Ad Widget .

ಸತ್ಯ ತಿಳಿಯದೇ ಹೆತ್ತ ಮಗಳನ್ನೇ ಮಗನಿಗೆ ಕೊಟ್ಟು ಮದುವೆ ಮಾಡಿದ ತಾಯಿ: ಕೊನೆಗೆ ನಡೆದದ್ದೇ ರೋಚಕ..

ಸಮಗ್ರ ನ್ಯೂಸ್:ತಾಯಿಯೊಬ್ಬಳು ತನ್ನ ಹೆತ್ತ ಮಗಳನ್ನೇ ಮಗನಿಗೆ ಕೊಟ್ಟು ಮದುವೆ ಮಾಡಿದ್ದಾಳೆ.ಇದು ನಡೆದಿರುವುದು ಚೀನಾದಲ್ಲಿ. ಅಸಲಿಗೆ ಆಗಿದ್ದು ಏನೆಂದರೆ, ಚೀನಾದ ಜಿಯಾಂಗ್ಲುನಲ್ಲಿ ಮಗನಿಗಾಗಿ ಈ ತಾಯಿ ಹುಡುಗಿ ಹುಡುಕಿದ್ದಾಳೆ. ನಂತರ ಒಳ್ಳೆಯ ಹುಡುಗಿ ಸಿಕ್ಕಳು ಎಂದು ಮದುವೆಗೂ ಸಿದ್ದ ಮಾಡಿದ್ದಾಳೆ. ಕೊನೆಗೆ, ಆ ಯುವತಿಯ ಎಡಗೈಯಲ್ಲಿ ಮಚ್ಚೆ ಇರುವುದನ್ನು ನೋಡಿದ ಈ ಅಮ್ಮನಿಗೆ ಡೌಟ್ ಶುರುವಾಗಿದೆ. ಏಕೆಂದ್ರೆ ಆ ಮಚ್ಚೆ ಥೇಟ್ ತನ್ನ ಮಗಳ ಕೈಯಲ್ಲಿ ಇರುವಂತೆಯೇ ಇತ್ತು. ಅಷ್ಟಕ್ಕೂ ಈ ಯುವತಿ 20 ವರ್ಷಗಳ ಹಿಂದೆ ಕಾಣೆಯಾಗಿದ್ದಳು! ವಿಚಿತ್ರ ಎಂದರೆ, ಅದೇ ಯುವತಿಯನ್ನು ಈ ಅಮ್ಮ ಸೊಸೆಯಾಗಿ ಸ್ವೀಕರಿಸಲು ರೆಡಿಯಾಗಿದ್ದಳು. ಮಚ್ಚೆ ನೋಡಿದ ಮೇಲೆ ಡೌಟ್ ಬಂದ ಮಹಿಳೆ, ಈಕೆ ಬಗ್ಗೆ ತಿಳಿದುಕೊಳ್ಳಲು ಅವರ ಅಪ್ಪ-ಅಮ್ಮನನ್ನು ವಿಚಾರಿಸಿದ್ದಾಳೆ.

Ad Widget . Ad Widget .

ಬಳಿಕ, ಅವಳ ಸಂದೇಹ ನಿಜವಾಗಿದೆ. ಈ ಯುವತಿಯನ್ನು ಅವರು ದತ್ತು ಪಡೆದುಕೊಂಡಿದ್ದರು. ಚಿಕ್ಕ ಮಗು ರಸ್ತೆಬದಿಯಲ್ಲಿ ಬಿದ್ದು ಕೊಂಡಿತ್ತು. ಆ ಮಗುವನ್ನು ತಮ್ಮ ಮಗಳಾಗಿ ದತ್ತು ಪಡೆದುಕೊಂಡು ಸಾಕುತ್ತಿರುವುದಾಗಿ ಅವರು ಹೇಳಿದರು. ಈ ಬಗ್ಗೆ ವಿಚಾರ ನಡೆಸಿದಾಗ, ಅವಳು ತಾನೇ ಹೆತ್ತ ಮಗಳು ಎಂದು ತಾಯಿಗೆ ತಿಳಿದಿದೆ. ಆದರೆ ಏನು ಮಾಡುವುದು? ಸೊಸೆಯಾಗಿ ಸ್ವೀಕರಿಸಲು ಸಿದ್ಧಳಾಗಿಬಿಟ್ಟಿದ್ದಳು. ಹುಡುಗ ಕೂಡ ಹುಡುಗಿಯನ್ನು ಇಷ್ಟಪಟ್ಟಿದ್ದ. ಆಕೆಯನ್ನೇ ಮದುವೆಯಾಗುವುದಾಗಿಯೂ ಪಣ ತೊಟ್ಟಿದ್ದ. ಇದೇ ಕಾರಣಕ್ಕೆ ಇಬ್ಬರ ಮದುವೆ ಮಾಡಿದ್ದಾಳೆ.

Ad Widget . Ad Widget .

ಮದುವೆ ಮಾಡಲು ಇನ್ನೊಂದು ಕಾರಣವೂ ಇದೆ. ಹಾಗೆ ಸಂಬಂಧದಲ್ಲಿ ನೋಡುವುದಾದರೆ ಇವರಿಬ್ಬರೂ ಅಣ್ಣ-ತಂಗಿಯಾಗಬೇಕು. ಆದರೆ ವಿಶೇಷ ಏನೆಂದರೆ, ಮದುವೆಯಾಗ ಹೊರಟಿದ್ದ ಯುವಕ ಈ ಅಮ್ಮ ಹೆತ್ತ ಮಗನಲ್ಲ. ಮಗಳು ಕಳೆದು ಹೋದ ಬಳಿಕ ಅವನನ್ನು ದತ್ತು ತೆಗೆದುಕೊಳ್ಳಲಾಗಿತ್ತು. ಆದ್ದರಿಂದ ಮದುವೆಯನ್ನು ನೆರವೇರಿಸಲಾಗಿದೆ. 20 ವರ್ಷಗಳ ಹಿಂದೆ ತನ್ನ ಮಗಳು ಕಾಣೆಯಾದ ನಂತರ ತೀವ್ರ ಹುಡುಕಾಟದ ನಂತರ, ಮಹಿಳೆ ಗಂಡು ಮಗುವನ್ನು ದತ್ತು ಪಡೆದಿದ್ದಳು. ಈಗ ಆ ಗಂಡು ಮಗುವೇ ತನ್ನ ನಿಜವಾದ ಮಗಳನ್ನು ಮದುವೆಯಾಗಲು ಹೊರಟಿದ್ದ ತನ್ನದೇ ದತ್ತು ಪುತ್ರನಾಗಿದ್ದನು.

Leave a Comment

Your email address will not be published. Required fields are marked *