Ad Widget .

ಚಿಂಚೋಳಿ | ವೃದ್ಧೆಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಸಮಗ್ರ ನ್ಯೂಸ್:ಚಿಂಚೋಳಿ ಕಲಬುರಗಿ ಜಿಲ್ಲೆ ತಾಲ್ಲೂಕಿನ ಗ್ರಾಮವೊಂದರ 80 ವರ್ಷದ ವಯೋ ವೃದ್ಧೆ ಮೇಲೆ ಅತ್ಯಾಚಾರ ನಡೆಸಿ ಬೆಳ್ಳಿ ಚೈನ್ ಹಾಗೂ ಮೊಬೈಲ್ ದೋಚಿದ್ದ ಆರೋಪಿಯನ್ನು ಚಿಂಚೋಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

Ad Widget . Ad Widget .

ತಾಲ್ಲೂಕಿನ ಐನೋಳ್ಳಿ ಗ್ರಾಮದ ತಯ್ಯಬ್ ಮಿರನಶಹಾ ಫಕೀರ ಎಂಬಾತನನ್ನು ಹೈದರಾಬಾದಿನಲ್ಲಿ ವಶಕ್ಕೆ ಪಡೆದ ಪೊಲೀಸರು, ಆತನ ಆರೋಗ್ಯ ತಪಾಸಣೆ ನಡೆಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಈತನ ಬಳಿ ಮೊಬೈಲ್, ಆಧಾರ ಕಾರ್ಡ್ ಮತ್ತು ಗುರುತಿನ ಚೀಟಿಯಿಲ್ಲವಂತೆ. ಕುಟುಂಬದ ಜತೆಗೆ ಸರಿಯಾಗಿ ನಂಟು ಇಲ್ಲದೇ ಊರೂರು ಅಲೆಯುತ್ತ ಸಿಕ್ಕಸಿಕ್ಕ ಕೆಲಸ ಮಾಡುತ್ತ ಅಲೆಮಾರಿಯಾಗಿದ್ದ ಆರೋಪಿ ಗೊಟ್ಟಮಗೊಟ್ಟ ಜಾತ್ರೆಗೆ ಬಂದು ಸಮೀಪದ ಗ್ರಾಮದಲ್ಲಿ ನ.18ರಂದು ವೃದ್ದೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದನು.

Ad Widget . Ad Widget .

ಈತನ ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅತ್ತೂರು ಶ್ರೀನಿವಾಸಲು, ಚಿಂಚೋಳಿ ಡಿವೈಎಸ್ಪಿ ಸಂಗಮನಾಥ ಹಿರೇಮಠ ಮಾರ್ಗದರ್ಶನದಲ್ಲಿ ಸಿಪಿಐ ಕಪಿಲದೇವ, ಎಸ್‌ಐ ಗಂಗಮ್ಮ ಜಿನಕೇರಿ, ಮಡಿವಾಳಪ್ಪ ಬಾಗೋಡಿ, ವೆಂಕಟೇಶ ನಾಯಕ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಲಾಗಿತ್ತು. ಆರೋಪಿ ಬಂಧನ ಪೊಲೀಸರಿಗೆ ಸವಾಲಾಗಿತ್ತು. ಕೊನೆಗೂ ಸವಾಲು ಬೇಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯ ಸುಳಿವು ನೀಡಿದವರಿಗೆ ₹10 ಸಾವಿರ ಬಹುಮಾನ ಘೋಷಿಸಲಾಗಿತ್ತು. ಆರೋಪಿಯ ವಿರುದ್ದ ತೆಲಂಗಾಣದ ಮಿಯಾಪುರ ಠಾಣೆಯಲ್ಲಿ ಪೋಕ್ಸ್‌ ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣವಿದ್ದು ಬಂಧನದ ವಾರಂಟ್ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *