ಜಾಲತಾಣಗಳಲ್ಲಿ ವೈರಲ್ ಆದ ಹೆಬ್ಬಾವು ಹಿಡಿದ ಮಹಿಳೆ| ಈ ಗಟ್ಟಿಗಿತ್ತಿ ಶೋಭಾ ಯಾರು ಗೊತ್ತಾ? ಇಲ್ಲಿದೆ ಅವರ ಉರಗ ಪ್ರೇಮದ ಸಂಪೂರ್ಣ ಜರ್ನಿ…
ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಹಿಳೆಯೊಬ್ಬರು ಹಾವು ಹಿಡಿಯುವ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಬೃಹತ್ ಗಾತ್ರದ ಹೆಬ್ಬಾವನ್ನು ಕೈಯಲ್ಲಿ ಹಿಡಿದುಕೊಂಡ ಮಹಿಳೆ ಅದನ್ನು ಗೋಣಿ ಚೀಲದಲ್ಲಿ ತುಂಬಿಸಲು ಅಲ್ಲಿ ನೆರೆದಿದ್ದವರ ನೆರವು ಯಾಚಿಸುವ ವಿಡಿಯೋ ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ. ಸಾಮಾನ್ಯವಾಗಿ ಮಹಿಳೆಯರು ಹಾವು ಕಂಡರೇ ಭಯದಿಂದ ಮಾರುದ್ದ ಓಡುತ್ತಾರೆ ಎನ್ನುವ ಭಾವನೆ ಜನ ಸಾಮಾನ್ಯರಲ್ಲಿ ಇದೆ. ಆದರೇ ಇದಕ್ಕೆ ಅಪವಾದ ಎಂಬಂತೆ ಮಹಿಳೆಯೊಬ್ಬರು ಯಾವುದೇ ಆಳುಕಿಲ್ಲದೇ ಹಾವನ್ನು ಹಿಡಿದಿರುವುದು ಹಾಗೂ ಅಕ್ಕ […]