ಕಡಬ: ನೆರೆಮನೆಯವರೊಂದಿಗೆ ಜಗಳ; ಕೊಲೆಯಲ್ಲಿ ಅಂತ್ಯ
ಸಮಗ್ರ ನ್ಯೂಸ್: ನೆರೆಮನೆಯವರೊಂದಿಗಿನ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಗೋಳಿತ್ತೊಟ್ಟುವಿನಲ್ಲಿ ನಡೆದಿದೆ. ಕಡಬ ತಾಲೂಕು ಗೋಳಿತ್ತೊಟ್ಟು ಗ್ರಾಮದ ಅಲಾಂತಾಯ ನಿವಾಸಿ ವೆಂಕಪ್ಪ ಗೌಡರ ಪುತ್ರ ರಮೇಶ್ (51 ವ) ಕೊಲೆಯಾದವರು. ನೆರೆಮನೆಯ ಸಂಬಂಧಿ ಹರೀಶ ಎಂಬಾತ ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ. ಕೊಲೆಗೆ ಜಾಗದ ತಕರಾರು ಕಾರಣ ಎನ್ನಲಾಗಿದ್ದು ಈ ಬಗ್ಗೆ ಖಚಿತ ಮಾಹಿತಿ ತಿಳಿದಿಲ್ಲ, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ […]
ಕಡಬ: ನೆರೆಮನೆಯವರೊಂದಿಗೆ ಜಗಳ; ಕೊಲೆಯಲ್ಲಿ ಅಂತ್ಯ Read More »