ಅಪ್ರಾಪ್ತ ನವಜಾತ ಶಿಶುವಿಗೆ ಜನ್ಮನೀಡಿ, ಹತ್ಯೆ ಕೇಸ್: ತಾಯಿ, ಅಜ್ಜ, ಅಜ್ಜಿ ಅರೆಸ್ಟ್

ಸಮಗ್ರ ನ್ಯೂಸ್:ಅ.17 ರಂದು ಮಡಿಕೇರಿ ತಾಲೂಕಿನ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯೊಬ್ಬಳು ರಹಸ್ಯವಾಗಿ ಮಗುವಿಗೆ ಜನ್ಮ ನೀಡಿದ್ದಳು.ಮಗುವನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ನವಜಾತ ಶಿಶುವಿನ ತಾಯಿ, ಅಜ್ಜಿ ಹಾಗೂ ಅಜ್ಜನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Ad Widget ... ..

ಪ್ರಸೂತಿಯಾಗಿ 4 ದಿನ ಕಳೆದರೂ ನವಜಾತ ಶಿಶು ಕಂಡುಬಂದಿರಲಿಲ್ಲ. ಆಸ್ಪತ್ರೆಯಿಂದ ಆ ಶಿಶು ನಾಪತ್ತೆಯಾಗಿತ್ತು. ಮತ್ತೇ ಶಿಶುವಿನ ಮೃತದೇಹ ಗುಂಡಿಯಲ್ಲಿ ಪತ್ತೆಯಾಗಿತ್ತು.ಮೊದಲಿಗೆ ಹೆತ್ತಾಕೆಯೇ ಮಗುವನ್ನು ನಾಪತ್ತೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ನಂತರ ಅಜ್ಜಿಯೇ ಹೂತಿಟ್ಟಿದ್ದು ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ತಾಯಿ, ಅಜ್ಜಿ ಹಾಗೂ ಅಜ್ಜನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.ಇನ್ನೂ ಗರ್ಭಿಣಿಯಾಗಲು 14ವರ್ಷದ ಬಾಲಕ ಎಂದು ಬಾಲಕಿ ಆರೋಪಿಸಿದ್ದರಳು.

Ad Widget

ಈ ಸಂಬಂಧ ಹುಡುಗನ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇದೀಗ ತನಿಖೆ ಮಾಡುವ ಸಂದರ್ಭಗಳಲ್ಲಿ ಬಾಲಕಿಯ ಪೋಷಕರೇ ಮಗುವನ್ನು ಹತ್ಯೆ ಮಾಡಿರಬೇಕು ಎಂದು ಪೊಲೀಸರು ಅನುಮಾನಗೊಂಡು ಇದೀಗ ಅರೇಸ್ಟ್ ಮಾಡಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ.

Leave a Comment

Your email address will not be published. Required fields are marked *