Ad Widget .

ಕಸ್ತೂರಿ ರಂಗನ್ ವರದಿ ವಿರೋಧಿಸಿ ಹೆದ್ದಾರಿ ತಡೆದ ಪ್ರಕರಣ| 13 ಮಂದಿಗೆ ಜಾಮೀನು ಮಂಜೂರು

ಸಮಗ್ರ ನ್ಯೂಸ್: ಕಸ್ತೂರಿ ರಂಗನ್‌ ವರದಿ ವಿರೋಧಿಸಿ ನ.15ರಂದು ಮಲೆನಾಡು ಜನಹಿತ ರಕ್ಷಣ ವೇದಿಕೆ ನೇತೃತ್ವದಲ್ಲಿ ಗುಂಡ್ಯದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದ ಆರೋಪದಲ್ಲಿ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ 13 ಮಂದಿಗೆ ಜಾಮೀನು ದೊರೆತಿದೆ.

Ad Widget . Ad Widget .

ಹೆದ್ದಾರಿ ತಡೆ ನಡೆಸಿದ್ದಾರೆಂದು ಉಪ್ಪಿನಂಗಡಿ ಎಸ್‌ಐ ಅವಿನಾಶ್‌ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು. ಶಾಸಕರಾದ ಭಾಗೀರಥಿ ಮುರುಳ್ಯ, ಗುರುರಾಜ್‌ ಗಂಟಿಹೊಳೆ, ಮಲೆನಾಡು ಜನಹಿತ ರಕ್ಷಣ ವೇದಿಕೆಯ ಸಂಚಾಲಕ ಕಿಶೋರ್‌ ಶಿರಾಡಿ, ಪ್ರತಿಭಟನಕಾರರಾದ ಸುಧೀರ್‌ ಶೆಟ್ಟಿ, ನವೀನ್‌ ನೆರಿಯಾ, ಸತೀಶ್‌ ಶೆಟ್ಟಿ ಬಲ್ಯ, ಉಮೇಶ್‌ ಸಾಯಿರಾಮ್‌, ವೆಂಕಟ ವಳಲಂಬೆ, ಪ್ರಕಾಶ್‌ ಗುಂಡ್ಯ, ಪ್ರಸಾದ್‌ ನೆಟ್ಟಣ, ಸಯ್ಯದ್‌ ಮೀರಾ ಸಾಹೇಬ್‌, ಉಮೇಶ್‌ ಬಲ್ಯ, ನವೀನ್‌ ರೆಖ್ಯಾ, ಯತೀಶ್‌ ಗುಂಡ್ಯ, ಗಣೇಶ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪರ ಎಂ. ವೆಂಕಪ್ಪ ಗೌಡ ಹಾಗೂ ಲೋಕೇಶ್‌ ಗೌಡ ವಾದಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *