November 2024

SBI ಗ್ರಾಹಕರೇ… ವಾಟ್ಸಾಪ್ ನಲ್ಲಿ ಈ ‘ಸಂದೇಶ’ ಬಂದಿದೆಯೇ? ಹಾಗಾದ್ರೆ ಈ ಸ್ಟೋರಿ ಓದಿ…

ಸಮಗ್ರ ನ್ಯೂಸ್: ನೀವು ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ (SBI) ಬಳಕೆದಾರರಾಗಿದ್ದರೆ,ಬ್ಯಾಂಕ್‌ನ ಹೆಸರಿನಲ್ಲಿ ಜನರಿಗೆ ಸಂದೇಶಗಳನ್ನು ಕಳುಹಿಸಲಾಗುತ್ತಿದ್ದು, ಈ ಸಂದೇಶಗಳಲ್ಲಿ ಲಿಂಕ್ ನೀಡಲಾಗುತ್ತದೆ. ಈ ಲಿಂಕ್ ಕ್ಲಿಕ್ ಮಾಡಲು ಬಳಕೆದಾರರಿಗೆ ಆಕರ್ಷಕ ಕೊಡುಗೆಗಳ ಆಮಿಷ ಒಡ್ಡಲಾಗುತ್ತಿದೆ. ಎಸ್‌ಬಿಐ ಬಳಕೆದಾರರಲ್ಲೂ ಇದೇ ರೀತಿಯ ವಂಚನೆ ನಡೆಯುತ್ತಿದೆ. ಈ ಬಗ್ಗೆ ಎಸ್‌ಬಿಐ ಬಳಕೆದಾರರಿಗೆ ಎಚ್ಚರಿಕೆಯನ್ನೂ ನೀಡಿದೆ.ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಈ ಕುರಿತು ಎಚ್ಚರಿಕೆ ನೀಡಿದ್ದು, ಈ ಸಂದೇಶಗಳನ್ನು WhatsApp ಮತ್ತು SMS ಮೂಲಕ ಕಳುಹಿಸಲಾಗುತ್ತಿದೆ. […]

SBI ಗ್ರಾಹಕರೇ… ವಾಟ್ಸಾಪ್ ನಲ್ಲಿ ಈ ‘ಸಂದೇಶ’ ಬಂದಿದೆಯೇ? ಹಾಗಾದ್ರೆ ಈ ಸ್ಟೋರಿ ಓದಿ… Read More »

ಚೂಯಿಂಗ್ ಗಮ್ ನುಂಗಿ ನಾಲ್ಕು ವರ್ಷದ ಮಗು ಸಾವು!

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಕಾಲ್ಪುರದಲ್ಲಿ ನಾಲ್ಕು ವರ್ಷದ ಮಗುವೊಂದು ಚೂಯಿಂಗ್ ಗಮ್ ಅನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ.ರಾಹುಲ್ ಕಶ್ಯಪ್ ಅವರ ಮಗ ಎಂದು ಗುರುತಿಸಲಾದ ಮಗು ನ.03 ರಂದು ಸಂಜೆ ಚೂಯಿಂಗ್ ಗಮ್ ಖರೀದಿಸಿತ್ತು ಎಂದು ವರದಿಯಾಗಿದೆ. ಅದನ್ನು ಸೇವಿಸಿದ ಸ್ವಲ್ಪ ಸಮಯದ ನಂತರ, ಚೂಯಿಂಗ್ ಗಮ್ ಅವನ ಗಂಟಲಿನಲ್ಲಿ ಸಿಲುಕಿಕೊಂಡು, ಉಸಿರಾಟದ ತೊಂದರೆಗೆ ಕಾರಣವಾಯಿತು. ಕುಟುಂಬ ಸದಸ್ಯರು ಚೂಯಿಂಗ್ ಗಮ್ ಅನ್ನು ತೆಗೆಯಲು ಹರಸಾಹಸ ಪಟ್ಟರು, ಆದರೆ ಅದು ಸಿಲುಕಿಕೊಂಡಿತ್ತು. ತಕ್ಷಣವೇ ಹುಡುಗನನ್ನು ಕಾನ್ಸುರದ

ಚೂಯಿಂಗ್ ಗಮ್ ನುಂಗಿ ನಾಲ್ಕು ವರ್ಷದ ಮಗು ಸಾವು! Read More »

ಬೆಂಗಳೂರಲ್ಲಿ 40 ಸಾವಿರ ಲಂಚ ಪಡೆಯುವಾಗ, ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ!

ಸಮಗ್ರ ನ್ಯೂಸ್: 40,000 ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಹಾಯಕ ಡ್ರಗ್ಸ್ ಕಂಟ್ರೋಲ‌ರ್ ಅಧಿಕಾರಿ ಅಜಯ್ ಡಿ.ಶಾ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೊನ್ನೇಲ್ ಮೆಡಿಕಲ್ ಶಾಪ್ ಲೈಸೆನ್ಸ್ ಗೆ ಸುಬ್ರಮಣ್ಯ ಎನ್ನುವವರು ಅರ್ಜಿ ಹಾಕಿದ್ದರು. ಮೆಡಿಕಲ್ ಶಾಪ್ ಗೆ ಲೈಸೆನ್ಸ್ ನೀಡಲು ಲಂಚಕ್ಕೆ ಅಜಯ್ ಡಿಮ್ಯಾಂಡ್ ಮಾಡಿದ್ದರು.ಸುಬ್ರಮಣ್ಯ ಬಳಿ ಕಾರಿನಲ್ಲಿ 40,000 ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್ ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಬೆಂಗಳೂರಲ್ಲಿ 40 ಸಾವಿರ ಲಂಚ ಪಡೆಯುವಾಗ, ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ! Read More »

ಪುತ್ತೂರು: ಭಾರೀ ಗಾತ್ರದ ಹೆಬ್ಬಾವು ಹಿಡಿದ ಮಹಿಳೆ| ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ ಶೋಭಕ್ಕ!!

ಸಮಗ್ರ ನ್ಯೂಸ್: ಮಹಿಳೆಯೊಬ್ಬರು ಭಾರೀ ಗಾತ್ರದ ಹೆಬ್ಬಾವೊಂದನ್ನು ಹಿಡಿಯುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಪುತ್ತೂರು ತಾಲೂಕಿನ ಕೆಯ್ಯೂರು ಪರಿಸರದಲ್ಲಿ ಈ ಘಟನೆ ನಡೆದಿದ್ದು, ಶೋಬಾ ಎನ್ನುವ ಮಹಿಳೆ ಅತ್ಯಂತ ಚಾಣಾಕ್ಷ ರೀತಿಯಲ್ಲಿ ದೊಡ್ಡ ಗಾತ್ರದ ಹೆಬ್ಬಾವನ್ನು ಹಿಡಿದು ಸಾಗಿಸಿದ್ದಾರೆ. ರಸ್ತೆ ಬದಿಯಲ್ಲಿ ಈ ಹೆಬ್ಬಾವು ಕೋಳಿಯೊಂದನ್ನು ಹಿಡಿದು ತಿನ್ನುವುದನ್ನು ಗಮನಿಸಿದ ಸಾರ್ವಜನಿಕರು ಹೆಬ್ಬಾವಿನಿಂದ ಕೋಳಿಯನ್ನು ಹೆಬ್ಬಾವಿನಿಂದ ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ‌. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಶೋಭಾ ಹೆಬ್ಬಾವಿನ ಬಾಲವನ್ನು ಹಿಡಿದು ಎಳೆದು,

ಪುತ್ತೂರು: ಭಾರೀ ಗಾತ್ರದ ಹೆಬ್ಬಾವು ಹಿಡಿದ ಮಹಿಳೆ| ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ ಶೋಭಕ್ಕ!! Read More »

