November 2024

ಸಂಗಾತಿ ಮೇಲೆ ಅತ್ಯಾಚಾರ ಎಸಗಿ 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿದ ದುರುಳ

ಸಮಗ್ರ ನ್ಯೂಸ್:ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ತನ್ನ ಲಿವ್ ಇನ್ ಪಾರ್ಟ್ನರ್ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿರುವ ಘಟನೆ ಜಾರ್ಖಂಡ್‌ನ ಖುಂಟಿ ಜಿಲ್ಲೆಯ ಅರಣ್ಯ ಪ್ರದೇಶವೊಂದರಲ್ಲಿ ನಡೆದಿದ್ದು, ಈ ವಿಚಾರ ನಾಯಿಯ ಮೂಲಕ ಬೆಳಕಿಗೆ ಬಂದಿದೆ. ಘಟನೆ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಕುಮಾರ್, ಬಂಧಿತ ಆರೋಪಿಯನ್ನು ನರೇಶ್ ಭೇಂಗ್ರಾ ಎಂದು ಗುರುತಿಸಲಾಗಿದ್ದು, ಸಂತ್ರಸ್ತೆಯನ್ನು ಗಂಗಿ ಕುಮಾರಿ (24) ಎಂದು ತಿಳಿದು ಬಂದಿದೆ. ಇವರು ಜೋರ್ಡಾಗ್ […]

ಸಂಗಾತಿ ಮೇಲೆ ಅತ್ಯಾಚಾರ ಎಸಗಿ 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿದ ದುರುಳ Read More »

ಕಾಂಗ್ರೆಸ್‌ಗೆ ಯಾವುದೇ ಭವಿಷ್ಯವಿಲ್ಲ, ಎಲ್ಲಾ ಶಾಸಕರು ಬಿಜೆಪಿ ಸೇರಬೇಕು

ಸಮಗ್ರ ನ್ಯೂಸ್: ಮಹಾರಾಷ್ಟ್ರದಲ್ಲಿ ಹೊಸದಾಗಿ ಚುನಾಯಿತರಾಗಿರುವ ಕಾಂಗ್ರೆಸ್‌ನ ಎಲ್ಲಾ 16 ವಿಧಾನಸಭಾ ಸದಸ್ಯರು ಬಿಜೆಪಿಗೆ ಸೇರಬೇಕು, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಭಾರತೀಯ ಜನತಾ ಪಕ್ಷದ ನಾಯಕ ಆಶಿಶ್ ದೇಶ್‌ಮುಖ್ ಅವರು ನ.27 ರಂದು ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 288 ವಿಧಾನಸಭಾ ಸ್ಥಾನಗಳ ಪೈಕಿ 230 ಸ್ಥಾನಗಳನ್ನು ಗೆದ್ದುಕೊಂಡಿದೆ. ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ(ಎಂವಿಎ) ಕೇವಲ 46 ಸ್ಥಾನಗಳನ್ನು ಗೆದ್ದಿದ್ದು, ಎಂವಿಎಯ ಅಂಗವಾಗಿರುವ ಕಾಂಗ್ರೆಸ್

ಕಾಂಗ್ರೆಸ್‌ಗೆ ಯಾವುದೇ ಭವಿಷ್ಯವಿಲ್ಲ, ಎಲ್ಲಾ ಶಾಸಕರು ಬಿಜೆಪಿ ಸೇರಬೇಕು Read More »

ಲೋಕಸಭೆಯಲ್ಲಿ ಸಂಸದರಾಗಿ ಪ್ರಿಯಾಂಕಾ ಗಾಂಧಿ/ ಇಂದು ಪ್ರಮಾಣ ವಚನ ಸ್ವೀಕಾರ

ಸಮಗ್ರ ನ್ಯೂಸ್‌: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದು ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ 4,10,931 ಮತಗಳ ಅಂತರದಿಂದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)ದ ಸತ್ಯನ್ ಮೊಕೇರಿ ಅವರನ್ನು ಪ್ರಿಯಾಂಕಾ ಗಾಂಧಿ ಸೋಲಿಸಿದ್ದಾರೆ. ಕಾಂಗ್ರೆಸ್ ನಾಯಕ ರವೀಂದ್ರ ವಸಂತರಾವ್ ಚವಾಣ್ ಕೂಡ ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾಂದೇಡ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ರವೀಂದ್ರ ವಸಂತರಾವ್ ಚವಾಣ್ 5,86,788 ಮತಗಳನ್ನು ಪಡೆದು ಗೆಲುವು

ಲೋಕಸಭೆಯಲ್ಲಿ ಸಂಸದರಾಗಿ ಪ್ರಿಯಾಂಕಾ ಗಾಂಧಿ/ ಇಂದು ಪ್ರಮಾಣ ವಚನ ಸ್ವೀಕಾರ Read More »

ಕ್ಷಣಮಾತ್ರದಲ್ಲಿ ಮರವೇರಿ ಹುಲಿ ದಾಳಿಯಿಂದ ಪಾರಾದ ಅರಣ್ಯ ಸಿಬ್ಬಂದಿ

ಸಮಗ್ರ ನ್ಯೂಸ್:ಅರಣ್ಯ ಸಿಬ್ಬಂದಿಯೊಬ್ಬರು ಹುಲಿ ದಾಳಿಯಿಂದ ಕ್ಷಣ ಮಾತ್ರದಲ್ಲಿ ಪಾರಾಗಿರುವ ಘಟನೆ ಮಧ್ಯಪ್ರದೇಶ ಸತ್ಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಡೆದಿದೆ. ಕರ್ತವ್ಯ ನಿರ್ವಹಣೆ ವೇಳೆ ಹುಲಿ ಆಗಮನ ಗ್ರಹಿಸಿದ ಇಬ್ಬರು ಸಿಬ್ಬಂದಿಗಳು ಕೂಡಲೇ ಪಕ್ಕದಲ್ಲೇ ಇದ್ದ ಮರವನ್ನು ಏರಿದ್ದಾರೆ.ಈ ವೇಳೆ ಓರ್ವ ಸಿಬ್ಬಂದಿ ತಮ್ಮ ಮೊಬೈಲ್ ನಿಂದ ವಿಡಿಯೋ ರೆಕಾರ್ಡ್ ಮಾಡಿದ್ದು, ಮರವೇರಿದ ಬಳಿಕ ಭಾರಿ ಗಾತ್ರದ ಹುಲಿಯೊಂದು ಅದೇ ಪ್ರದೇಶದಲ್ಲಿ ತನ್ನ ಬೇಟೆ ಅರಸುತ್ತಾ ಬರುತ್ತದೆ.ಕೆಲ ನಿಮಿಷಗಳ ಕಾಲ ಅಲ್ಲಿಯೇ ವಾಸನೆ ಗ್ರಹಿಸುತ್ತಿದ್ದ

ಕ್ಷಣಮಾತ್ರದಲ್ಲಿ ಮರವೇರಿ ಹುಲಿ ದಾಳಿಯಿಂದ ಪಾರಾದ ಅರಣ್ಯ ಸಿಬ್ಬಂದಿ Read More »

