Ad Widget .

ಉಪ್ಪಿನಂಗಡಿ: ನೆಲ್ಯಾಡಿಯಲ್ಲಿ ಡಿವೈಡರ್ ಗೆ ಗುದ್ದಿದ ಕಾರು; ಓರ್ವ ಸಾವು

ಸಮಗ್ರ ನ್ಯೂಸ್: ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿ 75ರ ದಕ್ಷಿಣ ಕನ್ನಡದ ನೆಲ್ಯಾಡಿಯಲ್ಲಿ ಕಾರು ಅಪಘಾತಕ್ಕೀಡಾಗಿ ಓರ್ವ ಸಾವನ್ನಪ್ಪಿದ್ದಾರೆ.

Ad Widget . Ad Widget .

ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಕಾರೊಂದು ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರೋರ್ವರು ಮೃತಪಟ್ಟಿದ್ದಾರೆ. ಮೃತರು ಕುಂಬ್ರ ನಿವಾಸಿ ಅರಿಯಡ್ಕ ಗ್ರಾಮದ ಪಯಂದೂರು ನಿವಾಸಿ ಜಗದೀಶ್ (26) ಎಂದು ಗುರುತಿಸಲಾಗಿದೆ. ಕಾರು ಚಾಲಕ ಸಚಿನ್ ಸಣ್ಣ ಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.

Ad Widget . Ad Widget .

ಇವರನ್ನು ಒಳಗೊಂಡ ಸ್ನೇಹಿತರ ತಂಡ 5 ಕಾರುಗಳಲ್ಲಿ ಶಿರಾಡಿ ಗಡಿ ದೇವಸ್ಥಾನಕ್ಕೆ ಹೋಗಿದ್ದು, ಪೂಜೆ ಮುಗಿಸಿ ಹಿಂತಿರುಗಿ ಬರುವಾಗ ಈ ಅವಘಡ ಸಂಭವಿಸಿದೆ. ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *