November 2024

ಜಾತ್ರೆಯ ಉಯ್ಯಾಲೆಯ ಮೋಜು ಪ್ರಾಣಕ್ಕೇ ತಂತು ಸಂಚಕಾರ |ಜೋಕಾಲಿಯಲ್ಲಿ ಕೂದಲು ಸಿಕ್ಕಿ ಬಾಲಕಿಯ ನೆತ್ತಿಯೇ ಕಿತ್ತು ಬಂತು

ಸಮಗ್ರ ನ್ಯೂಸ್: ಜಾತ್ರೆಯೊಂದರಲ್ಲಿ 13 ವರ್ಷದ ಬಾಲಕಿಯ ಕೂದಲು ಉಯ್ಯಾಲೆಯಲ್ಲಿ ಸಿಕ್ಕಿ ಬಿದ್ದು, ನೆತ್ತಿಯೇ ಕಿತ್ತು ಬಂದ ಭಯಾನಕ ಘಟನೆ ಉತ್ತರ ಪ್ರದೇಶದ ಕನೌಜ್‌ನಲ್ಲಿನಡೆದಿದೆ. ಸ್ಥಳೀಯರು ಉಯ್ಯಾಲೆ ಚಕ್ರವನ್ನು ನಿಲ್ಲಿಸಲು ಧಾವಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಬಾಲಕಿಯ ಸಂಪೂರ್ಣ ನೆತ್ತಿ ಕಿತ್ತು ಬಂದಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಬಾಲಕಿ ಅನುರಾಧಾ ಕಥೇರಿಯಾ ಕೂದಲು ನೆತ್ತಿ ಸಮೇತ ಕಿತ್ತು ಬಂದ ಬಳಿಕ ಆಕೆ ಮೂರ್ಛ ಹೋಗಿದ್ದಾಳೆ.ಗಂಭೀರ ಸ್ಥಿತಿಯಲ್ಲಿ ಗಾಯಗೊಂಡ ಆಕೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಂತಾಜನಕ ಸ್ಥಿತಿಯಲ್ಲಿದ್ದ […]

ಜಾತ್ರೆಯ ಉಯ್ಯಾಲೆಯ ಮೋಜು ಪ್ರಾಣಕ್ಕೇ ತಂತು ಸಂಚಕಾರ |ಜೋಕಾಲಿಯಲ್ಲಿ ಕೂದಲು ಸಿಕ್ಕಿ ಬಾಲಕಿಯ ನೆತ್ತಿಯೇ ಕಿತ್ತು ಬಂತು Read More »

ಅಪ್ಪ-ಅಮ್ಮ ಕಿಚನ್‌ನಲ್ಲಿ ಕಿತ್ತಾಡ್ತಿದ್ರೆ. ಮಗ ವಿಡಿಯೋ ಗೇಮ್‌ನಲ್ಲಿ ಬ್ಯುಸಿಯಾಗಿದ್ದ; ಮುಂದೆ ನಡೆದಿದ್ದು ಘನಘೋರ ದುರಂತ

ಸಮಗ್ರ ನ್ಯೂಸ್:ಮಗು ಕೋಣೆಯೊಂದರಲ್ಲಿ ವಿಡಿಯೋ ಗೇಮ್ ಆಡುವುದರಲ್ಲಿ ಬ್ಯುಸಿ ಇದ್ದಾಗಲೇ ದಂಪತಿ ಕಿತ್ತಾಡಿಕೊಂಡು, ಪರಸ್ಪರ ಬಡಿದಾಡುಕೊಂಡು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಅಕ್ಟೋಬರ್ 31ರಂದು ವಾಷಿಂಗ್ಟನ್ ನ ಲಾಂಗ್ ವ್ಯೂ ಎಂಬಲ್ಲಿ ನಡೆದಿದೆ. ಅಡುಗೆಮನೆಯಲ್ಲಿ ತನ್ನ ತಂದೆ ತಾಯಿ ಭೀಕರವಾಗಿ ಕಿತ್ತಾಡುತ್ತಿದ್ದರೂ, ಇಯರ್ ಬಡ್ಸ್ ಹಾಕಿಕೊಂಡು ವಿಡಿಯೋ ಗೇಮ್ ಆಡುವುದರಲ್ಲಿ ತಲ್ಲೀನನಾಗಿದ್ದ ಬಾಲಕನಿಗೆ ಇದ್ಯಾವುದರ ಪರಿವೆಯೇ ಇರಲಿಲ್ಲ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.38 ವರ್ಷದ ಜುವಾನೋ ಆಂಡಾನಿಯೋ ಸಾನೆ ಮತ್ತು 39 ವರ್ಷದ ಸೆಸಿಲಿಯಾ ರೊಬೆಲ್ಸ್ ಓಖಾ ಎಂದು

ಅಪ್ಪ-ಅಮ್ಮ ಕಿಚನ್‌ನಲ್ಲಿ ಕಿತ್ತಾಡ್ತಿದ್ರೆ. ಮಗ ವಿಡಿಯೋ ಗೇಮ್‌ನಲ್ಲಿ ಬ್ಯುಸಿಯಾಗಿದ್ದ; ಮುಂದೆ ನಡೆದಿದ್ದು ಘನಘೋರ ದುರಂತ Read More »

ಅಭಿಷೇಕ್ ಅಂಬರೀಶ್ ಮನೆಯಲ್ಲಿ ಸಂಭ್ರಮ..ಗಂಡು ಮಗುವಿಗೆ ಜನ್ಮ ಕೊಟ್ಟ ಅವಿವಾ

ಸಮಗ್ರ ನ್ಯೂಸ್: ಅಭಿಷೇಕ್‌-ಅವಿವಾ ದಂಪತಿಗೆ ಗಂಡು ಮಗು ಜನನವಾಗಿದೆ. ಇಂದು ಬೆಳಗ್ಗೆ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಅವಿವಾ ಜನ್ಮ ನೀಡಿದ್ದಾರೆ. ಮೊಮ್ಮಗನ ಕಂಡು ಮಾಜಿ ಸಂಸದೆ ಸುಮಲತಾ ಅಂಬರೀಶ್‌ ಅವರು ಭಾವುಕರಾಗಿದ್ದಾರೆ. ಮೊಮ್ಮಗನನ್ನು ಎತ್ತಿ ಮುದ್ದಾಡಿದ್ದಾರೆ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನ್ನಡ ನಟ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಅವರು ಜೂನ್‌ 5, 2023ರಂದು ಮದುವೆ ಆಗಿದ್ದರು. ಜೂನ್‌ 7ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಆತರಕ್ಷತೆ ಕಾರ್ಯಕ್ರಮ

ಅಭಿಷೇಕ್ ಅಂಬರೀಶ್ ಮನೆಯಲ್ಲಿ ಸಂಭ್ರಮ..ಗಂಡು ಮಗುವಿಗೆ ಜನ್ಮ ಕೊಟ್ಟ ಅವಿವಾ Read More »

ನಾಳೆ ವಿಧಾನಸಭಾ ಉಪಚುನಾವಣೆ/ ವೇತನ ಸಹಿತ ರಜೆ ಘೋಷಿಸಿದ ಸರ್ಕಾರ

ಸಮಗ್ರ ನ್ಯೂಸ್‌: ನವೆಂಬರ್ 13 ರಂದು (ನಾಳೆ) ನಡೆಯಲಿರುವ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೇತನ ಸಹಿತ ರಜೆ ಘೋಷಿಸಿ ಆದೇಶ ಹೊರಡಿಸಿದೆ. ಈ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅರ್ಹ ಮತದಾರರು, ಶಾಲಾ-ಕಾಲೇಜುಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳು, ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಅರ್ಹ ಮತದಾರರಿಗೆ ರಜೆ ಘೋಷಣೆ ಮಾಡಿದೆ. 83-ಶಿಗಾಂವ್, 95-ಸಂಡೂರು ಮತ್ತು 185-ಚನ್ನಪಟ್ಟಣ ಕ್ಷೇತ್ರಗಳ ಉಪಚುನಾವಣೆಯು ನವೆಂಬರ್ 13, 2024 ರಂದು ಬುಧವಾರ ನಡೆಯಲಿದ್ದು, 500 2500

