Ad Widget .

ಉದ್ಘಾಟನೆಯಾದ ಮಾರನೇ ದಿನವೇ ಸೀಲ್ ಆದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ! ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

ಸಮಗ್ರ ನ್ಯೂಸ್: ಐವರು ನಕಲಿ ವೈದ್ಯರು ಸೇರಿ ಆರಂಭಿಸಿದ್ದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ (Multi Speciality Hospital) ಉದ್ಘಾಟನೆಯಾದ ಮಾರನೇ ದಿನವೇ ಸೀಲ್ ಮಾಡಲಾಗಿದ್ದು, ತನಿಖೆ ವೇಳೆ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.ಈ ಘಟನೆ ಗುಜರಾತಿನ ಸೂರತ್‌ನಲ್ಲಿ ನಡೆದಿದೆ.

Ad Widget . Ad Widget .

ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಗುರ್ಜಾ‌ರ್ (Vijay Singh Gurjar), ಐವರು ಜನಸೇವೆಯ ಹೆಸರಿನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತೆರೆದಿದ್ದರು. ಆಸ್ಪತ್ರೆ ಉದ್ಘಾಟನೆಗೆ ಮುದ್ರಿತವಾಗಿದ್ದ ಆಮಂತ್ರಣ ಪತ್ರಿಕೆಯಲ್ಲಿ ಸೂರತ್ ಪೊಲೀಸ್ ಉನ್ನತಾಧಿಕಾರಿಗಳು, ಪೊಲೀಸ್ ಕಮಿಷನ‌ರ್ ಮತ್ತು ಕಾರ್ಪೊರೇಷನ್ ಕಮಿಷನ‌ರ್ ಅವರ ಹೆಸರನ್ನೂ ಕೇಳದೆ ಮುದ್ರಿಸಲಾಗಿತ್ತು. ಆಸ್ಪತ್ರೆಯ ಉದ್ಘಾಟನೆಗೆ ಯಾವುದೇ ಅಧಿಕಾರಿಗಳು ಹಾಜರಾಗಿರಲಿಲ್ಲ.ಐವರು ಆರೋಪಿಗಳ ಪೈಕಿ ಇಬ್ಬರ ನಕಲಿ ಪದವಿ ಬಹಿರಂಗಗೊಂಡ ನಂತರ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಉಳಿದ ಆರೋಪಿಗಳ ಪದವಿಯನ್ನು ಪರಿಶೀಲಿಸಲಾಗುತ್ತಿದೆ.

Ad Widget . Ad Widget .

ಆಮಂತ್ರಣ ಪತ್ರದಲ್ಲಿ ಆಯುರ್ವೇದ ವೈದ್ಯಕೀಯ ಪದವಿ ಹೊಂದಿರುವ ವೈದ್ಯ ಎಂದು ಪರಿಚಯಿಸಲಾದ ಬಿ.ಆರ್ ಶುಕ್ಲಾ ವಿರುದ್ಧ ಗುಜರಾತ್ ವೈದ್ಯಕೀಯ ಕಾಯ್ದೆಯಡಿ ಪ್ರಕರಣವಿದೆ.ಎಲೆಕ್ಟೋ-ಹೋಮಿಯೋಪತಿಯಲ್ಲಿ ಪದವಿ ಪಡೆದಿರುವುದಾಗಿ ಹೇಳಿಕೊಂಡಿರುವ ಮತ್ತೊಬ್ಬ ಸಹ-ಸಂಸ್ಥಾಪಕ ಆರ್.ಕೆ ದುಬೆ ವಿರುದ್ಧ ಸಹ ಗುಜರಾತ್ ವೈದ್ಯಕೀಯ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿದ್ದಾನೆ.ಇವರಿಬ್ಬರು ನಕಲಿ ಪದವಿಗಳನ್ನು ಹೊಂದಿದ್ದಾರೆ.

ಸೂರತ್ ಪೊಲೀಸ್ ಕಮಿಷನರ್‌ ಅನುಪಮ್ ಸಿಂಗ್ ಗೆಹೋಟ್, ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಕಮಿಷನ‌ರ್ ಶಾಲಿನಿ ಅಗರ್ವಾಲ್ ಮತ್ತು ಜಂಟಿ ಪೊಲೀಸ್ ಕಮಿಷನರ್ ರಾಘವೇಂದ್ರ ವತ್ಸ ಅವರ ಹೆಸರನ್ನು ಸಹ ಈ ಆಸ್ಪತ್ರೆಯ ಆಹ್ವಾನ ಪತ್ರಿಕೆಯಲ್ಲಿ ಕೇಳದೆಯೇ ಪ್ರಕಟಿಸಲಾಗಿತ್ತು. ಸದ್ಯ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದ್ದು, ಪದವಿಯು ಪರಿಶೀಲಿಸಲಾಗುತ್ತಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *