Ad Widget .

ನಿಮಗೆ ಇದು ಬೇಕಿತ್ತಾ ?! ಸಚಿವ ಜಾರ್ಜ್ ಗೆ ನಿರ್ಮಲಾನಂದ ಶ್ರೀಗಳ ಸಮ್ಮುಖದಲ್ಲಿ ಭಾರಿ ಮುಖಭಂಗ

ಸಮಗ್ರ ನ್ಯೂಸ್:ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಕೆ.ಜೆ.ಜಾರ್ಜ್ ಗೆ ತೀವ್ರ ಮುಖಭಂಗ ಎದುರಾಗಿದೆ. ಸಂಘದ ಕಾರ್ಯಕ್ರಮದ ವೇದಿಕೆಯಲ್ಲಿ ಗ್ಯಾರಂಟಿಗಳ ಬಗ್ಗೆ ಭಾಷಣ ಮಾಡಲು ಮುಂದಾದ ಸಚಿವ ಕೆ.ಜೆ.ಜಾರ್ಜ್ ಭಾಷಣವನ್ನು ಸಭಿಕರು ಅರ್ಧಕ್ಕೆ ತಡೆದಿದ್ದಾರೆ.

Ad Widget . Ad Widget .

ಚಿಕ್ಕಮಗಳೂರಿನ ಎಐಟಿ ವೃತ್ತದಲ್ಲಿ ಉದ್ಘಾಟನೆಗೊಂಡ ಒಕ್ಕಲಿಗರ ಬೆಳ್ಳಿ ಭವನ ಕಾರ್ಯಕ್ರಮದಲ್ಲಿ ನಿರ್ಮಲಾನಂದ ಶ್ರೀಗಳ ಎದುರು ಸಚಿವ ಜಾರ್ಜ್ ಈ ರೀತಿ ಮುಜುಗರಕ್ಕೀಡಾಗಿದ್ದಾರೆ. ಒಕ್ಕಲಿಗ ಸಮಾಜದ ಯುವಕರು ಭಾಷಣದ ಮಧ್ಯಪ್ರವೇಶಿಸಿ, ಇದು ರಾಜಕೀಯ ವೇದಿಕೆಯಲ್ಲ, ರಾಜಕೀಯ ಮಾತನಾಡೋದಾದ್ರೆ ಕೆಳಗೆ ಇಳಿಯಿರಿ ಎಂದು ಕೂಗಾಡಿದ್ರು.

Ad Widget . Ad Widget .

ಇದೇ ವೇಳೆ ಈ ವೇದಿಕೆಯಲ್ಲಿ ನೀವು ರಾಜಕೀಯ ಮಾಡಬೇಡಿ, ನನಗೂ ರಾಜಕೀಯ ಬರುತ್ತೆ ಅಂತ ಸಚಿವ ಜಾರ್ಜ್ ಕೂಡ ಸಿಟ್ಟಾಗಿದ್ದು, ಶ್ರೀಗಳು ಮಧ್ಯ ಪ್ರವೇಶದಿಂದ ನಂತರ ಯುವಕರು ಸುಮ್ಮನಾಗಿದ್ದಾರೆ. ಈ ಬೆಳವಣಿಗೆಯ ನಂತರ ಸಚಿವರು ತಮ್ಮ ಮಾತಿಗೆ ಸಭೆಯಲ್ಲೇ ಕ್ಷಮೆಯಾಚಿಸಿದ್ರು.

Leave a Comment

Your email address will not be published. Required fields are marked *