ನಾಳೆ ವಿಧಾನಸಭಾ ಉಪಚುನಾವಣೆ/ ವೇತನ ಸಹಿತ ರಜೆ ಘೋಷಿಸಿದ ಸರ್ಕಾರ Read More »

ಕಣ್ಣೀರು ತರಿಸುತ್ತಿದೆ ಈರುಳ್ಳಿ/ 70 ರಿಂದ 80 ರೂ.ಗಳಿಗೆ ಏರಿಕೆಯಾದ ಬೆಲೆ

ಸಮಗ್ರ ನ್ಯೂಸ್‌: 40 ರಿಂದ 50 ರೂ.ನಷ್ಟಿದ್ದ ಈರುಳ್ಳಿ ಬೆಲೆ ಸಗಟು ಮಾರುಕಟ್ಟೆಯಲ್ಲಿ 70 ರಿಂದ 80 ರೂ.ಗಳಿಗೆ ಏರಿಕೆಯಾಗಿದ್ದು, ದೆಹಲಿ, ಮುಂಬೈ ಸೇರಿ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಈರುಳ್ಳಿ ಬೆಲೆ ಏರಿಕೆ ರೈತರ ಮೊಗದಲ್ಲಿ ಸಂಸತ ತಂದರೆ, ಮತ್ತೊಂದೆಡೆ ಜನರಿಗೆ ಕಣ್ಣೀರು ತರಿಸುವಂತಾಗಿದೆ. ದೆಹಲಿ ಮತ್ತು ಮುಂಬೈನಂತಹ ಮೆಟ್ರೋ ನಗರಗಳಲ್ಲಿ, ಪ್ರತಿ ಕೆಜಿ ಈರುಳ್ಳಿ ಬೆಲೆ ನವೆಂಬರ್‌ನಲ್ಲಿ 80 ರೂ.ಗಳಿಗೆ ತಲುಪಿದ್ದು, ಇದು ಕಳೆದ 5 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದಂತಾಗಿದೆ. ಈ

ಕಣ್ಣೀರು ತರಿಸುತ್ತಿದೆ ಈರುಳ್ಳಿ/ 70 ರಿಂದ 80 ರೂ.ಗಳಿಗೆ ಏರಿಕೆಯಾದ ಬೆಲೆ Read More »

ಸತ್ಯಜಿತ್‌ ಸುರತ್ಕಲ್ ಗೆ ಮಾತೃವಿಯೋಗ

ಸಮಗ್ರ ನ್ಯೂಸ್: ಹಿಂದೂ ಸಂಘಟನೆ ಮುಖಂಡ ಸತ್ಯಜಿತ್ ಸುರತ್ಕಲ್ ಇವರ ತಾಯಿ ಭಾರತಿ ವಾಸುದೇವ ನಿಧನರಾಗಿದ್ದಾರೆ. ಇವರು ನ.12ರ ಬೆಳಿಗ್ಗೆ ಮೃತ ಹೊಂದಿದ್ದಾರೆ. ಮೃತರು ಪತ್ನಿ ವಾಸುದೇವ, ಪುತ್ರ ಸತ್ಯಜಿತ್ ಸುರತ್ಕಲ್ ಹಾಗೂ ಸಹೋದರ ಸಹೋದರಿಯನ್ನು ಅಗಲಿದ್ದಾರೆ.

