Ad Widget .

ವಿಟ್ಲ:ಒಕ್ಕಲಿಗ ಗೌಡ ಸೇವಾವಾಹಿನಿ ಲೋಕಾರ್ಪಣೆ ಹಾಗೂ ಕೆಂಪುಕಲ್ಲು ಹಸ್ತಾಂತರ ಕಾರ್ಯಕ್ರಮ| ಒಕ್ಕಲಿಗ ಮನಸ್ಸುಗಳು‌ ಒಂದಾಗಿ ಸೇವಾ ಚಟುವಟಿಕೆ ಪ್ರಾರಂಭಿಸಿರುವುದು ಸದ್ವಿಚಾರ – ಶ್ರೀ ಧರ್ಮಪಾಲನಾಥ ಸ್ವಾಮೀಜಿ

ಸಮಗ್ರ ನ್ಯೂಸ್: ಸಮಾನ ಮನಸ್ಕ ಒಕ್ಕಲಿಗ ಗೌಡ ಸಮಾಜದ ಯುವ ಮನಸ್ಸುಗಳು ಒಂದಾಗಿ ಸೇವಾ ಚಟುವಟಿಕೆ ಪ್ರಾರಂಭಿಸಿರುವುದು ಸದ್ವಿಚಾರ. ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಎಲ್ಲಾ ವಿಧದಲ್ಲಿ ಸ್ಪಂದಿಸುವ ಗುಣವನ್ನು ನಾವು ಹೆಚ್ಚೆಚ್ಚು ಬೆಳೆಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಪೂಜ್ಯ ಶ್ರೀ ಡಾ: ಧರ್ಮಪಾಲನಾಥ ಸ್ವಾಮೀಜಿ ಕರೆ ನೀಡಿದರು.
ವಿಟ್ಲ ಮುಡ್ನೂರು ಗ್ರಾಮದ ಅಲಂಗಾರು ನ ತೀರ್ಥರಾಮಗೌಡ ಪಾಂಬಾರು ಅವರಿಗೆ ಮನೆನಿರ್ಮಾಣಕ್ಕೆ ಕೆಂಪುಕಲ್ಲು ಹಸ್ತಾಂತರ ಕಾರ್ಯಕ್ರಮ ಮತ್ತು ನೂತನ ದ.ಕ.ಒಕ್ಕಲಿಗ ಗೌಡ ಸೇವಾವಾಹಿನಿ ಟ್ರಸ್ಟ್ ಲೋಕಾರ್ಪಣೆ ಸಮಾರಂಭದಲ್ಲಿ ಆಶೀರ್ವಚನ‌ ನೀಡಿದರು.

Ad Widget . Ad Widget .

ಮುಖ್ಯ ಅತಿಥಿಗಳಾಗಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಹಾಗು ಕ್ಯಾಂಪ್ಕೋ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ಮಾತನಾಡಿ, ಒಕ್ಕಲಿಗ ಗೌಡ ಸೇವಾ ವಾಹಿನಿ ಟ್ರಸ್ಟ್ ನೊಂದವರ ಬಾಳಿನ ಆಶಾಕಿರಣ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬುದನ್ನು ಟ್ರಸ್ಟ್ ನ ಉತ್ಸಾಹಿ ಯುವಕರು ಕೇವಲ ಮಾತಾಗದೆ ಅರ್ಥಪೂರ್ಣವಾಗಿ ಅಳವಡಿಸಿಕೊಂಡಿದ್ದಾರೆ. ರಾಜಕೀಯ ರಹಿತ ಈ ತಂಡ ಇದೇ ರೀತಿ ಸ್ವಚ್ಚ ಕಲ್ಪನೆಯನ್ನಿಟ್ಟುಕೊಂಡು ಮುಂದುವರಿದರೆ ಸಮಾಜಕ್ಕೆ ಒಳ್ಳೆಯ ಭವಿಷ್ಯವಿದೆ ಎಂದು ಅಭಿಪ್ರಾಯಪಟ್ಟರು.

