Ad Widget .

ಕೆರಳಿದ ದೇವಾಲಯದ ಆನೆ- ಮಾವುತ ಸೇರಿ ಇಬ್ಬರು ಸಾವು!

ಸಮಗ್ರ ನ್ಯೂಸ್: ತಮಿಳುನಾಡಿನ ಪ್ರಸಿದ್ದ ತಿರುಚೆಂದೂರ್ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸಾಕಾನೆಯೊಂದು ಆಹಾರ ನೀಡುತ್ತಿದ್ದ ವೇಳೆ ಮಾವುತ ಹಾಗೂ ಆತನ ಸಂಬಂಧಿಯನ್ನು ತುಳಿದು ಕೊಂದಿರುವ ಆಘಾತಕಾರಿ ಘಟನೆ ನ 17 ರಂದು ನಡೆದಿದೆ.

Ad Widget . Ad Widget .

ಮಧ್ಯಾಹ್ನ 3:30 ರ ಸುಮಾರಿಗೆ ಶೆಡ್‌ನಲ್ಲಿ ಈ ದುರ್ಘಟನೆ ನಡೆದಿದೆ. ಮಾವುತ ಉದಯ ಕುಮಾ‌ರ್ ಮತ್ತು ಆತನ ಸಂಬಂಧಿ ಸಿಸುಬಾಲನ್ ಆನೆಗೆ ಹಣ್ಣುಗಳನ್ನು ತಿನ್ನಿಸುತ್ತಿದ್ದಾಗ ಮದವೇರಿ ದಾಳಿ ಮಾಡಿದೆ.ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಘಟನೆಯ ನಂತರ ತಿರುಚೆಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

Ad Widget . Ad Widget .

ದೇವಸ್ಥಾನದ ಆಡಳಿತಾಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ.ತಿರುಚೆಂದೂ‌ರ್ ಮುರುಗನ್ ದೇವಾಲಯದ ದೈವಾನೈ ಆನೆ ದೇವಾಲಯದಲ್ಲಿ ವರ್ಷಗಳಿಂದ ಉತ್ಸವಗಳಲ್ಲಿ ಭಾಗಿಯಾಗುತ್ತಿತ್ತು. ಆಭರಣಗಳಿಂದ ಅಲಂಕರಿಸಲ್ಪಟ್ಟು ಭಕ್ತರಿಗೆ ಮುಖ್ಯ ಆಕರ್ಷಣೆ ಎನಿಸಿಕೊಂಡಿತ್ತು. ಆದರೆ ಇದೀಗ ದೈವಾನೈ ತನ್ನ ಮಾವುತನ ಸಾವಿಗೆ ಕಾರಣವಾಗಿರುವುದರಿಂದ ಭಕ್ತರು ಆಘಾತಕ್ಕೊಳಗಾಗಿದ್ದಾರೆ.

Leave a Comment

Your email address will not be published. Required fields are marked *