ಬೆಳ್ತಂಗಡಿ: ಮಹಿಳೆಯಿಂದ ವಿದ್ಯಾರ್ಥಿಯನ್ನು ಹನಿಟ್ರ್ಯಾಪ್ ಗೆ ಕೆಡವಲು ಯತ್ನ| ಪೊಲೀಸರ ತನಿಖೆಯಿಂದ ಬಚಾವಾದ ವಿದ್ಯಾರ್ಥಿ

ಸಮಗ್ರ ನ್ಯೂಸ್: ಮಹಿಳೆಯೋರ್ವಳು ತನ್ನ ಫೇಸ್‌ಬುಕ್ ಫ್ರೆಂಡ್ಸ್ ಬಳಗದಲ್ಲಿದ್ದ ಹದಿ ಹರೆಯದ ವಿದ್ಯಾರ್ಥಿಯೋರ್ವನನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲೆತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಬೆಳಕಿಗೆ ಬಂದಿದೆ. ಆದರೆ ಪೊಲೀಸ್ ಇಲಾಖಾಧಿಕಾರಿಗಳು ಕಂಗೆಟ್ಟ ವಿದ್ಯಾರ್ಥಿಯನ್ನು ಸಕಾಲಿಕ ಕ್ರಮದಿಂದ ರಕ್ಷಿಸಿದ್ದಾರೆ. ಬೆಳ್ತಂಗಡಿ ನಿವಾಸಿಯಾಗಿರುವ ಕಾಲೇಜು ವಿದ್ಯಾರ್ಥಿಯೋರ್ವನ ಫೇಸ್‌ಬುಕ್ ಸಂಪರ್ಕದಲ್ಲಿದ್ದ ಮಹಿಳೆಯೋರ್ವಳು ಆತ್ಮೀಯತೆಯನ್ನು ಮೂಡಿಸಿ ವಿದ್ಯಾರ್ಥಿಗೆ ವೀಡಿಯೊ ಕರೆ ಮಾಡಿದ್ದಳು. ಕರೆ ಸ್ವೀಕರಿಸಿದ ವಿದ್ಯಾರ್ಥಿಗೆ ತನ್ನ ನಗ್ನ ದೇಹವನ್ನು ಕಾಣಿಸಿ ಆತನ ಭಾವನೆಯನ್ನು ಕೆರಳಿಸಲು ಯತ್ನಿಸಿದ್ದಾಳೆ. ಬಳಿಕ

ಬೆಳ್ತಂಗಡಿ: ಮಹಿಳೆಯಿಂದ ವಿದ್ಯಾರ್ಥಿಯನ್ನು ಹನಿಟ್ರ್ಯಾಪ್ ಗೆ ಕೆಡವಲು ಯತ್ನ| ಪೊಲೀಸರ ತನಿಖೆಯಿಂದ ಬಚಾವಾದ ವಿದ್ಯಾರ್ಥಿ Read More »

ಕಾರ್ಕಳ: ಪ್ರಿಯತಮನ ಜೊತೆ ಸೇರಿ ಪತಿಯ ಕೊಲೆಗೈದ ಪ್ರಕರಣ| ತನಿಖೆಯನ್ನು ಹಳ್ಳ ಹಿಡಿಸಲಾಗುತ್ತಿದೆ ಎಂದು ಮೃತನ ಸಹೋದರ ಆರೋಪ