Ad Widget . Ad Widget .

ವಿಟ್ಲಮುಡ್ನೂರು ಗ್ರಾ.ಪಂ. ಅಧ್ಯಕ್ಷರಾದ ಪುನೀತ್ ಮಾಡತ್ತಾರು, ಇಂತಹ ಒಂದು ಪರಿಕಲ್ಪನೆ ನಮ್ಮ ಸಮಾಜದಲ್ಲಿ ಹುಟ್ಟಿಕೊಂಡಿರುವುದು ನಮಗೆಲ್ಲ ಆದರ್ಶಪ್ರಾಯವಾದುದು ಎಂದರು.
ಸಮಾಜದ ಹಿರಿಯರಾದ ಬೋಜಪ್ಪಗೌಡ ಮಾಡತ್ತಾರು, ಕಿಶೋರ್ ಪುಣಚ ವೇದಿಕೆಯಲ್ಲಿದ್ದರು. ಜಯರಾಮ್ ಕಲ್ಲಾಜೆ ನಿರೂಪಿಸಿದರು. ಅಲಂಗಾರು ಹಾಗೂ ಪುಣಚ, ಮಾಡತ್ತಡ್ಕ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸೇವಾ ವಾಹಿನಿ ಟ್ರಸ್ಟ್ ನ್ನು ಸ್ವಾಮೀಜಿ’ಯವರು ಮತ್ತು ಗ್ರಾಮಸ್ಥರು ಪುಂಡಿಪಣವು’ಗೆ ನಾಣ್ಯ ಹಾಕಿ(ದೇಣಿಗೆ ನೀಡಿ) ಸೇವಾವಾಹಿನಿ’ಗೆ ಹಸ್ತಾಂತರಿಸುವುದರೊಂದಿಗೆ ಲೋಕಾರ್ಪಣೆಗೊಳಿಸಿದರು.

ಈ ವೇಳೆ ಗುಡ್ಡೆ ಕುಸಿತದಿಂದ ಮನೆ ಹಾನಿಗೊಳಗಾಗಿ ಸಂತ್ರಸ್ತರಾದ ವಿಟ್ಲ ಮುಡ್ನೂರು ಗ್ರಾಮದ ಅಲಂಗಾರು ನ ತೀರ್ಥರಾಮಗೌಡ ಪಾಂಬಾರು ಇವರ ಮನೆ ನಿರ್ಮಾಣಕ್ಕೆ ಟ್ರಸ್ಟ್ನ ಸಹಾಯಾರ್ಥ ಗೌಡ ಸಮಾಜದ ಬಂಧುಗಳಿಂದ ಮಾಸಿಕ ತಲಾ ಕನಿಷ್ಠ 500 ರೂಪಾಯಿಯಂತೆ ಸಂಗ್ರಹಿಸಿದ ಮೊತ್ತದಲ್ಲಿ 2500 ಕೆಂಪು ಕಲ್ಲುಗಳನ್ನು ಫಲಾನುಭವಿಗೆ ತೆಂಗಿನಗಿಡ ನೀಡುವ ಮೂಲಕ ವಿಧ್ಯುಕ್ತವಾಗಿ ಹಸ್ತಾಂತರಿಸಲಾಯಿತು.
ಎರಡನೇ ನೆರವಿನ ಹಸ್ತವಾಗಿ ಮುಂದಿನ ತಿಂಗಳು ಸುಳ್ಯ ತಾಲೂಕು ಪಂಬೆತ್ತಾಡಿ ಗ್ರಾಮದ ಜಾಕೆ ಜಯರಾಮ ಗೌಡರಿಗೆ ನೀಡಲು ಟ್ರಸ್ಟ್ ಮುಂದಾಗಿದೆ.

Leave a Comment

Your email address will not be published. Required fields are marked *