Ad Widget .

ಕ್ಷಣಮಾತ್ರದಲ್ಲಿ ಮರವೇರಿ ಹುಲಿ ದಾಳಿಯಿಂದ ಪಾರಾದ ಅರಣ್ಯ ಸಿಬ್ಬಂದಿ

ಸಮಗ್ರ ನ್ಯೂಸ್:ಅರಣ್ಯ ಸಿಬ್ಬಂದಿಯೊಬ್ಬರು ಹುಲಿ ದಾಳಿಯಿಂದ ಕ್ಷಣ ಮಾತ್ರದಲ್ಲಿ ಪಾರಾಗಿರುವ ಘಟನೆ ಮಧ್ಯಪ್ರದೇಶ ಸತ್ಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಡೆದಿದೆ.

Ad Widget . Ad Widget .

ಕರ್ತವ್ಯ ನಿರ್ವಹಣೆ ವೇಳೆ ಹುಲಿ ಆಗಮನ ಗ್ರಹಿಸಿದ ಇಬ್ಬರು ಸಿಬ್ಬಂದಿಗಳು ಕೂಡಲೇ ಪಕ್ಕದಲ್ಲೇ ಇದ್ದ ಮರವನ್ನು ಏರಿದ್ದಾರೆ.ಈ ವೇಳೆ ಓರ್ವ ಸಿಬ್ಬಂದಿ ತಮ್ಮ ಮೊಬೈಲ್ ನಿಂದ ವಿಡಿಯೋ ರೆಕಾರ್ಡ್ ಮಾಡಿದ್ದು, ಮರವೇರಿದ ಬಳಿಕ ಭಾರಿ ಗಾತ್ರದ ಹುಲಿಯೊಂದು ಅದೇ ಪ್ರದೇಶದಲ್ಲಿ ತನ್ನ ಬೇಟೆ ಅರಸುತ್ತಾ ಬರುತ್ತದೆ.ಕೆಲ ನಿಮಿಷಗಳ ಕಾಲ ಅಲ್ಲಿಯೇ ವಾಸನೆ ಗ್ರಹಿಸುತ್ತಿದ್ದ ಹುಲಿ ಬಳಿಕ ಅಲ್ಲಿಂದ ಹೊರಟು ಹೋಗುತ್ತದೆ.

Ad Widget . Ad Widget .

ಎದೆ ಝಲ್ ಎನ್ನಿಸುವ ಈ ವಿಡಿಯೋವನ್ನು ಅರಣ್ಯ ಅಧಿಕಾರಿ ಪ್ರವೀಣ್ ಕಸ್ವಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.ಅಲ್ಲದೆ ಅರಣ್ಯ ಸಿಬ್ಬಂದಿಗಳ ಅಪಾಯದ ಗ್ರಹಿಕೆ ಮತ್ತು ಮುಂದಾಗಬಹುದಾದ ಅಪಾಯದಿಂದ ಪಾರಾದ ಬಗೆಯನ್ನು ಶ್ಲಾಘಿಸಿದ್ದಾರೆ. ಈ ವಿಡಿಯೋವನ್ನು ಅನ್ನು ಲಾಲ್ ಎಂಬ ಸಿಬ್ಬಂದಿ ರೆಕಾರ್ಡ್ ಮಾಡಿದ್ದು, ಇಬ್ಬರೂ ಇದೀಗ ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *