ಚನ್ನಪಟ್ಟಣ ಉಪಚನಾವಣಾ ಹಿನ್ನೆಲೆ ಕಾಂಗ್ರೆಸ್ ನಾಯಕರು ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಯಶವಂತಪುರದ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖ‌ರ್ ಅವರು ಪ್ರತ್ಯಕ್ಷರಾಗಿದ್ದರು. ಇದೂ ಸಾಕಷ್ಟು ಸದ್ದುಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸೋಮಶೇಖ‌ರ್ ತಾಕತ್ ಇದ್ದರೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ನಿಂದ ಗೆದ್ದು ತೋರಿಸಲಿ ಎನ್ನುವ ಮಾತುಗಳನ್ನು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಎಸ್ ಟಿ ಸೋಮಶೇಖರ್ ಅವರು, ಶೋಭಾ ಕರಂದ್ಲಾಜೆ ಅವರ ವಿರುದ್ಧ ಏಕವಚನದಲ್ಲಿಯೇ ನಾಲಿಗೆ ಹರಿಬಿಟ್ಟಿದ್ದಾರೆ.ತಾಕತ್ ಟೆಸ್ಟ್ ಮಾಡಬೇಕಂದ್ರೆ ಕ್ಷೇತ್ರಕ್ಕೆ ಬರಲಿ ಶೋಭಾ

ಅವಳು ಕ್ಷೇತ್ರಕ್ಕೆ ಬರ್ಲಿ! ಕರಂದ್ಲಾಜೆ ವಿರುದ್ಧ ಏಕವಚನದಲ್ಲೇ ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ Read More »