Ad Widget .

ಈಜಲು ತೆರಳಿ ಪ್ರಾಣ ಬಿಟ್ಟ ಬೆಂಗಳೂರಿನ ಇಬ್ಬರು ಗೆಳೆಯರು

ಸಮಗ್ರ ನ್ಯೂಸ್: ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದ 8 ಜನರಲ್ಲಿ ಇಬ್ಬರು ಈಜಾಡಲು ತೆರಳಿ ಸಾವನ್ನಪ್ಪಿದ ಘಟನೆ ನ.20ರಂದು ಸಂಜೆ 5 ಗಂಟೆ ಸುಮಾರಿಗೆ ಮಿಡ್ಸ್ ಬೀಚ್‌ನಲ್ಲಿ ನಡೆದಿದೆ.

Ad Widget . Ad Widget .

ಬೆಂಗಳೂರಿನ ವಿಜಯ ನಗರದ ನಿವಾಸಿಗಳಾದ ಪ್ರತೀಕ ಪಾಲಾಕ್ಷಪ್ಪ (32), ರವಿ ನಾಗರಾಜ (26) ಇವರೇ ಸಾವನ್ನಪ್ಪಿದ ದುರ್ದೈವಿ ಗಳಾಗಿದ್ದಾರೆ.ಗುರುವಾರ, ಶುಕ್ರವಾರ ಕಂಪನಿಗೆ ರಜೆ ಇರುವುದರಿಂದ ಇನ್ನು ಶನಿವಾರ, ಭಾನುವಾರ ಸರಕಾರಿ ರಜೆ ಇರುವುದರಿಂದ ನಾಲ್ಕು ದಿನದ ರಜೆಯ ನಿಮಿತ್ತ 8 ಗೆಳೆಯರು ಗೋಕರ್ಣಕ್ಕೆ ಗುರುವಾರ ಬೆಳಿಗ್ಗೆ ಆಗಮಿಸಿದ್ದರು.

Ad Widget . Ad Widget .

ಪ್ರಕೃತಿ ರೆಸಾರ್ಟ್ನಲ್ಲಿ ರೂಮ್ ಮಾಡಿಕೊಂಡಿದ್ದ ಈ 8 ಗೆಳೆಯರಲ್ಲಿ ಐದು ಜನರು ಈಜಾಡಲು ತೆರಳಿದ್ದರು. ಅದರಲ್ಲಿ ಮೂವರು ಸೊಂಟದ ಅಳತೆಯ ನೀರಿನಲ್ಲಿದ್ದರೆ, ಇನ್ನಿಬ್ಬರು ಇನ್ನೂ ಈಜಾಡುತ್ತ ಮುಂದೆ ತೆರಳಿದ್ದರು. ಆದರೆ ಕಡಲ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲಾಗಿದ್ದರು. ನಂತರ ಸ್ಥಳದಲ್ಲಿದ್ದ ಗೆಳೆಯರು ಕೂಗಿಕೊಂಡಾಗ ಅಕ್ಕ ಪಕ್ಕದವರು ಬಂದು ಅವರನ್ನು ಕಾಪಾಡುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.ಸ್ಥಳದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿಗಳು ನೀರಿನಿಂದ ಶವವನ್ನು ಮೇಲಕ್ಕೆ ತಂದಿದ್ದರು.

ನಂತರ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಹಿತಿ ಪಡೆದುಕೊಂಡರು. ಶವವನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ. ರಜೆಗಾಗಿ ಮೋಜು ಮಾಡಲು ಬಂದಿದ್ದ 8 ಜನರ ಪೈಕಿ ಇಬ್ಬರು ಸಾವನ್ನಪ್ಪಿದ್ದರಿಂದಾಗಿ ಗೆಳೆಯರ ಆಕ್ರಂದನ ಮುಗಿದು ಮುಟ್ಟಿವಂತಿತ್ತು. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *