Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ನಿಮ್ಮ ಜನ್ಮರಾಶಿಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮರಾಶಿಯ ಆಧಾರದಲ್ಲಿ ನವೆಂಬರ್ 24ರಿಂದ 30ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Ad Widget . Ad Widget .

ಮೇಷ ರಾಶಿ:
ಮೇಷ ರಾಶಿಯ ಅಧಿಪತಿ ಕುಜನು ಚಂದ್ರನ ರಾಶಿಯಾದ ಕಟಕ ರಾಶಿಯಲ್ಲಿದ್ದು, ಸುಬ್ರಹ್ಮಣ್ಯ ದೇವರ ಪ್ರಾರ್ಥನೆ ಅತ್ಯಗತ್ಯವಾಗಿರುತ್ತದೆ. ನಾಗದೇವರನ್ನು ಪೂಜಿಸಿದರೆ ಸಕಲ ಸೌಖ್ಯವನ್ನೂ ಕೊಡುತ್ತಾನೆ. ರಾಶ್ಯಾಧಿಪತಿ ಒಲಿದರೆ ಭಾಗ್ಯೋದಯವಾಗುತ್ತದೆ. ವಕ್ರಗತಿಯ ಶನಿಯು ನೇರವಾಗಿರುವುದರಿಂದ ಏಕಾದಶಿ ಶನಿಯು ಭಾಗ್ಯವನ್ನು ನೀಡುತ್ತಾನೆ.

Ad Widget . Ad Widget .

ವೃಷಭ ರಾಶಿ:
ವೃಷಭ ರಾಶಿಯವರಿಗೆ ಲಗ್ನದಲ್ಲಿ ಗುರು 11ನೇ ಮನೆಯ ಏಕಾದಶ ಸ್ಥಾನದಲ್ಲಿ ಶನಿಯ ದೃಷ್ಟಿ ಬಂದು, ನಾಗಾಲೋಟದಲ್ಲಿ ಓಡಿ ಸಕಲ ಸಂಪತ್ತು, ವಸ್ತು ವಾಹನ, ಧನಕನಕ ಬಂದೇ ಬರುತ್ತದೆ. ರಾಹು-ಶನಿ ಒಟ್ಟಿಗೆ ಸೇರುತ್ತಾರೆ. ಭೀತಿಯ ಸನ್ನಿವೇಶಗಳು ಎದುರಾಗಬಹುದು. ಶಂಕುಲ ನಾಗದೇವರನ್ನು ಪೂಜಿಸಿ. ನಾಗರಾಜ ಅಷ್ಟೋತ್ತರ ಪಠಿಸಿ. ಮನಸ್ಸಿಗೆ ಹಿತ, ಜೇಬಿಗೆ ಹಣ ಎರಡೂ ಇರುತ್ತದೆ.

ಮಿಥುನ ರಾಶಿ:
9 ರಿಂದ 10ನೇ ಮನೆಗೆ ಬರುವ ಶನಿಯು ಮುಂದೆ ಶನಿ-ರಾಹು ಏಕರಾಶಿಯಲ್ಲಿ ಸೇರುವುದರಿಂದ ಸಮಯದ ಸಮತೋಲನವು, ಮನಸ್ಸಿನ ಕಲ್ಪನೆಗಳು ಈಡೇರಲು ಸಾಧ್ಯವಾಗದು. ಶ್ರೀರಾಮಚಂದ್ರನನ್ನು ಅರ್ಚಿಸಿ. 12ರ ಗುರುವಿಗೆ ಧರ್ಮಸ್ಥಳದ ಮಂಜುನಾಥಸ್ವಾಮಿಯನ್ನು ಪ್ರಾರ್ಥಿಸಿ. ಆರೋಗ್ಯ, ಆಯಸ್ಸು ಕೊಡುವ ಉಮಾಮಹೇಶ್ವರನನ್ನು ಪೂಜಿಸಿ. ನಿಮ್ಮ ತಾಯಿಯ ಕರುಣೆಯಿಂದ ಕೆಲವೊಂದು ಕೆಲಸಗಳು ಸುಗಮವಾಗಿ ನಡೆಯಬಹುದು.

ಕಟಕ ರಾಶಿ:
ಅಂಗಾರಕನು ಕಟಕ ರಾಶಿಯಲ್ಲಿ ಕುಳಿತಿರುವುದರಿಂದ, ದ್ವಂದ್ವದಿಂದ ಕೂಡಿದ ಮನಸ್ಸು. ಆಲೋಚನೆಗಳಿಂದ ಮನಸ್ಸು ಭಾರವಾಗುವುದು. ಒಂದು ಬಗೆಹರಿಸುವುದರಲ್ಲಿ ಕೆಲವೊಂದು ವಿಘ್ನಗಳು ಬರುತ್ತದೆ. ಚಂದ್ರಚೂಡನಾದ ಭವಾನಿ ಶಂಕರನನ್ನು ಆರಾಧಿಸಿ, ಮಹಾದೇವನ ಕೃಪೆಗೆ ಪಾತ್ರರಾಗಬೇಕೆಂದರೆ ಆದಿತ್ಯ ರುದ್ರನನ್ನು ಪ್ರಾರ್ಥಿಸಿ ಸುಖಕ್ಕೆ ಕೊರತೆ ಇಲ್ಲ.

ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಅಷ್ಟಮ ಶನಿ ದೃಷ್ಟಿಯು, ಗುರುವು 10ರಲ್ಲಿರುವುದರಿಂದ, ಸ್ವಲ್ಪ ಮಟ್ಟಿಗೆ ಗುರುಬಲ ಇದ್ದು, ಶನೀಶ್ವರನು ಎಡೆಬಿಡದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೂ, ನಿಮ್ಮನ್ನು ಮನೋಬುದ್ಧಿಯು ಶಾಂತಿಯನ್ನು ಕಳೆದುಕೊಳ್ಳುವ ಮೊದಲು ಶನೀಶ್ವರನನ್ನು ಆರಾಧಿಸಿ, ಸೋಮವಾರ ಈಶ್ವರನನ್ನು ಪೂಜಿಸಿ, ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು.

ಕನ್ಯಾ ರಾಶಿ:
ಕನ್ಯಾ ರಾಶಿಗೆ ಗುರುಬಲ-ಶನಿಬಲವು ಜೊತೆಜೊತೆಯಲ್ಲಿ ನಡೆದು, ಗುರು ವಕ್ರನಾಗಿದ್ದು, ಗುರುವಿನ ವಿಶೇಷ ಅನುಗ್ರಹ ಬೇಕಾಗುತ್ತದೆ. ಗುರು ಮಾತಲ್ಲಿ ವಿಶ್ವಾಸವಿರಬೇಕು. ದೇವತೆಗಳು ಏನು ಕೊಡದಿದ್ದರೂ, ಗುರು ಎಲ್ಲವನ್ನೂ ಕೊಡುತ್ತಾನೆ ಎಂದು ನಂಬಿರಿ. ನಿಮ್ಮ ಗುರುಗಳಲ್ಲಿ ಈಶ್ವರ ಸ್ವರೂಪ ಕಾಣಿರಿ. ಧ್ಯಾನಿಸಿ, ಪೂಜಿಸಿ, ಸುಖ ಕಂಡುಕೊಳ್ಳಿ. ಶಿವಾಯ ಗುರುವೇ ನಮಃ ಎಂಬ ಮಂತ್ರ ಪಠಿಸಿ.

ತುಲಾ ರಾಶಿ:
ಆಗಲೇ ಶನಿಗೆ ಮುಂದಿನ ಮನೆಯ ದೃಷ್ಟಿ ಬಂದು ಕತ್ತಲೆಯಿಂದ ಬೆಳಕಿನೆಡೆಗೆ ಕಳಿಸುತ್ತದೆ. ನೀವು ಮಾಡುವ ಕೆಲಸದಲ್ಲಿ ಅಭಿವೃದ್ಧಿಯೂ, ಸ್ಥಿರವಾದ ಧನ, ಕಾರ್ಯತತ್ಪರತೆಯನ್ನು ಕೀರ್ತಿಯನ್ನು ತಂದುಕೊಡುವುದರಲ್ಲಿ ಎರಡು ಮಾತಿಲ್ಲ. ಸಮಯ ಸರಿಯಾಗಿ ಉಪಯೋಗಿಸಿಕೊಳ್ಳಿ. ನಿತ್ಯ ಮೊಗದ ತೇಜಸ್ಸು, ಹೊಳಪು ಬಂಗಾರದಂತೆ ಹೊಳೆಯುತ್ತದೆ.

ವೃಶ್ಚಿಕ ರಾಶಿ:
ಮಾನವ ಜನ್ಮವು ವಿಶಿಷ್ಟವಾದುದು. ಸಪ್ತಮದಲ್ಲಿ ಗುರುವಿದ್ದಾನೆ. ಗುರುವೇ ಬೆನ್ನ ಹಿಂದಿದ್ದು, ಕಾಪಾಡುತ್ತಾನೆ. ದಾರಿ ತೋರುವ ಗುರುವಿಗೆ ಏನು ಕೊಟ್ಟಿರೆಂದು ಜ್ಞಾಪಿಸಿಕೊಳ್ಳಿ. ನೀವು ಯಾವ ವಿಚಾರಕ್ಕೂ ತಲೆ ಕೆಡಿಸಿಕೊಳ್ಳುವ ಪ್ರಮೇಯವಿಲ್ಲ. ಧನ, ಸಂಪತ್ತು ದೈವಾಂಶದಿಂದ ಕಂಡುಕೊಳ್ಳುವ ಕಾಲವಿದು. ಶನಿಯು ಚತುರ್ಥ ದಲ್ಲಿದ್ದರೂ, ಗುರುವೇ ಮಾರ್ಗವನ್ನು ತೋರುತ್ತಾನೆ. ಗುರುವನ್ನು ಧ್ಯಾನಿಸಿ. ಸುಬ್ರಹ್ಮಣ್ಯ ದೇವರನ್ನು ಸದಾಕಾಲ ಅರ್ಚಿಸಿ. ಪೂಜಿಸಿ.

ಧನಸ್ಸು ರಾಶಿ:
ಧನರ್ ರಾಶಿಯವರಿಗೆ ಈಗ ಏಕಾದಶಕ್ಕೆ ಸೂರ್ಯವಿದ್ದು, ರಾಜಮಾರ್ಗದಲ್ಲಿ ರಾಜಕಾರ್ಯಗಳನ್ನು ಮಾಡಿಕೊಳ್ಳುವ ಕಾಲವಿದು. ಮಹಾರಾಜನಂತೆ ನಡೆದರೆ ಸಾಲದು. ಮಹಾರಾಜನ ಜತೆಯಲ್ಲಿದ್ದರೆ ಅವನು ಕೊಡುವ ಒಳ್ಳೆಯ ಊಟ, ನೋಟ, ಸಿಕ್ಕರೆ ಸಾಲದು. ಅಂದರೆ ಬಹಳ ವಿವೇಚನೆಯಿಂದ ನಿಮ್ಮ ಕೆಲಸ ಸಾಧಿಸಿಕೊಂಡು ಉತ್ತರೋತ್ತರ ಅಭಿವೃದ್ಧಿ ಹೊಂದಿ ಬೆಳೆಯಬಹುದು. ಆದಿತ್ಯ ಹೃದಯ ಪಾರಾಯಣ ಮಾಡಿ. ದುರ್ಗೆಯನ್ನು ಪೂಜಿಸಿ.

ಮಕರ ರಾಶಿ:
ಶ್ರವಣ, ಧನಿಷ್ಠ, ಉತ್ತರಾಷಾಢ ನಕ್ಷತ್ರಕ್ಕೆ ಶನಿ ಸಂಚಾರ ಮುಗಿಸಿ ಬೆಳವಣಿಗೆ ನೋಡುವ ಕಾಲ, ಆಲಸ್ಯಂ, ಅಮೃತಂ ವಿಷಂ ಎಂಬ ಮಾತನ್ನು ನೆನಪಿಟ್ಟುಕೊಂಡು ಆಲಸ್ಯವನ್ನು ಬಿಟ್ಟು ಅಮೃತದಂತಹ ಕಾಲವನ್ನು ಸ್ವೀಕರಿಸಿ ದೇಹವು, ಮನಸ್ಸು, ಹೃದಯವನ್ನು ಶುದ್ಧವಾಗಿರಿಸಿಕೊಂಡರೆ ನಿಮಗೆ ಬದುಕನ್ನು ತೋರಿಸಿ ಜಯದ ಕಡೆ ಕರೆದೊಯ್ಯುವ ಕಾಲ.

ಕುಂಭ ರಾಶಿ:
ಕಡೆಯ ಭಾಗದ ಶನಿಯ ಸಂಚಾರವು ಇದ್ದು ನಿಮ್ಮನ್ನು ತಿದ್ದಿಕೊಂಡು ಮುನ್ನಡೆಯುವ ದಾರಿಯನ್ನು ಕಂಡುಕೊಳ್ಳಿ. ಬೇಕಾದ ವಿಷಯ ವಿಚಾರದಲ್ಲಿ ಜಾಗ್ರತೆಯಿಂದ ನೀವು ಅಪಜಯವನ್ನು, ಜಯವನ್ನಾಗಿ, ಧನಕೊರತೆಯನ್ನು ನೀಗಿಸಿಕೊಂಡು, ಆರೋಗ್ಯವನ್ನು ಪಡೆದುಕೊಂಡು ಸಾಗಬೇಕು. ಈಶ್ವರನ ಪೂಜೆಯನ್ನು ಕಡ್ಡಾಯವಾಗಿ ಮಾಡಲೇಬೇಕು.

ಮೀನ ರಾಶಿ:
ಜನ್ಮದಿಂದ ಲಗ್ನಕ್ಕೆ ಶನಿಯು ಬರುವ ಸಮಯ ಹತ್ತಿರದಲ್ಲಿದೆ. ಶನಿಯ ತಾಪದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಹಲವು ಮಾರ್ಗಗಳಿವೆ. ಪಾರ್ವತಿ-ಸಾಂಬಸದಾಶಿವನನ್ನು ಪೂಜಿಸಿ, ಸ್ವಾರ್ಥವಿಲ್ಲದೆ ಪರೋಪಕಾರವನ್ನು ಮಾಡಿರಿ. ಗುರುಗಳನ್ನು ಧ್ಯಾನಿಸಿ, ಪೂಜಿಸಿ, ಅನ್ನದಾನವನ್ನು ಮಾಡಿ.

Leave a Comment

Your email address will not be published. Required fields are marked *