Ad Widget .

ಅಜೀರ್ ದರ್ಗಾ ‘ಶಿವ ದೇವಾಲಯ’ ಎಂದು ಘೋಷಿಸಿ ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕಾರ; ‘ದರ್ಗಾ ಸಮಿತಿ, ASI’ಗೆ ಸಮನ್ಸ್

ಸಮಗ್ರ ನ್ಯೂಸ್: ಸೂಫಿ ಸಂತ ಸ್ವಾಜಾ ಮೊಯಿನುದ್ದೀನ್ ಚಿಸ್ತಿ ಅಥವಾ ಅಜೀರ್ ಶರೀಫ್ ದರ್ಗಾ ಶಿವ ದೇವಾಲಯ ಎಂದು ಪ್ರತಿಪಾದಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನ ಕೆಳ ನ್ಯಾಯಾಲಯ ನ.20ರಂದು ಸ್ವೀಕರಿಸಿದೆ. ಹಿಂದೂ ಸೇನಾ ಸಲ್ಲಿಸಿದ್ದ ಅರ್ಜಿಯನ್ನ ನ್ಯಾಯಾಲಯ ಸ್ವೀಕರಿಸಿದ್ದು, ಮುಂದಿನ ವಿಚಾರಣೆಯು ಡಿ.20ಕ್ಕೆ ಮುಂದೂಡಿದೆ.

Ad Widget . Ad Widget .

ವಿಷ್ಣು ಗುಪ್ತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಅಜೀರ್ ಪಶ್ಚಿಮ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಮನಮೋಹನ್ ಚಂದೇಲ್ ಅವರು ಅದನ್ನು ವಿಚಾರಣೆಗೆ ಸ್ವೀಕರಿಸಿದ್ದಾರೆ. ಈ ವಿಷಯದಲ್ಲಿ ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಸಮೀಕ್ಷೆ (ASI)ಗೆ ಸಮನ್ಸ್ ನೋಟಿಸ್ ನೀಡಬೇಕು ಎಂದು ನ್ಯಾಯಮೂರ್ತಿ ಚಂದೇಲ್ ನಿರ್ದೇಶನ ನೀಡಿದರು.

Ad Widget . Ad Widget .

ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಈ ಅರ್ಜಿಯನ್ನ ಸಲ್ಲಿಸಿದ್ದರು. ಈ ಸ್ಥಳವು ಭಗವಂತ ಮಹಾದೇವನಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.ಈ ವರ್ಷದ ಸೆಪ್ಟೆಂಬ‌ರ್’ನಲ್ಲಿ, ಅಜೀರ್ ದರ್ಗಾವನ್ನು ಶಿವ ದೇವಾಲಯವೆಂದು ಘೋಷಿಸುವಂತೆ ಕೋರಿ ವಿಷ್ಣು ಗುಪ್ತಾ ಸಲ್ಲಿಸಿದ್ದ ಸಿವಿಲ್ ಮೊಕದ್ದಮೆಯನ್ನ ಸ್ವೀಕರಿಸಲು ಅಜೀರ್ ನ್ಯಾಯಾಲಯ ನಿರಾಕರಿಸಿತ್ತು. ನ್ಯಾಯವ್ಯಾಪ್ತಿಯ ಕೊರತೆಯೇ ತನ್ನ ನಿರ್ಧಾರಕ್ಕೆ ಕಾರಣ ಎಂದು ಉಲ್ಲೇಖಿಸಿದ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನ ಅಕ್ಟೋಬರ್ 10ಕ್ಕೆ ಮುಂದೂಡಿತು.

Leave a Comment

Your email address will not be published. Required fields are marked *