ಬೆಳ್ತಂಗಡಿ: ಸ್ನಾನಕ್ಕೆಂದು ನದಿಗೆ ಇಳಿದ ಮೂವರು ಯುವಕರು ನೀರು ಪಾಲು

ಸಮಗ್ರ ನ್ಯೂಸ್: ನದಿಯಲ್ಲಿ ಸ್ನಾನ ಮಾಡಲು ಹೋದ ಮೂವರು ಯುವಕರು ನೀರುಪಾಲಾದ ಘಟನೆ ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ಗ್ರಾಮದ ಬರ್ಕಜೆ ಡ್ಯಾಂ ನಲ್ಲಿ ನ 27 ರಂದು ಸಂಜೆ ನಡೆದಿದೆ. ಎಡಪದವಿನ ಲಾರೆನ್ಸ್(20), ಮಡಂತ್ಯಾರಿನ ಸೂರಜ್ (19), ವಗ್ಗದ ಜೈಸನ್(19) ನೀರುಪಾಲಾದವರು.

Ad Widget ... ..

ವೇಣೂರು ಚರ್ಚ್‌ ನ ಕಾರ್ಯಕ್ರಮದ ಹಿನ್ನಲೆಯಲ್ಲಿ ಈ ಮೂವರು ಯುವಕರು ಮೂಡುಕೋಡಿ ವಾಲ್ಟರ್ ಎಂಬವರ ಮನೆಗೆ ಬಂದಿದ್ದರು ಎನ್ನಲಾಗಿದೆ. ಮಧ್ಯಾಹ್ನ ಊಟ ಮುಗಿಸಿ ಮನೆ ಸಮೀಪದ ಕಿಂಡಿ ಅಣೆಕಟ್ಟಿನ ಸಮೀಪಕ್ಕೆ ವೀಕ್ಷಣೆಗೆಂದು ಹೋಗಿದ್ದಾರೆ.

Ad Widget

ಅಲ್ಲಿ ಸ್ನಾನಕ್ಕೆಂದು ಇಳಿದವರು ಸುಳಿಗೆ ಸಿಲುಕಿ ನೀರು ಪಾಲಾಗಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ವೇಣೂರು ಪೊಲೀಸರು ದೌಡಾಯಿಸಿದ್ದು, ಮೂವರ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ.

Leave a Comment

Your email address will not be published. Required fields are marked *