ಸಮಗ್ರ ನ್ಯೂಸ್: ಕಾರ್ಕಳ ತಾಲೂಕಿನ ಅಜೆಕಾರು ಎಂಬಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಪತ್ನಿಯೇ ಕೊಂದ ಪ್ರಕರಣ ಕೆಲವು ದಿನಗಳ ಹಿಂದೆ ಸಂಭವಿಸಿತ್ತು. ಇದೀಗ ಈ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಇದೇ ವೇಳೆ ತನಿಖೆಯ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಆರೋಪಿ ಆರ್ಥಿಕವಾಗಿ ಪ್ರಬಲನಾಗಿದ್ದು ತನಿಖೆಯನ್ನು ಹಳ್ಳ ಹಿಡಿಸುವ ಕೆಲಸ ನಡೆಯುತ್ತಿದೆ ಎಂದು ಮೃತ ಬಾಲಕೃಷ್ಣ ಪೂಜಾರಿ ಸಹೋದರ ಪ್ರಕಾಶ್‌ ಪೂಜಾರಿ ಗಂಭೀರ ಆರೋಪ ಮಾಡಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಕೃಷ್ಣ ಪೂಜಾರಿ ಸಾವಿಗೂ

ಕಾರ್ಕಳ: ಪ್ರಿಯತಮನ ಜೊತೆ ಸೇರಿ ಪತಿಯ ಕೊಲೆಗೈದ ಪ್ರಕರಣ| ತನಿಖೆಯನ್ನು ಹಳ್ಳ ಹಿಡಿಸಲಾಗುತ್ತಿದೆ ಎಂದು ಮೃತನ ಸಹೋದರ ಆರೋಪ Read More »

ಇಂದು(ನ.05) ಅಮೇರಿಕಾದ ಅಧ್ಯಕ್ಷೀಯ ಚುನಾವಣೆ| ಕಮಲಾ ಹ್ಯಾರೀಸ್- ಟ್ರಂಪ್ ಮಧ್ಯೆ ತೀವ್ರ ಹಣಾಹಣಿ

ಸಮಗ್ರ ನ್ಯೂಸ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮಂಗಳವಾರ (ನ.5) ಮತದಾನ ನಡೆಯಲಿದೆ. ಕಣದಲ್ಲಿ ಐವರು ಅಭ್ಯರ್ಥಿಗಳಿದ್ದರೂ ಹಾಲಿ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಮತ್ತು ಮಾಜಿ ಅಧ್ಯಕ್ಷ, ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಅಮೆರಿಕದ ಜನಗಣತಿ ಬ್ಯೂರೊ ಪ್ರಕಾರ, 15.5 ಕೋಟಿ ಅಮೆರಿಕನ್ನರು ಮತದಾನ ಮಾಡಲು ಅರ್ಹರಾಗಿದ್ದಾರೆ. ನವೆಂಬರ್‌ 2ರವರೆಗೆ 7.5 ಕೋಟಿಗೂ ಹೆಚ್ಚು ಮಂದಿ ಆನ್‌ಲೈನ್‌ (ಮೇಲ್‌-ಇನ್‌ ವೋಟಿಂಗ್) ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಫ್ಲಾರಿಡಾ

ಇಂದು(ನ.05) ಅಮೇರಿಕಾದ ಅಧ್ಯಕ್ಷೀಯ ಚುನಾವಣೆ| ಕಮಲಾ ಹ್ಯಾರೀಸ್- ಟ್ರಂಪ್ ಮಧ್ಯೆ ತೀವ್ರ ಹಣಾಹಣಿ Read More »

ಹಾಸನಾಂಬೆ ದೇವಿಗೆ ಹರಿದು ಬಂದ ದಾಖಲೆ ಮೊತ್ತದ ಕಾಣಿಕೆ| ವರ್ಷಕ್ಕೊಮ್ಮೆ ತೆರೆಯುವ ದೇಗುಲದ ಈ ವರ್ಷದ ಆದಾಯ ಎಷ್ಟು ಗೊತ್ತಾ?

ಸಮಗ್ರ ನ್ಯೂಸ್: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇವಿ ಸನ್ನಿಧಿಗೆ ರಾಜ್ಯ ಸೇರಿದಂತೆ ಹಲವು ಕಡೆಗಳಿಂದ ಆಗಮಿಸುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿರುವುದರಿಂದ ದೇಗುಲದ ಆದಾಯದಲ್ಲೂ ಗಣನೀಯವಾಗಿ ಏರಿಕೆಯಾಗಿದೆ. ಈ ಬಾರಿಯಂತೂ ಹಾಸನಾಂಬೆ ದೇಗುಲದ ಒಟ್ಟು ಆದಾಯ 12.64 ಕೋಟಿ ರೂ.ಗೆ ಏರಿಕೆಯಾಗಿ ಈ ಹಿಂದಿನ ದಾಖಲೆಗಳ ಮುರಿದು ಹೊಸ ದಾಖಲೆಯ ಸೃಷ್ಟಿಸಿದೆ. ಕೊರೊನಾ ನಂತರದ ವರ್ಷಗಳಲ್ಲಿ ದೇವಿಯ ಹಿರಿಮೆ- ಗರಿಮೆ ಹೆಚ್ಚಳದ ಜತೆಗೆ ದೇವಿಯ ದರ್ಶನ ಮಾಡುವ ಭಕ್ತರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಹಾಗೆಯೇ ಭಕ್ತರ

ಹಾಸನಾಂಬೆ ದೇವಿಗೆ ಹರಿದು ಬಂದ ದಾಖಲೆ ಮೊತ್ತದ ಕಾಣಿಕೆ| ವರ್ಷಕ್ಕೊಮ್ಮೆ ತೆರೆಯುವ ದೇಗುಲದ ಈ ವರ್ಷದ ಆದಾಯ ಎಷ್ಟು ಗೊತ್ತಾ? Read More »

ವಾಹನ ಸವಾರರಿಗೆ ಗುಡ್ ನ್ಯೂಸ್..HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ಮತ್ತೆ ಮುಂದಕ್ಕೆ

ಸಮಗ್ರ ನ್ಯೂಸ್: HSRP ನಂಬರ್ ಪ್ಲೇಟ್ ಅಳವಡಿಸಲು ಈಗಾಗಲೇ ರಾಜ್ಯ ‌ಸರ್ಕಾರ ಹಲವು ಬಾರಿ ಗಡುವು ವಿಸ್ತರಣೆ ಮಾಡಿದೆ. ಆದರೂ ವಾಹನ ಮಾಲೀಕರು ತಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಂದಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ನೀಡಿದೆ. ಈ ತಿಂಗಳು ಕೊನೆ ಅಂದರೆ ನವೆಂಬರ್ 30ರವರೆಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸಮಯ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ಅವಧಿ ಮುಗಿದಿದ್ದರೂ ಸಹ ರಾಜ್ಯ ಸರ್ಕಾರ ವಾಹನ ಮಾಲೀಕರಿಗೆ ಮತ್ತೆ

ವಾಹನ ಸವಾರರಿಗೆ ಗುಡ್ ನ್ಯೂಸ್..HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ಮತ್ತೆ ಮುಂದಕ್ಕೆ Read More »

ಮುಡಾ ಹಗರಣ ತನಿಖೆ| ವಿಚಾರಣೆಗೆ ಹಾಜರಾಗಲು ಸಿಎಂಗೆ ನೋಟೀಸ್ ನೀಡಿದ ಲೋಕಾಯುಕ್ತ

ಸಮಗ್ರ ನ್ಯೂಸ್: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಮೈಸೂರು ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ನವೆಂಬರ್ 6ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ನ.6ರಂದು ಮೈಸೂರು ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಈ ಮೂಲಕ 40 ವರ್ಷಗಳ ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ವಿಚಾರಣೆಗೆ ನೋಟಿಸ್ ನೀಡಲಾಗಿದೆ. ಮುಡಾ

ಮುಡಾ ಹಗರಣ ತನಿಖೆ| ವಿಚಾರಣೆಗೆ ಹಾಜರಾಗಲು ಸಿಎಂಗೆ ನೋಟೀಸ್ ನೀಡಿದ ಲೋಕಾಯುಕ್ತ Read More »