Ad Widget .

ಮುಂಬೈ ಉಗ್ರರ ದಾಳಿಗೆ ಹತ್ತುವರ್ಷ -ಲಾಠಿ ಹಿಡಿದು ಕಸಬ್ ನನ್ನು ಎದುರಿಸಿದ್ದ ಪೊಲೀಸ್‌!

ಸಮಗ್ರ ನ್ಯೂಸ್: ಪ್ರತಿಷ್ಠಿತ ತಾಜ್ ಹೋಟೆಲ್ ಮೇಲೆ ಉಗ್ರ ಅಲ್ಮಲ್ ಕಸಬ್ ನಡೆಸಿದ ದಾಳಿಯ ಕಹಿ ನೆನೆಪಿಗೆ ಇಂದು ಹತ್ತು ವರ್ಷ. ನವೆಂಬರ್ 26 ರಂದು ನಡೆದಿದ್ದ ಈ ದಾಳಿಯಲ್ಲಿ ಜನಸಾಮಾನ್ಯರಲ್ಲದೇ 18 ಮಂದಿ ಪೊಲೀಸ್ ಮಿಲಿಟರಿ ಸಿಬ್ಬಂದಿಗಳೂ ಸಹ ಹುತಾತ್ಮರಾಗಿದ್ದರು.

Ad Widget . Ad Widget .

ಉಗ್ರರ ದಮನ ಕಾರ್ಯಾಚರಣೆಯಲ್ಲಿ ಮಡಿದ ಹುತಾತ್ಮ ಯೋಧರಿಗೆ ಇಂದು ದೇಶಾದ್ಯಮತ ಶೃಂದ್ಧಾಂಜಲಿ ಸಲ್ಲಿಸಲಾಗುತ್ತಿದೆ.ಕನ್ನಡಿಗರ ಮೇಜರ್ ಸಂದೀಪ್ ಸೇರಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ ಮತ್ತು ಅಶೋಕ್ ಕಮತೆ ಸೇರಿದಂತೆ ಹಲವು ಅಂದು ಉಗ್ರರ ಹುಚ್ಚಾಟಕ್ಕೆ ಬಲಿಯಾಗಿದ್ದರು. ಆದರೆ ತುಕಾರಾಂ ಓಂಬ್ಳೆ ಎಂಬ ಎಎಸ್‌ಐ ಸಿಬ್ಬಂದಿಯೊಬ್ಬ ಅಂದು ತೋರಿದ ಸಾಹಸ ದೇಶಾದ್ಯಂತ ಮನೆ ಮಾತಾಗಿತ್ತು. ಇಂದು ಸಾಮಾಜಿಕ ಜಾಲತಾಣದಾದ್ಯಂತ ತುಕಾರಾಂ ಓಂಬ್ಳೆಯವರ ಸಾಹಸಗಾಥೆಯನ್ನು ಸ್ಮರಿಸಲಾಗುತ್ತಿದೆ.

Ad Widget . Ad Widget .

ಪಾಕಿಸ್ತಾನದಿಂದ ಬಂದಿದ್ದ ಅಜ್ಜಲ್ ಕಸಬ್ ತಾಜ್ ಹೋಟೆಲ್ ನಲ್ಲಿ ನುಗ್ಗಿ ತನ್ನ ವಿಧ್ವಂಸಕ ಕಾರ್ಯವನ್ನು ಪ್ರಾರಂಭಿಸಿದ್ದ. ಆತನ ಕೈಲಿ ಎ.ಕೆ. 47 ಮಾರಣಾಂತಿಕ ಆಯುಧವೂ ಇತ್ತು.ಇದರಿಂದ ಪೊಲೀಸ್ ಹಾಗೂ ಮಿಲಿಟರಿ ಸಿಬ್ಬಂದಿ ನಿಸ್ಸಹಾಯಕರಾಗಿದ್ದರು. ಅವರಿಗೆ ತಮ್ಮ ಜೀವಕ್ಕಿಂತ ಜನಸಾಮಾನ್ಯರ ಜೀವ ಅಮೂಲ್ಯವಾಗಿತ್ತು. ಈ ವೇಳೆ ಲಾಠಿ ಹಿಡಿದು ಏಕಾಏಕಿ ಮೇಲೆ ನುಗ್ಗಿದ್ದ ಓಂಬೈ ಎರಡೂ ಕೈಗಳಿಂದ ಕಸಬ್ ನ ಗನ್ ಅನ್ನು ತಬ್ಬಿ ಹಿಡಿದಿದ್ದರು. ಕೂಡಲೇ ಕಸಬ್ ಅವರತ್ತ ಬ್ಯಾರೆಲ್ ಗುರಿಮಾಡಿ ಟ್ರಿಗರ್ ಒತ್ತಿ ಗುಂಡುಗಳ ಸುರಿಮಳೆ ಸುರಿಸಿದ್ದ.

ಐದು ಗುಂಡುಗಳು ದೇಹದಲ್ಲಿ ಹೊಕ್ಕಿ ಓಂಬ್ಳೆ ಮೃತಪಟ್ಟರೂ ಸಹ ಅವರು ತನ್ನ ಕೈಯಿಂದ ಗನ್ ಮೇಲಿದ್ದ ಹಿಡಿದ ಬಿಟ್ಟಿರಲಿಲ್ಲ. ಈ ಒಂದು ಕ್ಷಣದಲ್ಲಿ ಪೊಲೀಸ್ ಮತ್ತು ಮಿಲಟರಿ ಸಿಬ್ಬಂದಿ ಸುತ್ತುವರೆದು ಕಸಬ್ ನನ್ನು ಜೀವಸಹಿತ ಬಂಧಿಸಿದ್ದರು.ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಹಲವು ಅಧಿಕಾರಿಗಳು, ಅಂದು ಓಂಬ್ಳೆ ಇರದಿದ್ದರೆ ನಾವ್ಯಾರೂ ಬದುಕಿರುತ್ತಲೇ ಇರಲಿಲ್ಲ. ನಮ್ಮೆಡೆಗೆ ಗುರಿಯುಟ್ಟು ಹಾರಿಸಿದ ಗಂಡುಗಳಿಗೆ ತನ್ನ ದೇಹವನ್ನೇ ಅಡ್ಡಕೊಟ್ಟು ನಮ್ಮನ್ನು ರಕ್ಷಿಸಿದರು ಎಂದು ಸ್ಮರಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *