Ad Widget .

ಅಪ್ಪಾ.. ಅಪ್ಪಾ.. ಮೊಬೈಲ್ ಕೊಡಿಸಪ್ಪಾ ಎಂದು ಕೇಳಿದ 14 ವರ್ಷದ ಮಗನ ಕಥೆಯನ್ನೇ ಮುಗಿಸಿದ ಅಪ್ಪ!

ಸಮಗ್ರ ನ್ಯೂಸ್:ಅಪ್ಪಾ.. ಅಪ್ಪ.. ನಂಗೆ ನೀನು ಹೊಸ ಮೊಬೈಲ್ ಕೊಡಿಸಪ್ಪಾ.. ಇಲ್ಲ, ಮನೆಯಲ್ಲಿರುವ ಹಳೆಯ ಮೊಬೈಲ್ ಅನ್ನೇ ರಿಪೇರಿ ಮಾಡಿಸು ಅಪ್ಪಾ.. ಎಂದು ಕೇಳಿದ 14 ವರ್ಷದ ಮಗನನ್ನು ನಿಷ್ಕರುಣಿ ತಂದೆ, ಮಗನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿನಗರದಲ್ಲಿ ನಿನ್ನೆ ತಡರಾತ್ರಿ ವೇಳೆ ಈ ನಡೆದಿದೆ. ತೇಜಸ್ (14) ತಂದೆಯಿಂದಲೇ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಮಗ ಆಗಿದ್ದಾನೆ.

Ad Widget . Ad Widget .

ಈ ಘಟನೆ ಕುರಿತಂತೆ ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಆಗಿದೆ.ಇಲ್ಲಿ ಮಗನ ಜೀವ ತೆಗೆದಿದ್ದು ಸಣ್ಣ ವಿಚಾರ ಮಾತ್ರವಲ್ಲ ಮದ್ಯ ಸೇವನೆ ಅಮಲಿನಲ್ಲಿ, ಕೋಪದ ಕೈಗೆ ಬುದ್ದಿ ಕೊಟ್ಟು ಮನಸೋ ಇಚ್ಛೆ ಹಲ್ಲೆ ಮಾಡಿದ್ದರಿಂದಲೇ ಇಲ್ಲಿ ಮಗನ ಪ್ರಾಣಪಕ್ಷಿ ಹಾರಿ ಹೋಗಿದೆ.ಆರೋಪಿ ರವಿ ಕುಮಾರ್ ಬೆಂಗಳೂರಿನಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಾ ಬಂದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದನು.

Ad Widget . Ad Widget .

ಅಪ್ಪಾ.. ನನ್ನ ಎಲ್ಲ ಫ್ರೆಂಡ್ಸ್ ಬಳಿ ಮೊಬೈಲ್ ಇದೆ. ನೀನು ನನಗೆ ಹೊಸ ಫೋನ್ ಕೊಡಿಸು ಎಂದಿದ್ದಾನೆ. ನಿನಗೆ ಹೊಸ ಫೋನ್ ಕೊಡಿಸಲು ಆಗದಿದ್ದರೆ, ಮನೆಯಲ್ಲಿ ಒಂದು ಹಳೆಯ ಫೋನ್ ಇದೆಯಲ್ಲ ಅದನ್ನಾದರೂ ರಿಪೇರಿ ಮಾಡಿಸಿ ಕೊಡು ಎಂದು ಕೇಳಿದ್ದಾನೆ. ಅಪ್ಪ ಇದಕ್ಕೆ ಸೊಪ್ಪು ಹಾಕದಿದ್ದಾಗ, ಮೊಬೈಲ್ ರಿಪೇರಿ ಮಾಡಿಸು ಅಂತ ಮಗ ತೇಜಸ್ ಹಠ ಮಾಡಲು ಆರಂಭಿಸಿದ್ದಾನೆ.ಕೆಲಸದಿಂದ ತನಗೆ ಬರುವ ಸ್ವಲ್ಪ ಆದಾಯದಿಂದ ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟವಾಗಿರುವಾಗ ಇನ್ನು ಮಗನ ಇಷ್ಟಗಳನ್ನು ಈಡೇರಿಸಲು ಅಪ್ಪನಿಗೆ ಸುತಾರಾಂ ಇಷ್ಟವಿರಲಿಲ್ಲ.

ಹೀಗಾಗಿ, ರವಿಕುಮಾರ್ ಕೆಲಸ ಮುಗಿಸಿ ಮನೆಗೆ ಬರುವಾಗ ಕುಡಿದು ಬಂದು ಮಗನನ್ನು ಬೈಯುತ್ತಿದ್ದನು. ನಿನ್ನೆ ರಾತ್ರಿಯೂ ಕೂಡ ಮದ್ಯ ಸೇವಿಸಿ ಬಂದ ರವಿಕುಮಾರ್ ತನ್ನ ಮಗನಿಗೆ ಬೈಯಲು ಆರಂಭಿಸಿದ್ದಾನೆ. ನೀನು ಸರಿಯಾಗಿ ಓದಲ್ಲ, ಶಾಲೆಗೆ ಹೋಗಲ್ಲ, ಕೆಟ್ಟವರ ಸಹವಾಸ ಮಾಡ್ತೀಯಾ ಅಂತಾ ಗಲಾಟೆ ತೆಗೆದಿದ್ದಾರೆ.ಜೊತೆಗೆ, ನೀನು ಕೆಟ್ಟವರ ಸಂಘ ಮಾಡ್ತೀಯಾ, ಮೊಬೈಲ್ ಕೇಳೀಯಾ ಅಂತ ಮಗನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.ಆದರೆ, ಹೀಗೆ ಮಗನ ಮೇಲೆ ಹಲ್ಲೆ ಮಾಡುವಾಗ ಆತನನ್ನು ಬ್ಯಾಟ್‌ನಿಂದ ಥಳಿಸಿ ಗೋಡೆಗೆ ತಳ್ಳಿದ್ದಾನೆ.

ಮಗ ತೇಜಸ್ ಅಪ್ಪ ದೂಡಿದ ರಭಸಕ್ಕೆ ಗೋಡೆಗೆ ಹೋಗಿ ತಲೆ ಹೊಡೆದುಕೊಂಡು ಅಲ್ಲಿಯೇ ರಕ್ತಸ್ರಾವ ಉಂಟಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದ ತಕ್ಷಣ ಮನೆಯವರು ಕೂಡಲೇ ಆತನನ್ನು ದಾಖಲು ಮಾಡಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಗ ತೇಜಸ್ ಸಾವಿಗೀಡಾಗಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಮೃತ ಬಾಲಕನ ತಂದೆ ರವಿಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

Leave a Comment

Your email address will not be published. Required fields are marked *