Ad Widget .

ತುಳು ಹೆಸರಿನಲ್ಲಿ ಲಾಂಚ್ ಆಗಲಿದೆ ಪರಿಶುದ್ಧ ತೆಂಗಿನ ಎಣ್ಣೆ| ಯುವ ಉದ್ಯಮಿ ಗುರುಪ್ರಸಾದ್ ಪಂಜರವರ ‘ತಾರಾಯಿ’ ಕೊಬ್ಬರಿ ಎಣ್ಣೆ ಶೀಘ್ರದಲ್ಲೇ ಮಾರುಕಟ್ಟೆಗೆ

ಸಮಗ್ರ ನ್ಯೂಸ್: ತುಳು ನಾಡಿನ ಧ್ವಜ ಬಳಸಿಕೊಂಡು, ತುಳು ಹೆಸರಿನಲ್ಲೇ ಪ್ರಪ್ರಥಮ ಬಾರಿಗೆ ವಸ್ತುವೊಂದು ಮಾರುಕಟ್ಟೆಗೆ ಬರುತ್ತಿದೆ. ಅಂತರಾಷ್ಟ್ರೀಯ ಗುಣ ಮಟ್ಟದ, ಕ್ಯಾಂಪ್ಕೋ ತಯಾರಿಕೆಯ “ತಾರಾಯಿ” ಕೊಬ್ಬರಿ ಎಣ್ಣೆ ಅತೀ ಶೀಘ್ರ ಮಾರುಕಟ್ಟೆಗೆ ಬರಲಿದೆ.

Ad Widget . Ad Widget .

ಸಾಮಾಜಿಕ ಕಾರ್ಯಗಳಿಂದ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಸರುವಾಸಿಯಾಗಿರುವ ಯುವ ಉದ್ಯಮಿ ಗುರುಪ್ರಸಾದ್ ಪಂಜ ರಾಷ್ಟೀಯ ಮಟ್ಟದಲ್ಲಿ ಕೊಬ್ಬರಿ ಎಣ್ಣೆಯನ್ನು ಮಾರುಕಟ್ಟೆಗೆ ಪರಿಚಯಿಸುವ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.

Ad Widget . Ad Widget .

ತುಳು ಹೆಸರು, ತುಳು ಲಿಪಿ ಮತ್ತು ತುಳು ನಾಡಿನ ಧ್ವಜವನ್ನು ಈ ಎಣ್ಣೆ ಪ್ಯಾಕೆಟ್ ಮೇಲೆ ಮುದ್ರಿಸಲಾಗಿದೆ. ಈ ಮೂಲಕ ತುಳು ಭಾಷೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಉದ್ದೇಶವನ್ನು ಈ ಉದ್ಯಮಿ ಹೊಂದಿದ್ದಾರೆ. ಈಗಾಗಲೇ ಹಲವು ಉತ್ಪನ್ನಗಳನ್ನು ಉತ್ತಮ ಗುಣಮಟ್ಟದಲ್ಲಿ ತಯಾರಿಸಿ ಮನೆ ಮಾತಾಗಿರುವ ರಾಷ್ಟೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಈ ಎಣ್ಣೆಯನ್ನು ತಯಾರಿಸಿ ಕೊಡುತ್ತಿರುವುದು ಎಣ್ಣೆಯ ಪರಿಶುದ್ಧತೆ ಮತ್ತು ಗುಣಮಟ್ಟಕ್ಕೆ ಅತ್ಯಂತ ಖಾತ್ರಿಯಾಗಿದೆ.

ಪ್ರಧಾನಿ ಮೋದಿಯವರ ಕನಸಿನ VOCAL for LOCAL ಸಿದ್ದಾಂತದಂತೆ ಸಿದ್ಧವಾಗುವ ಕೊಬ್ಬರಿ ಎಣ್ಣೆ ತುಳುನಾಡಿನಿಂದ ರಾಷ್ಟ್ರ ಮಟ್ಟದಲ್ಲಿ ಮಾರುಕಟ್ಟೆ ವಿಸ್ತರಿಸುವ ಯೋಜನೆ ಹೊಂದಿದೆ. ಅದಕ್ಕಾಗಿ ಜಿಲ್ಲಾವಾರು ವಿತರಕರನ್ನು ನಿಯೋಜಿಸಲಾಗುತ್ತದೆ. ಆಸಕ್ತ ವಿತರಕರು ಮೊಬೈಲ್ ಸಂಖ್ಯೆ : 09206818888 ಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಗುರುಪ್ರಸಾದ್ ಅವರು ರಾಷ್ಟೀಯ ಮಟ್ಟದಲ್ಲಿ ಕೊಬ್ಬರಿ ಎಣ್ಣೆ ಪರಿಚಯಿಸುವ ಉದ್ದೇಶ ಹೊಂದಿದ್ದರು. ಅದಕ್ಕಾಗಿ ತುಳು ಹೆಸರು “ತಾರಾಯಿ” ಕೂಡಾ ಪೈನಲ್ ಮಾಡಿದ್ದರು. ಆದರೆ ಹಲವಾರು ಅಡೆತಡೆಗಳನ್ನು ಎದುರಿಸಿ ಕೊನೆಗೆ ಕ್ಯಾಂಪ್ಕೋ ಸಂಸ್ಥೆಯ ಜತೆ ಒಪ್ಪಂದ ಏರ್ಪಟ್ಟು ಇದೀಗ ಮಾರುಕಟ್ಟೆಗೆ ತಾರಾಯಿ ಕೊಬ್ಬರಿ ಎಣ್ಣೆ ಬರಲು ಸಿದ್ಧವಾಗಿದೆ.

Leave a Comment

Your email address will not be published. Required fields are marked *