Ad Widget .

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ‘ಲಕ್ಷ್ಮೀ ನಿವಾಸ’ದ ಜಾಹ್ನವಿ | ಚಿನ್ನು ಮರಿ ಚಂದನಾ ಕೈಹಿಡಿಯುವ ವರನ್ಯಾರು ಗೊತ್ತೇ?

ಸಮಗ್ರ ನ್ಯೂಸ್: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮಿ ನಿವಾಸ’ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ಮಿಂಚುತ್ತಿರುವ ಚಂದನಾ ಅನಂತಕೃಷ್ಣ ಮದುವೆ ಆಗುತ್ತಿದ್ದಾರೆ. ರೀಲ್‌ನಲ್ಲಿ ಮದುವೆ ಆಗಿರುವ ಚಂದನಾ ಇದೀಗ ರಿಯಲ್ ಆಗಿ ಮದುವೆ ಆಗುತ್ತಿದ್ದಾರೆ.

Ad Widget . Ad Widget .

ಚಂದನಾ ಅನಂತಕೃಷ್ಣ ಮತ್ತು ಪ್ರತ್ಯಕ್ಷ್ ಇದೇ ನವೆಂಬರ್ 28ರಂದು ಮದುವೆ ಆಗುತ್ತಿದ್ದಾರೆ. ಭಾವಿ ಪತಿ ಪ್ರತ್ಯಕ್ಷ್‌ ಜೊತೆಗಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Ad Widget . Ad Widget .

ಕನ್ನಡ ಚಿತ್ರರಂಗದಲ್ಲಿ ಸಖತ್ ಹೆಸರು ಮಾಡಿದ್ದ ದಿವಂಗತ ನಟ ಉದಯ್ ಹುತ್ತಿನಗದ್ದೆ ಮತ್ತು ನಟಿ ಲಲಿತಾಂಜಲಿ ದಂಪತಿಯ ಜೇಷ್ಠ ಪುತ್ರನೇ ಪ್ರತ್ಯಕ್ಷ್.

ಅಗ್ನಿಪರ್ವ, ಶುಭ ವಿಲನ, ಜಯಭೇರಿ, ಉದ್ಭವ, ಅಮೃತ ಬಿಂದು, ಶಿವಯೋಗಿ ಅಕ್ಕಮಹಾದೇವಿ, ಉಂಡು ಹೋದ ಕೊಂಡು ಹೋದ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಉದಯ್ ನಟಿಸಿದ್ದರು.

ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿರು ನಟಿ ಲಲಿತಾಂಜಲಿ ಕಿನ್ನರಿ ಮತ್ತು ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಿದ್ದಾರೆ. ಹೀಗಾಗಿ ಚಂದನಾ ಕಲಾವಿದರ ಕುಟುಂಬವನ್ನು ಸೇರಿದ್ದಾರೆ.

Leave a Comment

Your email address will not be published. Required fields are marked *