Ad Widget .

ನರ್ಸ್ ವೇಷದಲ್ಲಿ ಹಸುಗೂಸು ಅಪಹರಣ – ಒಂದೇ ದಿನದಲ್ಲಿ ಆರೋಪಿಗಳು ಬಲೆಗೆ.!

ಸಮಗ್ರ ನ್ಯೂಸ್:ಗುಲ್ಬರ್ಗಾ ವೈದ್ಯಕೀಯ ಆಸ್ಪತ್ರೆಯಿಂದ ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಒಂದು ದಿನದ ಗಂಡು ಮಗುವನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಗುವನ್ನು 36 ಗಂಟೆಗಳಲ್ಲಿ ಮತ್ತೆ ಮಗುವನ್ನು ತಾಯಿಯ ಮಡಿಲು ಸೇರುವಂತೆ ಬ್ರಹ್ಮಪುರ ಪೊಲೀಸರು ಮಾಡಿದ್ದಾರೆ.

Ad Widget . Ad Widget .

ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಯ ನವಜಾತ ಶಿಶುವನ್ನು ಬಾನುವಾರ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ನರ್ಸ್‌ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಅಪಹರಿಸಲಾಗಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಬ್ರಹ್ಮಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Ad Widget . Ad Widget .

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ಕು ವಿಶೇಷ ತನಿಖೆ ತಂಡ ರಚನೆ ಮಗುವಿಗಾಗಿ ಶೋಧ ಕಾರ್ಯ ಆರಂಭಿಸಲಾಗಿತ್ತು. ಇದೀಗ ಮಗು ನಾಪತ್ತೆಯಾಗಿ 36 ಗಂಟೆಗಳಲ್ಲಿ ಹುಡುಕಾಟ ನಡೆಸಿ ಮಗುವನ್ನು ಪತ್ತೆ ಹಚ್ಚಿದ್ದಾರೆ. ಅದರಂತೆ ಇಂದು ಬೆಳಿಗ್ಗೆಯೇ ಸ್ವತಃ ಕಮಿಷನರ್ ಹಾಗೂ ಇತರ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಮಗುವನ್ನು ತಾಯಿ ಕಸ್ತೂರಿಯವರಿಗೆ ಒಪ್ಪಿಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರ ನಡೆಸಲಾಗುತ್ತಿದೆ.

Leave a Comment

Your email address will not be published. Required fields are marked *