ನಿರ್ಗತಿಕ ಕುಟುಂಬಕ್ಕೆ ನೆರವು ನೀಡಿ ಮಾನವೀಯತೆ ತೋರಿದ ಲಕ್ಷ್ಮೀ ಹೆಬ್ಬಾಳ್ಳ‌ರ್

ಸಮಗ್ರ ನ್ಯೂಸ್:ಬೆಳಗಾವಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕಾರ್ಯಕ್ರಮದ ನಿಮಿತ್ಯ ಬುಧವಾರ ವಿಜಯಪುರಕ್ಕೆ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಬೆಳಗಾವಿಗೆ ವಾಪಸ್ ಆಗುವಾಗ ಆಕಸ್ಮಾತಾಗಿ ಕಣ್ಣಿಗೆ ಕಾಣಿಸಿದ ನಿರ್ಗತಿಕ ಕುಟುಂಬವೊಂದಕ್ಕೆ ನೆರವು ನೀಡುವ ಮೂಲಕ ಮಾನವೀಯತೆ ತೋರಿಸಿದ್ದಾರೆ. ಕಾರ್ಯಕ್ರಮ ಮುಗಿಸಿ ಮರಳುವಾಗ ವಿಜಯಪುರ-ಬಾಗಲಕೋಟೆ ಹೆದ್ದಾರಿಯ ಪಕ್ಕ ಹನಗನಹಳ್ಳಿ ಎಂಬಲ್ಲಿ ರಸ್ತೆ ಪಕ್ಕದಲ್ಲಿ ಊಟಕ್ಕೆಂದು ಸಚಿವರು ವಾಹನ ನಿಲ್ಲಿಸಿದರು. ಊಟ ಮಾಡುವಾಗ ಪಕ್ಕದಲ್ಲಿದ್ದ ಸಣ್ಣ ಮನೆಯ ಮುಂದೆ ಅಜ್ಜಿಯೊಬ್ಬಳು ಬಾಟಲಿಗಳಲ್ಲಿ ನೀರು ತುಂಬಿಸಿ ಮನೆಯ

ನಿರ್ಗತಿಕ ಕುಟುಂಬಕ್ಕೆ ನೆರವು ನೀಡಿ ಮಾನವೀಯತೆ ತೋರಿದ ಲಕ್ಷ್ಮೀ ಹೆಬ್ಬಾಳ್ಳ‌ರ್ Read More »

ಅಜೀರ್ ದರ್ಗಾ ‘ಶಿವ ದೇವಾಲಯ’ ಎಂದು ಘೋಷಿಸಿ ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕಾರ; ‘ದರ್ಗಾ ಸಮಿತಿ, ASI’ಗೆ ಸಮನ್ಸ್

ಸಮಗ್ರ ನ್ಯೂಸ್: ಸೂಫಿ ಸಂತ ಸ್ವಾಜಾ ಮೊಯಿನುದ್ದೀನ್ ಚಿಸ್ತಿ ಅಥವಾ ಅಜೀರ್ ಶರೀಫ್ ದರ್ಗಾ ಶಿವ ದೇವಾಲಯ ಎಂದು ಪ್ರತಿಪಾದಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನ ಕೆಳ ನ್ಯಾಯಾಲಯ ನ.20ರಂದು ಸ್ವೀಕರಿಸಿದೆ. ಹಿಂದೂ ಸೇನಾ ಸಲ್ಲಿಸಿದ್ದ ಅರ್ಜಿಯನ್ನ ನ್ಯಾಯಾಲಯ ಸ್ವೀಕರಿಸಿದ್ದು, ಮುಂದಿನ ವಿಚಾರಣೆಯು ಡಿ.20ಕ್ಕೆ ಮುಂದೂಡಿದೆ. ವಿಷ್ಣು ಗುಪ್ತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಅಜೀರ್ ಪಶ್ಚಿಮ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಮನಮೋಹನ್ ಚಂದೇಲ್ ಅವರು ಅದನ್ನು ವಿಚಾರಣೆಗೆ ಸ್ವೀಕರಿಸಿದ್ದಾರೆ. ಈ ವಿಷಯದಲ್ಲಿ ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ

ಅಜೀರ್ ದರ್ಗಾ ‘ಶಿವ ದೇವಾಲಯ’ ಎಂದು ಘೋಷಿಸಿ ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕಾರ; ‘ದರ್ಗಾ ಸಮಿತಿ, ASI’ಗೆ ಸಮನ್ಸ್ Read More »

ಹುತಾತ್ಮ ಜವಾನನ ಪುತ್ರಿ ಮದುವೆಯಲ್ಲಿ ಕನ್ಯಾದಾನ ಮಾಡಿದ CRPF ಯೋಧರು, ಭಾವುಕ ಕ್ಷಣ!

ಸಮಗ್ರ ನ್ಯೂಸ್: ಹರ್ಯಾಣ(ನ.26) ಹುತಾತ್ಮ CRPF CR ಯೋಧ ಸತೀಶ್ ಕುಮಾರ್ ಪುತ್ರಿಯ ವಿವಾದ ಅದ್ದೂರಿಯಾಗಿ ನಡೆದಿದೆ. ಈ ಮದುವೆಯ ವಿಶೇಷ ಏನಂದರೆ ಸಂಪೂರ್ಣ ಮದುವೆ ಜವಾಬ್ದಾರಿಯನ್ನು CRPF ಯೋಧರೆ ನಿರ್ವಹಿಸಿದ್ದಾರೆ. ತಂದೆಯ ಸ್ಥಾನದಲ್ಲಿ ನಿಂತು ಕನ್ಯಾದಾನವನ್ನು ಮಾಡಿದ ವಿಶೇಷ ಭಾವುಕ ಕ್ಷಣದ ಮದುವೆ ಹರ್ಯಾಣದ ಚತ್ತಾರ್ ಗ್ರಾಮದಲ್ಲಿ ನಡೆದಿದೆ. ಸತೀಶ್ ಕುಟುಂಬಸ್ಥರು, ಆಪ್ತರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಇದೇ ವೇಳೆ ಯೋಧರ ಪರ ಜೈಕಾರ ಮೊಳಗಿದೆ.ಚತ್ತಾರ್ ಗ್ರಾಮದ CRPF ಯೋಧ ಸತೀಶ್ ಕುಮಾರ್ 9 ವರ್ಷಗಳ

ಹುತಾತ್ಮ ಜವಾನನ ಪುತ್ರಿ ಮದುವೆಯಲ್ಲಿ ಕನ್ಯಾದಾನ ಮಾಡಿದ CRPF ಯೋಧರು, ಭಾವುಕ ಕ್ಷಣ! Read More »

ಬೆಳ್ತಂಗಡಿ: ಸ್ನಾನಕ್ಕೆಂದು ನದಿಗೆ ಇಳಿದ ಮೂವರು ಯುವಕರು ನೀರು ಪಾಲು

ಸಮಗ್ರ ನ್ಯೂಸ್: ನದಿಯಲ್ಲಿ ಸ್ನಾನ ಮಾಡಲು ಹೋದ ಮೂವರು ಯುವಕರು ನೀರುಪಾಲಾದ ಘಟನೆ ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ಗ್ರಾಮದ ಬರ್ಕಜೆ ಡ್ಯಾಂ ನಲ್ಲಿ ನ 27 ರಂದು ಸಂಜೆ ನಡೆದಿದೆ. ಎಡಪದವಿನ ಲಾರೆನ್ಸ್(20), ಮಡಂತ್ಯಾರಿನ ಸೂರಜ್ (19), ವಗ್ಗದ ಜೈಸನ್(19) ನೀರುಪಾಲಾದವರು. ವೇಣೂರು ಚರ್ಚ್‌ ನ ಕಾರ್ಯಕ್ರಮದ ಹಿನ್ನಲೆಯಲ್ಲಿ ಈ ಮೂವರು ಯುವಕರು ಮೂಡುಕೋಡಿ ವಾಲ್ಟರ್ ಎಂಬವರ ಮನೆಗೆ ಬಂದಿದ್ದರು ಎನ್ನಲಾಗಿದೆ. ಮಧ್ಯಾಹ್ನ ಊಟ ಮುಗಿಸಿ ಮನೆ ಸಮೀಪದ ಕಿಂಡಿ ಅಣೆಕಟ್ಟಿನ ಸಮೀಪಕ್ಕೆ ವೀಕ್ಷಣೆಗೆಂದು ಹೋಗಿದ್ದಾರೆ. ಅಲ್ಲಿ

ಬೆಳ್ತಂಗಡಿ: ಸ್ನಾನಕ್ಕೆಂದು ನದಿಗೆ ಇಳಿದ ಮೂವರು ಯುವಕರು ನೀರು ಪಾಲು Read More »

ಶಬರಿಮಲೆ ಮೆಟ್ಟಿಲ ಮೇಲೆ ಪೊಲೀಸರ ಪೋಸು – ವಿವಾದ ಸೃಷ್ಟಿಸಿದ ಫೋಟೋ!

ಸಮಗ್ರ ನ್ಯೂಸ್ : ಶಬರಿಮಲೆ ದೇವಸ್ಥಾನದ 18 ಮೆಟ್ಟಿಲುಗಳ ಮೇಲೆ ಕೇರಳ ಪೊಲೀಸರು ನಿಂತಿರುವ ಫೋಟೋ ವಿವಾದವನ್ನು ಹುಟ್ಟುಹಾಕಿದೆ.ಶಬರಿಮಲೆ ದೇಗುಲದ 18 ಮೆಟ್ಟಿಲುಗಳ ಮೇಲೆ ಕೇರಳದ 28 ಪೊಲೀಸ್ ಅಧಿಕಾರಿಗಳು ನಿಂತಿದ್ದು, ಗರ್ಭಗುಡಿಯತ್ತ ಬೆನ್ನು ಹಾಕಿ ಪೋಸ್ ನೀಡಿದ್ದಾರೆ. ಮಧ್ಯಾಹ್ನ ದೇವಾಲಯದ ಬಾಗಿಲು ಮುಚ್ಚಿದ ನಂತರ ಫೋಟೋ ತೆಗೆಯಲಾಗಿದೆ ಎನ್ನಲಾಗಿದೆ.ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿವಾದವನ್ನು ಸೃಷ್ಟಿಸಿದೆ. ಭಕ್ತರ ಧಾರ್ಮಿಕ ನಂಬಿಕೆಗೆ ಪೊಲೀಸರು ಅಗೌರವ ತೋರಿದ್ದಾರೆ ಎಂದು ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ತಕ್ಷಣ

ಶಬರಿಮಲೆ ಮೆಟ್ಟಿಲ ಮೇಲೆ ಪೊಲೀಸರ ಪೋಸು – ವಿವಾದ ಸೃಷ್ಟಿಸಿದ ಫೋಟೋ! Read More »

ದರ್ಶನ್ ಕೇಸ್.. ACP ಚಂದನ್ ವಿರುದ್ಧ ತನಿಖೆಗೆ ಕಮಿಷನ‌ರ್ ಸೂಚನೆ

ಸಮಗ್ರ ನ್ಯೂಸ್:ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪದಲ್ಲಿ ತನಿಖಾಧಿಕಾರಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಮನವಿ ಮಾಡಲಾಗಿದೆ. ಪೊಲೀಸ್ ಕಮಿಷನ‌ರ್ ದಯಾನಂದ್ ಭೇಟಿ ಮಾಡಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ. ಎಸಿಪಿ ಚಂದನ್ ಕುಮಾರ್ ವಿರುದ್ಧ ಕಳೆದ ತಿಂಗಳು ದೂರು ನೀಡಿದ್ದರು. ಆದರೆ ಇಲ್ಲೀವರೆಗೂ ಯಾವುದೇ ತನಿಖೆ ನಡೆದಿರಲಿಲ್ಲ. ಇದೀಗ ಮತ್ತೆ ಭೇಟಿ ಮಾಡಿ ಮನವಿ ಮಾಡಿದ್ದು, ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಅವರಿಗೆ ತನಿಖೆ ನಡೆಸಿ ವರದಿ

ದರ್ಶನ್ ಕೇಸ್.. ACP ಚಂದನ್ ವಿರುದ್ಧ ತನಿಖೆಗೆ ಕಮಿಷನ‌ರ್ ಸೂಚನೆ Read More »