Ad Widget .

ಬೆಳಗಾವಿಯಲ್ಲಿ ಮದುವೆ ಮಂಟಪದಿಂದ ‘ಫೋಟೋಗ್ರಾಫರ್’ ಕಿಡ್ನಾಪ್ ಮಾಡಿ ಭೀಕರ ಹಲ್ಲೆ : 8 ಜನರ ಬಂಧನ!

ಸಮಗ್ರ ನ್ಯೂಸ್: ಬೆಳಗಾವಿಯಲ್ಲಿ ಬೆಚ್ಚಿ ಬೆಳಿಸುವ ಘಟನೆ ನಡೆದಿದ್ದು, ಮದುವೆ ಮಂಟಪದಿಂದಲೇ ಫೋಟೋಗ್ರಾಫರ್ ಒಬ್ಬರನ್ನು ಕಿಟ್ರ್ಯಾಪ್ ಮಾಡಿ ಹಲ್ಲೆ ನಡೆಸಿರುವ ಘಟನೇ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ ಈ ಒಂದು ಘಟನೆ ನಡೆದಿದೆ.ಅಪಹರಣಕ್ಕೆ ಒಳಗಾಗಿ ಹಲ್ಲೆಗೆ ಒಳಗಾದಂತಹ ಫೋಟೋಗ್ರಾಫರ್ ನನ್ನು ಉಮೇಶ್ ಹೊಸೂರು ಎಂದು ಗುರುತಿಸಲಾಗಿದೆ.

Ad Widget . Ad Widget .

ಕಿಡ್ನಾಪ್ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಫೋಟೋಗ್ರಾಫ‌ರ್ ಉಮೇಶ ಹೊಸೂರು ಅವರನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಲಾಗಿದೆ. ಉಮೇಶ್ ಬೈಲಹೊಂಗಲ ಪಟ್ಟಣದಲ್ಲಿ ವಾಸವಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಮದುವೆ ಆರ್ಡರ್ ಅಂತ ಉಮೇಶ್ ಬೆಳಗಾವಿಗೆ ಬಂದಿದ್ದರು.ಬೈಲಹೊಂಗಲ ತಾಲೂಕಿನ ಚಿವಟಗೊಂಡಿ ಕ್ರಾಸ್ ಬಳಿ ಕಾರು ನಿಲ್ಲಿಸಿ ಹಲ್ಲೆ ನಡೆಸಿದ ಬಳಿಕ ದುಷ್ಕರ್ಮಿಗಳು ಅವರನ್ನು ಅಲ್ಲಿಗೆ ಬಿಟ್ಟು ಹೋಗಿದ್ದಾರೆ. ಉಮೇಶ್ ಹೆಣ್ಣು ಮಕ್ಕಳನ್ನು ಕಾಡಿಸುತ್ತಿದ್ದ ಎಂದು ಆರೋಪ ಕೇಳಿ ಬಂದಿದ್ದರಿಂದ ಹಲ್ಲೆ ನಡೆಸಲಾಗಿದೆ.

Ad Widget . Ad Widget .

8 ಜನರ ವಿರುದ್ಧ ಇದೀಗ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಇಬ್ಬರು ಮಹಿಳೆಯರು ಸೇರಿ 8 ಜನರನ್ನು ಬಂಧಿಸಲಾಗಿದೆ. ವಿಕ್ಕಿ, ಪ್ರವೀಣ್ ಉಮರಾಣಿ ಬಸವರಾಜ ನರಟ್ಟಿ ಸೇರಿದಂತೆ 8 ಜನರ ಬಂಧನವಾಗಿದೆ. ಸದ್ಯ ಫೋಟೋಗ್ರಾಫರ್ ಉಮೇಶ ಹೊಸೂರು ಬೈಲಹೊಂಗಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Comment

Your email address will not be published. Required fields are marked *