ಪುತ್ತೂರು! ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಅನ್ಯಕೋಮಿನ ಕಾಮುಕ; ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್‌!

ಸಮಗ್ರ ನ್ಯೂಸ್:ಅಂಗಡಿಗೆ ಬಂದಿದ್ದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಮಾನಭಂಗಕ್ಕೆ ಯತ್ನಿಸಿದ ಪ್ರಕರಣದಲ್ಲಿ ಅನ್ಯಕೋಮಿನ ಕಾಮುಕನೊಬ್ಬನಿಗೆ ಪುತ್ತೂರು ಹೆಚ್ಚುವರಿ ನ್ಯಾಯಲಯವು 2 ವರ್ಷ ಜೈಲು ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

Ad Widget ... ..

ಕೆದಂಬಾಡಿ ಗ್ರಾಮದ ತಿಂಗಳಾಡಿಯಲ್ಲಿರುವ ಪ್ರಕರಣದ ಆರೋಪಿ ಬದ್ರುದ್ದೀನ್ ಮಾಲಕತ್ವದ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರಿಗೆ 2022ರ ಸೆಪ್ಟೆಂಬರ್ 14 ರಂದು ಸ್ಥಳೀಯ ಮಹಿಳೆಯೊಬ್ಬರು ತನ್ನ 7 ವರ್ಷದ ಮಗನೊಂದಿಗೆ ತಿಂಡಿ ಖರೀದಿಸಲು ಬಂದಿದ್ದರು. ತಿಂಡಿ ಖರೀದಿಸಿ ಹಣ ನೀಡುತ್ತಿದ್ದ ವೇಳೆ ಕಾಮುಕ ಬದ್ರುದ್ದೀನ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

Ad Widget

ಬದ್ರುದ್ದೀನ್ ವಿರುದ್ಧ ಕಲಂ 354 ಐಪಿಸಿ ಅಡಿಯಲ್ಲಿ ಮಾನಭಂಗದ ದೂರು ದಾಖಲಿಸಿದ್ದರು.ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಆರೋಪಿ ವಿರುದ್ಧ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದೀಗ ಬದ್ರುದ್ದೀನ್ ವಿರುದ್ಧ ಆರೋಪ ಸಾಬೀತಾದ ಹಿನ್ನಲೆಯಲ್ಲಿ ನ್ಯಾಯಾಲಯವು 2 ವರ್ಷಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

Leave a Comment

Your email address will not be published. Required fields are marked *