2 ದಿನ ಮುಕ್ಕಿ ತಿಂದು, 3ನೇ ದಿನ ಅದೇ ಕೋಣೆಯಲ್ಲಿ ಕೊಂದ ಹಂತಕ?! ಬೆಚ್ಚಿ ಬೀಳಿಸುತ್ತೆ ‘ಮಾಯಾ’ ಮರ್ಡರ್ ಮಿಸ್ಟರಿ!

ಸಮಗ್ರ ನ್ಯೂಸ್:ಇಂದಿರಾನಗರದ ಅಪಾರ್ಟ್‌ಮೆಂಟ್‌ನಲ್ಲಿ ಅಸ್ಸಾಂ ಮೂಲದ ಯುವತಿಯನ್ನು ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಿನ್ನೆ ಬೆಳಕಿಗೆ ಬಂದಿತ್ತು.ಇಂದಿರಾನಗರ ಠಾಣೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಕೊಲೆ ಬಳಿಕ ಆರೋಪಿ ಮೊಬೈಲ್‌ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೆಪ್ ಆಗಿದ್ದಾರೆ. ಯುವತಿಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಕ್ಯಾಬ್ ಬುಕ್ ಮಾಡಿಕೊಂಡು ಹೋಗಿದ್ದು, ಕ್ಯಾಬ್ ಬಂದು ಹೋಗಿರುವ ಮಾರ್ಗದ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಆರೋಪಿ ಕ್ಯಾಬ್‌ನಿಂದ ಎಲ್ಲಿ ಇಳಿದಿದ್ದ ಅನ್ನೋದನ್ನ ಪತ್ತೆ ಹಚ್ಚುತ್ತಿದ್ದು, ಇದರ ಜೊತೆಗೆ ಆರವ್ ಹನೋಯ್ ಹಾಗೂ ಮಾಯಾ ಗೊಗಾಯ್ ಪರಿಚಯದ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ.ಮಾಹಿತಿ ಪ್ರಕಾರ, ಸೋಶಿಯಲ್ ಮೀಡಿಯಾ ಮೂಲಕ ಆರವ್ ಹನೋಯ್ ಹಾಗೂ ಮಾಯಾ ಗೊಗಾಯ್ ಪರಿಚಯವಾಗಿದ್ದರು.

Ad Widget ... ..

ಕಳೆದ ಕೆಲ ತಿಂಗಳ ಹಿಂದಷ್ಟೇ ಪರಿಚಯವಾಗಿದ್ದ ಇವರು ಇದೇ 23 ರಂದು ಇಂದಿರಾನಗರ ಸರ್ವೀಸ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಶನಿವಾರದಿಂದ ನಿನ್ನೆ ಬೆಳಗ್ಗೆವರೆಗೂ ಅಪಾರ್ಟ್‌ಮೆಂಟ್‌ನಲ್ಲಿದ್ದ ಆರವ್ ಹನೋಯ್, ಮೂರು ದಿನಗಳ ಅಂತರದಲ್ಲಿ ಮಾಯಾ ಗೊಗಾಯ್‌ಳನ್ನು ಕೊಲೆ ಮಾಡಿದ್ದು, ಬಳಿಕ ನಿನ್ನೆ ಬೆಳಗ್ಗೆ 8.19 ಕ್ಕೆ ರೂಂನಿಂದ ಹೊರ ಹೋಗಿದ್ದಾನೆ ಎಂದು ತಿಳಿದು ಬಂದಿದೆ.ಸದ್ಯ ಆರೋಪಿ ಆರವ್ ಹನೋಯ್ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದು, ಕೊಲೆಯಾದ ಮಾಯಾ ಗೊಗಾಯ್ ಮರಣೋತ್ತರ ಪರೀಕ್ಷೆ ಇಂದು ಬೌರಿಂಗ್ ಆಸ್ಪತ್ರೆಯಲ್ಲಿ ನಡೆಯಲಿದೆ. ಇನ್ನು ಮಾಯಾ ಗೊಗಾಯ್‌ಳನ್ನು ಕೊಲೆ ಮಾಡಿದ ಬಳಿಕ ಹಂತಕ ಆರವ್ ಹನೋಯ್ ಕೋಣೆಯಿಂದ ಗಾಬರಿಯಲ್ಲೇ ಹೊರಟಿದ್ದು, ಹೋಟೆಲ್‌ನಲ್ಲಿ ಶವ ಬಿಟ್ಟು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದವರೆಗೂ ಹೋಗಿದ್ದಾನೆ. ರೈಲು ನಿಲ್ದಾಣ ಸಮೀಪ ಹೋಗ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಮೂಲಗಳ ಪ್ರಕಾರ ಆರೋಪಿ ಕೇರಳಕ್ಕೆ ಎಸ್ಕೆಪ್ ಆಗಿರುವ ಶಂಕೆ ವ್ಯಕ್ತವಾಗಿದೆ.

Ad Widget

ಇನ್ನು ಶುಕ್ರವಾರ ತನ್ನ ಅಕ್ಕನಿಗೆ ಕರೆ ಮಾಡಿದ್ದ ಮಾಯ ಗೊಗಾಯ್, ಆಫೀಸ್ ಪಾರ್ಟಿ ಇದೆ ಬರಲ್ಲ ಎಂದು ಹೇಳಿದ್ದಳು.ಮತ್ತೊಂದೆಡೆ ಶನಿವಾರ ಕೂಡ ರೂಂಗೆ ಬರಲ್ಲ ಅಂತಾ ಮೆಸೇಜ್ ಮಾಡಿದ್ದಳು. ಆರೋಪಿ ಆರವ್ ಹನೋಯ್ ಹೋಟೆಲ್‌ಗೆ ಬರುವ ಮುನ್ನ ಹಳೆಯ ಚಾಕುವೊಂದನ್ನ ತಂದಿದ್ದ.ಹೋಟಲ್‌ಗೆ ಬಂದ ನಂತರ ನೈಲಾನ್ ದಾರ ಖರೀದಿ ಮಾಡಿದ್ದು, ಆನ್ಸೆನ್ ಮೂಲಕ ಆರ್ಡರ್ ಮಾಡಿ ತರಿಸಿಕೊಂಡಿದ್ದಾನೆ. ಪ್ರೇಯಸಿ ಜೊತೆ ಎರಡು ದಿನ ಕಾಲ ಕಳೆದು ನಂತರ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದೆಲ್ಲವನ್ನು ನೋಡಿದಾಗ ಫ್ರೀ ಪ್ಲಾನ್ ಮಾಡಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *