Ad Widget .

ಕಲ್ಲಾಪು ಬುರ್ದುಗೋಳಿ ಶ್ರೀ ಕೊರಜ್ಜನ ಉದ್ಭವ ಶಿಲೆಯ ಆದಿಸ್ಥಳದಲ್ಲಿ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ ಬಿಗ್ ಬಾಸ್ ಶೈನ್ ಶೆಟ್ಟಿ

ಸಮಗ್ರ ನ್ಯೂಸ್:ಉಳ್ಳಾಲ ನ.19ರಂದು ತೆರೆಕಾಣಲಿರುವ ಶೈನ್ ಶೆಟ್ಟಿ, ಪ್ರಭು ಮುಂಡ್ಕೂರು ಅಭಿನಯದ ಮರ್ಯಾದೆ ಪ್ರಶ್ನೆ ಯಶಸ್ಸಿಗಾಗಿ ಕಲ್ಲಾಪು ಬುರ್ದುಗೋಳಿ ಕೊರಗಜ್ಜ ಉದ್ಬವ ಶಿಲೆಯ ಆದಿಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿ, ನಾವು ದಿನನಿತ್ಯ ನಮ್ಮ ಕಾರ್ಯ ಪ್ರಾರಂಭಿಸುವಾಗ ಅಜ್ಜನನ್ನು ನೆನಪಿಸಿಕೊಂಡು ಸಾಕಷ್ಟು ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

Ad Widget . Ad Widget .

ಈ ಚಿತ್ರವೂ ಜನರ ಮನಗೆಲ್ಲುವಲ್ಲಿ ಕೊರಗಜ್ಜ ಹರಸಲಿ ಎಂದು ಪ್ರಾರ್ಥಿಸಲು ಈಕ್ಷೇತ್ರಕ್ಕೆ ಬಂದಿದ್ದೇವೆ ಖಂಡಿತ ದೈವ ಬಲ ಇರುತ್ತದೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.ಈ ಸಂದರ್ಭದಲ್ಲಿ ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷರಾದ ವಿಶ್ವನಾಥ್ ನಾಯಕ್ ಕ್ಷೇತ್ರದ ಇತಿಹಾಸವನ್ನು ನಟರಿಗೆ ತಿಳಿಸಿ ಗೌರವಿಸಿದರು.

Ad Widget . Ad Widget .

ಕದ್ರಿ ಇವೆಂಟ್ಸ್ ನ ಜಗದೀಶ್ ಕದ್ರಿ, ಸಾಯಿ‌ ಪರಿವಾರ್ ಟ್ರಸ್ಟ್ ನ ಪ್ರವೀಣ್ ಎಸ್ ಕುಂಪಲ, ಬುರ್ದುಗೋಳಿ ಕ್ಷೇತ್ರದ ಪುರುಷೋತ್ತಮ ಮೆಲಾಂಟ, ನವೀನ್ ಕಾಯಂಗಲ,ಪುರುಷೋತ್ತಮ ಕಲ್ಲಾಪು,ಪ್ರಶಾಂತ್ ಕಾಯಂಗಲ, ಹರೀಶ್ ಕೊಟ್ಟಾರಿ ಜೊತೆಗಿದ್ದರು.

Leave a Comment

Your email address will not be published. Required fields are marked *