Ad Widget .

ಉತ್ತರಪ್ರದೇಶ: ಸರ್ಕಾರಿ ಆಸ್ಪತ್ರೆಯಲ್ಲಿ ಭಾರೀ ಅಗ್ನಿದುರಂತ| 10 ನವಜಾತ ಶಿಶುಗಳು ಸಾವು

ಸಮಗ್ರ ನ್ಯೂಸ್: ಉತ್ತರಪ್ರದೇಶದ ಝಾನ್ಸಿಯ ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ವಾಡ್ 9ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 10 ಮಕ್ಕಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಆತಂಕ ಇದೆ.

Ad Widget . Ad Widget .

ಶುಕ್ರವಾರ ರಾತ್ರಿ 10.30ರ ವೇಳೆಗೆ ನವಜಾತ ಶಿಶುಗಳ ವಾರ್ಡ್‌ನಲ್ಲಿ ಸಿಲಿಂಡ‌ರ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಅವಘಡದ ಕುರಿತು ಎಚ್ಚರಿಕೆ ನೀಡಬೇಕಿದ್ದ ಅಲರಾಂ ಹೊಡೆಯದೇ ಇದ್ದ ಕಾರಣ ತಕ್ಷಣವೇ ರಕ್ಷಣಾ ಕಾರ್ಯ ಸಾಧ್ಯವಾಗಿಲ್ಲ.

Ad Widget . Ad Widget .

ಬಳಿಕ ಆಸ್ಪತ್ರೆ ಸಿಬ್ಬಂದಿ ಕೆಲ ಮಕ್ಕಳನ್ನು ಬೇರೆಡೆಗೆ ಸಾಗಿಸುವಲ್ಲಿ ಯಶಸ್ವಿಯಾದರೂ 10 ಮಕ್ಕಳು ಆ ಅದೃಷ್ಟವಿಲ್ಲದೇ ಅಲ್ಲೇ ಸಾವನ್ನಪ್ಪಿವೆ. ಈ ಮಕ್ಕಳೆಲ್ಲಾ ಬೆಂಕಿ/ ಉಸಿರುಕಟ್ಟಿ ಸಾವನ್ನಪ್ಪಿವೆ ಎಂದು ವೈದ್ಯರು ತಿಳಿಸಿದ್ದಾರೆ. ತಡರಾತ್ರಿವರೆಗೆ 35ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಲಾಗಿದೆ. 16 ಶಿಶುಗಳು ಗಾಯಗೊಂಡಿವೆ. ಎಂದು ವರದಿಗಳು ತಿಳಿಸಿವೆ.

ಬೆಂಕಿ ಸುದ್ದಿ ತಿಳಿಯುತ್ತಲೇ 6 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಘಟನೆ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಿಗ್ಧಮೆ ವ್ಯಕ್ತಪಡಿಸಿದ್ದಾರೆ. ಮಡಿದ ಮಕ್ಕಳ ಕುಟುಂಬ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

Leave a Comment

Your email address will not be published. Required fields are marked *