Ad Widget .

ಮಗುವಿನ ಅಳು.. ಮಹಿಳೆಯಂತೆ ಕೂಗು : ಅಯ್ಯಪ್ಪ ಸ್ವಾಮಿ ಭಕ್ತರಿಗೆ ಕುರವ ಗ್ಯಾಂಗ್ ಕಾಟ..!

ಸಮಗ್ರ ನ್ಯೂಸ್: ಕೇರಳದ ಶಬರಿಮಲೆ ಯಾತ್ರೆ ಈಗಾಗಲೇ ಆರಂಭವಾಗಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಈ ನಡುವೆ ಭಕ್ತರಿಗೆ ಕುರವಾ ಗ್ಯಾಂಗ್ ಕಾಟ ಶುರುವಾಗಿದೆ. ಹೀಗಾಗಿ ಸದ್ಯ ಕೇರಳದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

Ad Widget . Ad Widget .

ಪ್ರತೀ ವರ್ಷದಂತೆ ಈ ವರ್ಷವೂ ಗ್ಯಾಂಗ್ ದರೋಡೆಗೆ ಇಳಿದಿದೆ. ಮೂಲತಃ ತಮಿಳುನಾಡಿಗೆ ಸೇರಿದ್ದು ಎನ್ನಲಾಗಿರುವ ಈ ಗ್ಯಾಂಗ್ ಶಬರಿಮಲೆ ದೇಗುಲದ ಬಾಗಿಲು ಓಪನ್ ಆಗುತ್ತಿದ್ದಂತೆಯೇ ಪೀಲ್ಡ್‌ಗೆ ಇಳಿಯುತ್ತಾರೆ. ಭಕ್ತಾದಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಕೇರಳದಲ್ಲಿ ಸೇರುವುದರಿಂದ ಈ ಗ್ಯಾಂಗ್ ಅನ್ನು ಪತ್ತೆ ಮಾಡುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ.

Ad Widget . Ad Widget .

ಭಕ್ತಾದಿಗಳ ಸೊಗಲ್ಲಿ ಭಕ್ತರಂತೆ ವರ್ತಿಸಿ ದರೋಡೆ ಮಾಡುವ ಈ ಗ್ಯಾಂಗ್ ಬೆಳಗ್ಗೆ ಸಮಯದಲ್ಲಿ ಕೇರಳದಲ್ಲಿನ ಖಾಲಿ ಮನೆಗಳನ್ನು ನೋಡಿಕೊಂಡು ರಾತ್ರಿ ತಂಡೋಪ ತಂಡವಾಗಿ ದಾಳಿ ನಡೆಸುತ್ತದೆ. ಮತ್ತೊಂದು ವಿಚಿತ್ರ ವರ್ತನೆ ಎಂದರೆ ಈ ಗ್ಯಾಂಗ್, ಮಗು ಅಳುವಂತೆ ಹಾಗೂ ಮಹಿಳೆಯರು ಕಿರುಚಿಕೊಳ್ಳುವಂತೆ ಶಬ್ದ ಮಾಡುತ್ತದೆ. ಈ ವೇಳೆ ಮನೆಯವರು ಹೊರಬಂದರೆ ಅವರ ಮೇಲೆ ದಾಳಿ ಮಾಡಿ ದರೋಡೆ ಮಾಡುತ್ತೆ.

ಇಷ್ಟು ಮಾತ್ರವಲ್ಲದೇ ಮನೆಯ ಹೊರಗಡೆ ಮನೀರಿನ ಟ್ಯಾಪ್ ಇದ್ದರೆ ಅದನ್ನು ಓಪನ್ ಮಾಡಿ ನೀರು ಬಿಡುವುದು, ಇನ್ನು ಮನೆಯ ಬೆಲ್ ಒತ್ತಿ ಕಿರುಚುವುದು ಮಾಡುತ್ತದೆ. ಈ ರೀತಿ ಭಯಾನಕವಾಗಿ ವರ್ತಿಸಿ ಈ ಗ್ಯಾಂಗ್ ದಾಳಿ ಮಾಡುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಹಾಗೂ ರಾತ್ರಿ ವೇಳೆ ಯಾವುದೇ ಶಬ್ದವಾದರೂ ಒಬ್ಬೊಬ್ಬರೇ ಹೊರಗೆ ಬಂದು ನೋಡದಂತೆ ಕೇರಳ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.

Leave a Comment

Your email address will not be published. Required fields are marked *