Ad Widget .

ಅಯ್ಯೋ ದುರ್ವಿಧಿಯೇ! ಅಗ್ನಿ ದುರಂತದಿಂದ 7 ಶಿಶುಗಳನ್ನು ರಕ್ಷಿಸಿ, ತನ್ನ ಅವಳಿ ಮಕ್ಕಳನ್ನು ಕಳ್ಕೊಂಡ ತಂದೆ

ಸಮಗ್ರ ನ್ಯೂಸ್: ಬೆಂಕಿಯ ಕೆನ್ನಾಲಿಗೆಯಿಂದ 7 ನವಜಾತ ಶಿಶುಗಳ ಜೀವ ಉಳಿಸಿದ ವ್ಯಕ್ತಿಯೊಬ್ಬ ಅದೇ ಅಗ್ನಿ ಅವಘಡದಲ್ಲಿ ತನ್ನ ಅವಳಿ ಹೆಣ್ಣು ಮಕ್ಕಳನ್ನು ಕಡೆದುಕೊಂಡ ಕರುಣಾಜನಕ ಘಟನೆ ಉತ್ತರ ಪ್ರದೇಶದ ಝಾನ್ಸಿ ಆಸ್ಪತ್ರೆಯಲ್ಲಿ ನಡೆದಿದೆ.

Ad Widget . Ad Widget .

ಬೆಂಕಿ ಹೊತ್ತಿಕೊಂಡು ಇಡೀ ವಾರ್ಡ್ ತುಂಬಾ ಜ್ವಾಲೆ ಹರಡಿದಾಗ, ತನ್ನ ಪ್ರಾಣವನ್ನು ಲೆಕ್ಕಿಸದೇ ಧೈರ್ಯದಿಂದ ವಾರ್ಡ್ ಒಳಗೆ ನುಗ್ಗಿದ ಯಾಕೂಬ್, 7 ಮಕ್ಕಳನ್ನು ರಕ್ಷಿಸಿದರು. ಸಾಕಷ್ಟು ಪ್ರಯತ್ನದ ನಡುವೆಯೂ ಯಾಕೂಬ್‌ಗೆ ತನ್ನ ಅವಳಿ ಹೆಣ್ಣು ಮಕ್ಕಳ ಜೀವವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

Ad Widget . Ad Widget .

ಬೇರೆ ಪಾಲಕರು ಕೂಡ ಪ್ರಯತ್ನಿಸಿದರು ಆದರೆ, ಅವರು ವಿಫಲರಾದರು. ನಾವು ಇತರೆ ವಾರ್ಡ್‌ನ ಮಕ್ಕಳ ಜೀವ ಉಳಿಸಲು ಪ್ರಯತ್ನಿಸಿದೆವು. ನಾನು 7 ಮಕ್ಕಳನ್ನು ಹೊರಗೆ ತಂದೆ ಎಂದು ಯಾಕೂಬ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.ನನ್ನ ಇಬ್ಬರು ಹೆಣ್ಣು ಮಕ್ಕಳು ಸಹ ಅಲ್ಲಿಯೇ ಇದ್ದರು. ಆದರೆ, ನಾನು ಅವರನ್ನು ಕಳೆದುಕೊಂಡೆ. ನನ್ನಿಂದ ಅವರನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎನ್ನುತ್ತಾ ಯಾಕೂಬ್ ಕಣ್ಣೀರಿಟ್ಟರು.

ತನ್ನಿಬ್ಬರು ಮಕ್ಕಳು ಸೇರಿದಂತೆ ಒಟ್ಟು 11 ಮಕ್ಕಳ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದ್ದಾರೆ.ಶುಕ್ರವಾರ ರಾತ್ರಿ 10 ಶಿಶುಗಳು ಸಾವಿಗೀಡಾಗಿದ್ದು, ಇನ್ನೊಂದು ಶಿಶು ಭಾನುವಾರ ಮೃತಪಟ್ಟಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಆಮ್ಲಜನಕ ಸಿಲಿಂಡರ್‌ಗಳು ಹೆಚ್ಚಾಗಿದ್ದ ಕಾರಣ ಬೆಂಕಿಯ ಜ್ವಾಲೆ ಇನ್ನಷ್ಟು ಉಲ್ಬಣಗೊಂಡಿದೆ. ಇನ್ನು ಐಸಿಯುನಲ್ಲಿದ್ದ ಅಗ್ನಿಶಾಮಕ ಸಾಧನಗಳ ಅವಧಿ ನಾಲ್ಕು ವರ್ಷಗಳ ಹಿಂದೆಯೇ ಮುಗಿದಿದ್ದು, ಅದನ್ನು ಬದಲಾಯಸಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ಬೆಂಕಿ ಅವಘಡಕ್ಕೆ ಕಾರಣವೇನು ಮತ್ತು ಇದರ ಹಿಂದೆ ನಿರ್ಲಕ್ಷ್ಯವಿದೆಯೇ ಎಂಬುದನ್ನು ಪತ್ತೆಹಚ್ಚಲು ಉತ್ತರ ಪ್ರದೇಶದ ಸರ್ಕಾರ, ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿದೆ. ಏಳು ದಿನಗಳೊಳಗೆ ವರದಿ ನೀಡುವಂತೆ ತನಿಖಾ ತಂಡಕ್ಕೆ ಸರ್ಕಾರ ಸೂಚನೆ ನೀಡಿದೆ. (ಏಜೆನ್ಸಿಸ್)

Leave a Comment

Your email address will not be published. Required fields are marked *