Ad Widget .

ನ. 26 ರಿಂದ ಡಿ.12: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರೋತ್ಸವ ಸಂಭ್ರಮ| ಡಿ.7ರಂದು ಮಹಾರಥೋತ್ಸವ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಷಷ್ಠಿ ಮಹೋತ್ಸವಕ್ಕಂತೂ ಕಿಕ್ಕಿರಿದು ಜನ ಸೇರುತ್ತಾರೆ. ಅನೇಕ ಧಾರ್ಮಿಕ ಆಚರಣೆಗಳು, ವಿವಿಧ ಉತ್ಸವಾದಿ ಕಾರ್ಯಗಳು ಇಲ್ಲಿ ನಿರಂತರವಾಗಿ ನಡೆಯುತ್ತದೆ. ಈಗಾಗಲೇ ಚಂಪಾ ಷಷ್ಠಿ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಸಿದ್ಧತೆಗಳು ಕೂಡಾ ಭರದಿಂದ ಸಾಗುತ್ತಿದೆ.

Ad Widget . Ad Widget .

ಚಂಪಾಷಷ್ಠಿ ಮಹೋತ್ಸವದ ಹಿನ್ನೆಲೆ ಇದೇ ಬರುವ ನ.27ರಿಂದ ಡಿ.12ರವರೆಗೆ ಶ್ರೀ ಕ್ಷೇತ್ರದಲ್ಲಿ ಅನೇಕ ಪೂಜಾ ಕೈಂಕರ್ಯಗಳು ನಿರಂತರವಾಗಿ ನಡೆಯಲಿದೆ. ಷಷ್ಠಿ ಮಹೋತ್ಸವದ ಪ್ರಯುಕ್ತ ದೇಗುಲದ ಆಡಳಿತ ಮಂಡಳಿ ಭಕ್ತಾದಿಗಳಿಗೆ ಆಮಂತ್ರಣ ಪತ್ರಿಕೆಯನ್ನು ಕೂಡಾ ಬಿಡುಗಡೆ ಮಾಡಿದೆ.

Ad Widget . Ad Widget .

ಸಾಮಾನ್ಯವಾಗಿ ಚಂಪಾಷಷ್ಠಿಯಂದು ದೇವರ ವಿಶೇಷ ಪೂಜೆಗಳು ನಡೆಯುತ್ತದೆ. ಅಶ್ವತ್ಥ ಕಟ್ಟೆಯಲ್ಲಿ ಸರ್ಪ ರಚನೆಯ ವಿಗ್ರಹವನ್ನಿಟ್ಟು ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ. ಅಷ್ಟೇ ಅಲ್ಲದೆ ಹಾಲೆರೆದು ಅಭಿಷೇಕ ಹಾಗೂ ಪಾಯಸದ ನೈವೇದ್ಯವನ್ನು ಕೂಡಾ ಅರ್ಪಿಸಲಾಗುತ್ತದೆ. ಈ ಸುದಿನ ಹಲವಾರು ಭಕ್ತಾದಿಗಳು ಉಪವಾಸ ವೃತವನ್ನು ಕೂಡಾ ಆಚರಿಸುತ್ತಾರೆ. ಇನ್ನು ಷಷ್ಠಿಯ ಸಂದರ್ಭ ದೇಗುಲದಲ್ಲಿ ನಡೆಯುವ ಸೇವೆಯ ಬಗ್ಗೆ ಹೇಳೋದಾದ್ರೆ ಕಾರ್ತಿಕ ಪೂಜೆ, ಮಹಾರಥೋತ್ಸವ, ನಾಗಪ್ರತಿಷ್ಠೆ, ಆಶ್ಲೇಷ ಬಲಿ, ರುದ್ರಾಭಿಷೇಕ, ಶೇಷ ಸೇವೆ ಇತ್ಯಾದಿ ಅನೇಕ ಸೇವೆಗಳು ಜರಗುತ್ತದೆ.

Leave a Comment

Your email address will not be published. Required fields are marked *