Ad Widget .

ಭರ್ಜರಿ ಮಳೆಯ ಮುನ್ನೆಚ್ಚರಿಕೆ, ಈ ಜಿಲ್ಲೆಗಳ ಜನರೇ ಎಚ್ಚರ!

ಸಮಗ್ರ ನ್ಯೂಸ್:ಮಳೆಗಾಲ ನಿಂತು ಚಳಿಗಾಲ ಆರಂಭ ಆಗಬೇಕಿದ್ದ ಸಮಯ ಇದು, ಆದರೂ ಮಳೆ ಅಬ್ಬರ ಇನ್ನೂ ಕಡಿಮೆ ಆಗಿಲ್ಲ. ಅದರಲ್ಲೂ ಕಳೆದ ಒಂದು ತಿಂಗಳಲ್ಲಿ ಭಾರಿ ಮಳೆ ಬಿದ್ದಿದ್ದು, ಈ ಹೊತ್ತಿಗೂ ಮತ್ತೆ ಮಳೆ ಅಬ್ಬರಿಸುವ ಮುನ್ಸೂಚನೆ ಸಿಕ್ಕಿದೆ. ಕರ್ನಾಟಕದ ಹಲವು ಜಿಲ್ಲೆಗಳ ಜನರಿಗೆ ಮತ್ತೆ ಮಳೆಯ ಅಬ್ಬರ ಕಾಟ ಕೊಡುವುದು ಗ್ಯಾರಂಟಿ ಆಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಳೆ ಗ್ಯಾಪ್ ಕೊಡದೆ ತನ್ನ ಅಬ್ಬರ ತೋರಿಸುತ್ತಿದ್ದು, ಜನರು ಕೂಡ ಹೀಗೆ ಭಾರಿ ಮಳೆಯ ಕಾಟಕ್ಕೆ ಬೆಚ್ಚಿ ಬಿದ್ದಿದ್ದಾರೆ. ಹವಾಮಾನ ವೈಪರಿತ್ಯದ ಪರಿಣಾಮ ಹೀಗೆ ಭಾರಿ ಘೋರವಾಗಿ ಮಳೆ ಅಬ್ಬರಿಸುತ್ತಿದ್ದು, ಅಕ್ಟೋಬರ್ & ನವೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಮಳೆ ಕಡಿಮೆ ಬೀಳುತ್ತಿತ್ತು. ಆದರೆ ಈ ಬಾರಿ ಅಕ್ಟೋಬರ್ & ನವೆಂಬರ್ ತಿಂಗಳಲ್ಲಿ ಭಾರಿ ಮಳೆ ಬೀಳಿದ್ದು, ಜನ ಕೂಡ ಈ ಬಗ್ಗೆ ಚಿಂತೆ ಮಾಡುವಂತೆ ಆಗಿದೆ. ಅಲ್ಲದೆ ಮತ್ತೆ ಮುಂದಿನ ಕೆಲವು ದಿನಗಳ ಕಾಲ ಇನ್ನಷ್ಟು ಮಳೆ ಅಬ್ಬರ ಇದೆ.

Ad Widget . Ad Widget . Ad Widget .

ಮಳೆರಾಯ ಮತ್ತಷ್ಟು ಅಬ್ಬರಿಸುವ ಚಿಂತೆ ಶುರುವಾಗಿದೆ. ಈಗಾಗಲೇ 2024ರ ವರ್ಷದಲ್ಲಿ ಮಳೆ ಸಾಕು ಸಾಕು ಅನ್ನಿಸುವಷ್ಟು ಸುರಿದಿದೆ. ಹೀಗಿದ್ದರೂ ಮತ್ತೆ ಮಳೆ ತನ್ನ ಆರ್ಭಟ ತೋರಿಸಿ, ಕರ್ನಾಟಕದ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.ನವೆಂಬರ್ 25 ಅಂದ್ರೆ ಇಂದಿನಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಕೊಡಗು, ಮೈಸೂರು, ಮಂಡ್ಯ ತುಮಕೂರು ಸೇರಿದಂತೆ ರಾಮನಗರ ಜಿಲ್ಲೆಗಳಲ್ಲಿ ಬಾರಿ ಮಳೆ ಬೀಳುವ ಮುನ್ಸೂಚನೆ ಇದೆ.

ಒಟ್ನಲ್ಲಿ ಆದಷ್ಟು ಬೇಗ ಮಳೆ ನಿಲ್ಲಲಿ ಅನ್ನೋದೆ ಕನ್ನಡಿಗರ ಆಶಯವಾಗಿದೆ. ಯಾಕಂದ್ರೆ ಈ ರೀತಿ ಅಕಾಲಿಕ ಮಳೆ ಸುರಿಯುತ್ತಿದ್ದರೆ ಅದು ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ. ಹೀಗಾಗಿ ಅಕಾಲಿಕ ಮಳೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಈಗ ಜನರು ಕೂಡ ಮಳೆರಾಯ ಬೇಗ ನಿಲ್ಲು ಅಂತಾ ಪ್ರಾರ್ಥನೆ ಮಾಡುತ್ತಿದ್ದು, ಆದರೆ ಮಳೆ ಮಾತ್ರ ಸದ್ಯಕ್ಕೆ ಸೈಲೆಂಟ್ ಆಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ!

Leave a Comment

Your email address will not be published. Required fields are marked *