ಶಬರಿಮಲೆ ಮೆಟ್ಟಿಲ ಮೇಲೆ ಪೊಲೀಸರ ಪೋಸು – ವಿವಾದ ಸೃಷ್ಟಿಸಿದ ಫೋಟೋ!

ಸಮಗ್ರ ನ್ಯೂಸ್ : ಶಬರಿಮಲೆ ದೇವಸ್ಥಾನದ 18 ಮೆಟ್ಟಿಲುಗಳ ಮೇಲೆ ಕೇರಳ ಪೊಲೀಸರು ನಿಂತಿರುವ ಫೋಟೋ ವಿವಾದವನ್ನು ಹುಟ್ಟುಹಾಕಿದೆ.ಶಬರಿಮಲೆ ದೇಗುಲದ 18 ಮೆಟ್ಟಿಲುಗಳ ಮೇಲೆ ಕೇರಳದ 28 ಪೊಲೀಸ್ ಅಧಿಕಾರಿಗಳು ನಿಂತಿದ್ದು, ಗರ್ಭಗುಡಿಯತ್ತ ಬೆನ್ನು ಹಾಕಿ ಪೋಸ್ ನೀಡಿದ್ದಾರೆ.

Ad Widget ... ..

ಮಧ್ಯಾಹ್ನ ದೇವಾಲಯದ ಬಾಗಿಲು ಮುಚ್ಚಿದ ನಂತರ ಫೋಟೋ ತೆಗೆಯಲಾಗಿದೆ ಎನ್ನಲಾಗಿದೆ.ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿವಾದವನ್ನು ಸೃಷ್ಟಿಸಿದೆ. ಭಕ್ತರ ಧಾರ್ಮಿಕ ನಂಬಿಕೆಗೆ ಪೊಲೀಸರು ಅಗೌರವ ತೋರಿದ್ದಾರೆ ಎಂದು ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ತಕ್ಷಣ ಕ್ರಮ ಕೇರಳ ಎಡಿಜಿಪಿ ವರದಿ ಕೇಳಿದ್ದಾರೆ.ಅದೇ ರೀತಿ ದೇವಾಲಯದ ಸಂಪ್ರದಾಯಗಳ ಪ್ರಕಾರ, ಪುರೋಹಿತರು ಕೂಡ ಗರ್ಭಗುಡಿಯ ಮುಖ ಮಾಡೇ ಮೆಟ್ಟಿಲುಗಳನ್ನು ಇಳಿಯುತ್ತಾರೆ ಎಂದು ವರದಿಗಳು ತಿಳಿಸಿವೆ.

Ad Widget

Leave a Comment

Your email address will not be published. Required fields are marked *