ಸತ್ಯಜಿತ್‌ ಸುರತ್ಕಲ್ ಗೆ ಮಾತೃವಿಯೋಗ Read More »

ಮಲೆನಾಡಿನಲ್ಲಿ ಮತ್ತೆ ಕೆಂಪುಉಗ್ರರ ಕರಿನೆರಳು| ಕೊಪ್ಪದಲ್ಲಿ ಇಬ್ಬರು ನಕ್ಸಲ್ ಬೆಂಬಲಿತ ಶಂಕಿತರಿಬ್ಬರು ವಶಕ್ಕೆ|ಧರ್ಮಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು

ಚಿಕ್ಕಮಗಳೂರು : ದಶಕಗಳ ಬಳಿಕ ಮಲೆನಾಡಿನಲ್ಲಿ ನಕ್ಸಲರ ಸದ್ದು ಹೆಚ್ಚಾಗಿದೆ ಎನ್ನುವ ಬಗ್ಗೆ ಅಂತಕಕಾರಿ ಮಾಹಿತಿ ಹೊರಬಿದ್ದಿದೆ. 2014 ರ ನಂತರ ಮಲೆನಾಡಿನಲ್ಲಿ ಕೆಂಪು ಉಗ್ರರ ಹೆಜ್ಜೆ ಮತ್ತೆ 2024 ರಲ್ಲಿ ಗುರುತು ಪತ್ತೆಯಾಗಿದೆ. ಮಲೆನಾಡಿನಲ್ಲಿ ಒತ್ತುವರಿ ತೆರವು ಗುಮ್ಮ, ಕಸ್ತೂರಿ ರಂಗ್ ವರದಿ ಭಯದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಗ್ರಾಮಸ್ಥರ ಸಂಪರ್ಕ ಮಾಡುತ್ತಿರುವ ಕೆಂಪು ಉಗ್ರರ ಬಗ್ಗೆ ಪೊಲೀಸರು ಜಾಡು ಹಿಡಿದಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸರು ಹಾಗೂ ಎ.ಎನ್.ಎಫ್ ಪೊಲೀಸರು ನಕ್ಸಲ್ ಬೆಂಬಲಿಗರನ್ನು ದಕ್ಷಿಣ

ಮಲೆನಾಡಿನಲ್ಲಿ ಮತ್ತೆ ಕೆಂಪುಉಗ್ರರ ಕರಿನೆರಳು| ಕೊಪ್ಪದಲ್ಲಿ ಇಬ್ಬರು ನಕ್ಸಲ್ ಬೆಂಬಲಿತ ಶಂಕಿತರಿಬ್ಬರು ವಶಕ್ಕೆ|ಧರ್ಮಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು Read More »

ಪಕ್ಷಿಕೆರೆ ಕೊಲೆ ಪ್ರಕರಣ| ಕಾರ್ತಿಕ್ ಭಟ್ ತಾಯಿ, ಸಹೋದರಿ ಅರೆಸ್ಟ್| ಠಾಣೆಯಲ್ಲಿ ನಡೆಯಿತು ಮೆಗಾ ಹೈಡ್ರಾಮ!

ಸಮಗ್ರ ನ್ಯೂಸ್: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ತಿಕ್ ಭಟ್ ತಾಯಿ ಹಾಗೂ ಅಕ್ಕನನ್ನು ಪೊಲೀಸರು ಬಂದಿಸಿದ್ದಾರೆ. ಶ್ಯಾಮಲಾ ಭಟ್(61) ಹಾಗೂ ಸುರತ್ಕಲ್ ಬಾಳ ನಿವಾಸಿ ಕಣ್ಮಣಿ ರಾವ್(36) ಬಂಧಿತರು. ಇಬ್ಬರ ವಿರುದ್ಧ ಕಾರ್ತಿಕ್ ಭಟ್ ಪತ್ನಿಯ ತಾಯಿ ಸಾವಿತ್ರಿ ನೀಡಿದ ದೂರಿನಂತೆ 308 ಭಾರತೀಯ ನ್ಯಾಯ ಸಂಹಿತೆ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಮುಲ್ಕಿ ಪೊಲೀಸರು ಬಂಧಿಸಿ ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಳೆದ ದಿನದ ಹಿಂದೆ ಪೊಲೀಸ್

ಪಕ್ಷಿಕೆರೆ ಕೊಲೆ ಪ್ರಕರಣ| ಕಾರ್ತಿಕ್ ಭಟ್ ತಾಯಿ, ಸಹೋದರಿ ಅರೆಸ್ಟ್| ಠಾಣೆಯಲ್ಲಿ ನಡೆಯಿತು ಮೆಗಾ ಹೈಡ್ರಾಮ! Read More »

ಲೈಂಗಿಕ ದೌರ್ಜನ್ಯ ಹಗರಣ| ಮಾಜಿ ಸಂಸದ ಪ್ರಜ್ವಲ್ ಗೆ ಸುಪ್ರೀಂನಲ್ಲೂ ಸಿಕ್ಕಿಲ್ಲ ಜಾಮೀನು

ಸಮಗ್ರ ನ್ಯೂಸ್: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಸುಪ್ರೀಂ ಕೋರ್ಟ್ ನಲ್ಲೂ ಜಾಮೀನು ನಿರಾಕರಿಸಲಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿ ಜೈಲು ಸೇರಿರುವ ಪ್ರಜ್ವಲ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಜಾಮೀನು ನೀಡಲು ನಿರಾಕರಿಸಿದೆ. ಅಕ್ಟೋಬರ್‌ 21ರಂದು ಪ್ರಜ್ವಲ್‌ ರೇವಣ್ಣ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ (Karnataka Highcourt) ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ (Supreme Court) ಮೇಲ್ಮನವಿ ಸಲ್ಲಿಸಿದ್ದರು.

ಲೈಂಗಿಕ ದೌರ್ಜನ್ಯ ಹಗರಣ| ಮಾಜಿ ಸಂಸದ ಪ್ರಜ್ವಲ್ ಗೆ ಸುಪ್ರೀಂನಲ್ಲೂ ಸಿಕ್ಕಿಲ್ಲ ಜಾಮೀನು Read More »

ಮಂಗಳೂರು: ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಬಾಣಂತಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ‌‌ ಹಾರಿ‌ ಬಾಣಂತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಿಂದ ವರದಿಯಾಗಿದೆ. ನಗರದ ಲೇಡಿಗೋಷನ್‌ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಕಾರ್ಕಳದ ರಂಜಿತಾ (28) ಹಾರಿ ಮೃತಪಟ್ಟ ಘಟನೆ ನ.11ರಂದು ಬೆಳಗ್ಗೆ ನಡೆದಿದೆ. ರಂಜಿತಾ ಅವರು ಹೆರಿಗೆಗೆಂದು ಕಾರ್ಕಳದ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಕ್ಲಿಷ್ಟ ಆರೋಗ್ಯ ಸಮಸ್ಯೆ ಉಂಟಾಗಿದ್ದಕ್ಕೆ ಮಂಗಳೂರಿನ ಲೇಡಿಗೋಷನ್‌ ಆಸ್ಪತ್ರೆಗೆ ಅ.28 ರಂದು ದಾಖಲು ಮಾಡಲಾಗಿತ್ತು. ಅ.30 ಕ್ಕೆ ಸಿಸೇರಿಯನ್‌ ಮೂಲಕ ಹೆರಿಗೆಯಾಗಿತ್ತು. ಮಗು ಎನ್‌ಐಸಿಯುನಲ್ಲಿತ್ತು. ಆದರೆ ನ.3 ರಂದು ಮಗು

ಮಂಗಳೂರು: ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಬಾಣಂತಿ ಆತ್ಮಹತ್ಯೆ Read More »